Tag: uchila mahalaxmi temple

social service ವಿಡಿಯೋ

 ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ (Handover of electric buggy vehicle to Uchila Sri Mahalaxmi Temple)

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ (Uchila) ಉಚ್ಚಿಲ : ಕರ್ನಾಟಕ ಬ್ಯಾಂಕಿನ ಸಿ.ಎಸ್.ಆರ್ ಅನುದಾನದಿಂದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ  ಸುