Tag: Karavali

ಕರಾವಳಿ

ಪಾದೂರಿನಲ್ಲಿ ಚಿರತೆ ಹಾವಳಿ: ಜನರಲ್ಲಿ ಆತಂಕ

ಕಾಪು: ಮಜೂರು ಗ್ರಾ.ಪಂ. ವ್ಯಾಪ್ತಿಯ ಪಾದೂರು ಮತ್ತು ಹೇರೂರು ಪರಿಸರದಲ್ಲಿ ಚಿರತೆಯ ಹಾವಳಿ ಹೆಚ್ಚಿದ್ದು ಗ್ರಾಮಸ್ಥರು ತೀವ್ರ ಆತಂಕಿತರಾಗಿದ್ದಾರೆ. ಪಾದೂರು ಐಎಸ್‌ಪಿಆರ್‌ಎಲ್, ಸಿಎಸ್‌ಐ ಚರ್ಚ್, ಹೇರೂರು ಮತ್ತು ವಳದೂರುದಲ್ಲಿ ಚಿರತೆ ಓಡಾಡುತ್ತಿದ್ದು ಈ ಪರಿಸರದಲ್ಲಿ ಜನ ಓಡಾಡಲು ಹೆದರುವಂತಾಗಿದೆ.ಸೋಮವಾರ ರಾತ್ರಿ ಪಾದೂರು ಚರ್ಚ್ ಹಿಂಬದಿಯಲ್ಲಿರುವ ವಯೋವೃದ್ಧ ಜಾರ್ಜ್ ಬಂಗೇರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು ಭಯದಿಂದಲೇ ಮನೆಯವರು ರಾತ್ರಿಯಿಡೀ ನಿದ್ದೆ ಬಿಟ್ಟು ಎಚ್ಚರದಿಂದಲೇ ಕುಳಿತುಕೊಳ್ಳುವಂತಾಗಿತ್ತು. ಬುಧವಾರ ಬೆಳಿಗ್ಗೆ ಹೇರೂರು ನಿವಾಸಿ ವಿದ್ಯಾ ಪ್ರಭು ಅವರು ಹೂವು ಕೊಯ್ಯುತ್ತಿದ್ದಾಗ […]

ಕರಾವಳಿ ಮನೋರಂಜನೆ

ರವಿರಾಜ್ ಎಚ್ ಪಿ ಇವರಿಗೆ ಸಿಜಿಕೆ ರಂಗ ಪುರಸ್ಕಾರ-2024 (Udupi : CGK Ranga puraskar -2024 For Raviraj HP)

ರವಿರಾಜ್ ಎಚ್ ಪಿ ಇವರಿಗೆ ಸಿಜಿಕೆ ರಂಗ ಪುರಸ್ಕಾರ-2024 (Udupi) ಉಡುಪಿ: ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿ ಜಿ ಕೆ ರಂಗಪುರಸ್ಕಾರ’ -2024 ಕ್ಕೆ  ಉಡುಪಿ ಜಿಲ್ಲೆಯಿಂದ ನಟ, ನಿರ್ದೇಶಕ, ಸಂಘಟಕ ರವಿರಾಜ್ ಎಚ್ ಪಿ ಆಯ್ಕೆಯಾಗಿದ್ದಾರೆ. ರವಿರಾಜ್‌ರವರು ಕಳೆದ 30 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಟ ನಿರ್ದೇಶಕ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಟನೆಗೆ ಹಾಗೂ ನಿರ್ದೇಶನಕ್ಕೆ ರಾಜ್ಯ ಮಟ್ಟದ ಹಲವಾರು […]

social service

ಕೋಟತಟ್ಟು- ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ (Kota Thattu Annual General meeting of Sindhura Sanjeevini Okkuta)

ಕೋಟತಟ್ಟು– ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ದೇಶದ ಆರ್ಥಿಕತೆಗೆ ಸ್ತ್ರೀ ಬಲವರ್ಧನೆ ಅನಿವಾರ್ಯ– ರವೀಂದ್ರ ರಾವ್ (Kota) ಕೋಟ: ದೇಶದ ಆರ್ಥಿಕತೆಗೆ ಅನುಗುಣವಾಗಿ ದೇಶಾದ್ಯಂತ ಬೇರೆ ಬೇರೆ ರೀತಿಯಲ್ಲಿ ಸಂಜೀವಿನಿ ಸಂಘಗಳ ರಚನೆಗೊಂಡಿದೆ̤ ಈ ಮೂಲಕವೇ ಸ್ತ್ರೀ ಬಲವರ್ಧನೆ ಅನಿವಾರ್ಯತೆ ಎಂಬುವುದನ್ನು ಸಾಬೀತುಗೊಳಿಸಿದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಹೇಳಿದರು.   ಕೋಟತಟ್ಟು ಕಾರಂತ ಥೀಮ್ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಮಪಂಚಾಯತ್‌ನ ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ […]

PROBLEMS

(MLA visit to Nandikuru M 11 Company, Notice to solve the problem within 15 days)

 ನಂದಿಕೂರು ಎಂ11 ಕಂಪೆನಿಗೆ ಶಾಸಕರ ಭೇಟಿ 15 ದಿನಗಳೊಳಗೆ ಸಮಸ್ಯೆ ಪರಿಹರಿಸಲು ಸೂಚನೆ  (Padubidri) ಪಡುಬಿದ್ರಿ: ಇಲ್ಲಿನ ನಂದಿಕೂರಿನಲ್ಲಿರುವ ಒ11 ಇಂಡಸ್ಟ್ರೀಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆಯಲ್ಲಿ ಉದ್ಯೋಗ ನೀಡಬೇಕು ಮತ್ತು ಕಂಪನಿಯ ಆಸುಪಾಸಿನ ಮನೆಗಳ ಬಾವಿ ನೀರು ಕಲುಷಿತವಾಗುತ್ತಿದ್ದು, ಈ ಬಗ್ಗೆ 15 ದಿನಗಳ ಒಳಗಾಗಿ ಸಮಸ್ಯೆಗಳನ್ನು ಪರಿಹರಿಸುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಂಪೆನಿ ಅಧಿಕಾರಿಗಳಿಗೆ ಸೂಚಿಸಿದರು.  ಇಂದು ನಂದಿಕೂರಿನಲ್ಲಿರುವ ಒ11 ಇಂಡಸ್ಟ್ರೀಸ್‌ ಪ್ರೈವೇಟ್  ಲಿಮಿಟೆಡ್ ಕಂಪನಿಗೆ ಭೇಟಿ ನೀಡಿದರು. […]

fastival ಕರಾವಳಿ

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ‘ಈದುಲ್ ಅಝಾ’ (ಬಕ್ರೀದ್) ಆಚರಣೆ (Celebration of Id ul Azza (Bakrid) across Udupi Dist)

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ‘ಈದುಲ್ ಅಝಾ’ (ಬಕ್ರೀದ್) ಆಚರಣೆ (Udupi) ಉಡುಪಿ: ಜಿಲ್ಲೆಯಾದ್ಯಂತ ಈದುಲ್ ಅಝಾ(ಬಕ್ರೀದ್) ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಮುಸ್ಲಿಂ ಬಾಂಧವರು ಆಚರಿಸಿದರು. ಉಡುಪಿ ನಗರ, ಕಾಪು, ಉಚ್ಚಿಲ, ಬ್ರಹ್ಮಾವರ, ಕುಂದಾಪುರ ಬೈಂದೂರು, ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು.   ಮುಸ್ಲಿಮರು ಬೆಳಗ್ಗೆ ಹೊಸ ಬಟ್ಟೆ ಧರಿಸಿಕೊಂಡು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ […]

ಜೀವನಶೈಲಿ

ಬ್ರಹ್ಮಾವರ: ನಿರ್ಮಲ ಶಾಲೆಯಲ್ಲಿ ಸೌಹಾರ್ದ ಬಕ್ರೀದ್ ಆಚರಣೆ (Bakrid celebration at Nirmala school Brahmavara)

ಬ್ರಹ್ಮಾವರ: ನಿರ್ಮಲ ಶಾಲೆಯಲ್ಲಿ ಸೌಹಾರ್ದ ಬಕ್ರೀದ್ ಆಚರಣೆ (Brahmavara) ಬ್ರಹ್ಮಾವರ: ಸೌಹಾರ್ದತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಪರಸ್ಪರ ಹಬ್ಬಗಳ ಬಗ್ಗೆ ತಿಳಿಸಿಕೊಡುವುದು ಅನಿವಾರ್ಯವಾಗಿದೆ. ಪರಸ್ಪರ ಅರಿತಾಗ ಮಾತ್ರ ಸಂಶಯಗಳಿಗೆ ಆಸ್ಪದವಿರುವುದಿಲ್ಲ ಎಂದು ಪತ್ರಕರ್ತ ಶಾರೂಕ್ ತೀರ್ಥಹಳ್ಳಿ ಹೇಳಿದರು.  ಬ್ರಹ್ಮಾವರದ ನಿರ್ಮಾಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳೊಂದಿಗೆ ಬಕ್ರೀದ್ ಸೌಹಾರ್ದ ಸಂದೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ತ್ಯಾಗ ಬಲಿದಾನದ ಸಂಕೇತವೇ ಬಕ್ರೀದ್ ನ ಮುಖ್ಯ ಸಂದೇಶ ಎಂದು ಹಬ್ಬದ ಇತಿಹಾಸವನ್ನು […]

PROBLEMS

ಉದ್ಯಾವರ ಪಡುಕರೆ : ಕಡಲ ಅಬ್ಬರದ ಹೆದ್ದೆರೆಗಳಿಗೆ ಕಲ್ಲಿನ ತಡೆಗೋಡೆ (Udyavara padukare; A stone barrier in to the sea waves)

ಉದ್ಯಾವರ ಪಡುಕರೆ : ಕಡಲ ಅಬ್ಬರದ ಹೆದ್ದೆರೆಗಳಿಗೆ ಕಲ್ಲಿನ ತಡೆಗೋಡೆ  ಕಡಲ ತಡಿಯ ನಿವಾಸಿಗಳಿಂದ ನೆಮ್ಮದಿಯ ನಿಟ್ಟುಸಿರು (ಕೃಪೆ: ವಿಜ್ಜು, ಉಚ್ಚಿಲ) (Udyavara) ಉದ್ಯಾವರ: ಉದ್ಯಾವರ ಪಡುಕರೆ ಕಡಲ ತಟದ ಪ್ರದೇಶದಲ್ಲಿ ಮಳೆಗಾಲದಲ್ಲಿ ಪ್ರಾಣಾತಂಕವನ್ನು ಒಡ್ಡುತ್ತಾ, ಮನೆಯನ್ನೇ ಕೆಡವಲು ರಸ್ತೆಯನ್ನೇ ಆಪೋಷಣೆಗೈದು ರೋಶಾವೇಷದಿಂದ ಮುನ್ನುಗ್ಗಿ ಬರುತ್ತಿದ್ದ ಕಡಲ ಅಬ್ಬರದ ಹೆದ್ದೆರೆಗಳು ಅದೆಷ್ಟೋ ದಿನಗಳನ್ನು ಕಡಲ ತಡಿಯ ನಿವಾಸಿಗಳನ್ನು ನಿದ್ರೆ ಇಲ್ಲದೆ ಕಳೆಯುವಂತೆ ಮಾಡಿತ್ತು. ಮನೆ ಬಿಟ್ಟು ಶಾಲೆಯಲ್ಲಿ ಆಶ್ರಯ ಪಡೆಯುವಂತೆ ಮಾಡಿತ್ತು. ದಿನನಿತ್ಯ ಆತಂಕ ಮಡುಗಟ್ಟಿತ್ತು. ಮೊದಲು […]

ಅಪರಾಧ ಮಂಗಳೂರು

ದ.ಕ ದಲ್ಲಿ ದುಬಾರಿ ಬೈಕ್ ಗಳ ಸರಣಿ ಕಳ್ಳತನ

ಮಂಗಳೂರು ಮತ್ತು ಮೂಲ್ಕಿ ಯಲ್ಲಿ ಕಳ್ಳತನ: ಉಡುಪಿಗೆ ಪರಾರಿ ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಒಂದೇ ತಂಡ ದುಬಾರಿ ಬೈಕ್ ಗಳ ಸರಣಿ ಕಳ್ಳತನ ನಡೆಸಿದ್ದು ರಾ.ಹೆ 66 ರ ಮೂಲಕ ಉಡುಪಿ ಜಿಲ್ಲೆಯ ಊರುಗಳಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ದ.ಕ ಜಿಲ್ಲೆಯ ಮೂಲ್ಕಿ ಮತ್ತು ಮಂಗಳೂರಿನಿಂದ ಎರಡು ಆರ್15 ಬೈಕ್ ಕಳವು ಮಾಡಿರುವ ಒಂದೇ ತಂಡ ಉಡುಪಿ ಜಿಲ್ಲೆಯ ಕಾಪು ಮಜೂರು ಮತ್ತು ಉದ್ಯಾವರ ಕಡೆ ಸಾಗಿದ್ದು ನಿಪುಣ ಕಳ್ಳತನ ಗ್ಯಾಂಗ್ […]

ರಾಜಕೀಯ

ಉಡುಪಿ : ಶ್ರೀರಾಮಸೇನೆಯಿಂದ ವಿವಾಹ ನೋಂದಣಾಧಿಕಾರಿಯವರಿಗೆ ಮನವಿ (Appeal from Sri Rama Sena to marriage registrar)

(Udupi) ಉಡುಪಿ : ಶ್ರೀರಾಮಸೇನೆಯಿಂದ ವಿವಾಹ ನೋಂದಣಾಧಿಕಾರಿಯವರಿಗೆ ಮನವಿ (Udupi) ಉಡುಪಿ: ಕರ್ನಾಟಕದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಲವ್ ಜಿಹಾದ್ ವಿರುದ್ಧ ಹಿಂದೂ ಸಹೋದರಿಯರ ರಕ್ಷಣೆಗಾಗಿ ಶ್ರೀರಾಮ ಸೇನೆಯು ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ಸಂತ್ರಸ್ತರ ಧ್ವನಿಯಾಗಿ ಕಾರ್ಯ ನಿರ್ವಹಿಸುವ “ಸಹಾಯ ವಾಣಿ” ಉದ್ಘಾಟನೆ ಇದೇ ಮೇ 29 ರಂದು ಹುಬ್ಬಳ್ಳಿ ಕೇಂದ್ರೀಕೃತವಾಗಿ ರಾಜ್ಯದ 6  ಕಡೆಗಳಲ್ಲಿ ಉದ್ಘಾಟನೆಗೊಳ್ಳಲಿದೆ.  ಇದರ ಪೂರ್ವಭಾವಿಯಾಗಿ, ಅಂತರ ಧರ್ಮದ ವಿವಾಹವು ಕೋಮು ಸ್ವರೂಪ ಪಡೆಯುತ್ತಿದ್ದು ಗಲಭೆ, ಸಾಮರಸ್ಯ ಹಾಳು ಮಾಡುತ್ತಿರುವ ಘಟನೆಗಳು ರಾಜ್ಯದಲ್ಲಿ ಜರುಗುತ್ತಿವೆ. […]

ಕರಾವಳಿ ಜೀವನಶೈಲಿ

ಪಲಿಮಾರಿನಲ್ಲಿ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ “ವಿಹಿತಮ್” (Palimaru: Vihitham Brahmin Youth Conference)

ಪಲಿಮಾರಿನಲ್ಲಿ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ “ವಿಹಿತಮ್”  ತಂದೆ ತಾಯಿಗಳು ಕೇವಲ ವಿದ್ಯೆ, ಉದ್ಯೋಗದ ದೊಡ್ಡ ನಿರೀಕ್ಷೆಯನ್ನಿಟ್ಟು ಬೆಳೆಸಿರುವುದೇ ಬ್ರಾಹ್ಮಣ ಸಮಾಜದ ಪ್ರಸ್ತುತ ಸಂಧಿಗ್ಧತೆಗೆ ಕಾರಣ: ಪಲಿಮಾರು ಶ್ರೀ (Palimaru) ಪಲಿಮಾರು: ಮಕ್ಕಳಿಗೆ ಯಾವ ಹಂತದಲ್ಲಿಯೂ ಜವಾಬ್ದಾರಿಯನ್ನು ಕೊಡದೆ ಹೆತ್ತ ತಂದೆ ತಾಯಿಗಳು ಕೇವಲ ವಿದ್ಯೆ, ಉದ್ಯೋಗದ ದೊಡ್ಡ ನಿರೀಕ್ಷೆಯನ್ನಿಟ್ಟು ಬೆಳೆಸಿರುವುದೇ ಬ್ರಾಹ್ಮಣ ಸಮಾಜದ ಪ್ರಸ್ತುತ ಸಂಧಿಗ್ಧತೆಗೆ ಕಾರಣವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೇಸರ ವ್ಯಕ್ತಪಡಿಸಿದರು.  ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವದ […]

eMedia Kannada  @2025. All Rights Reserved.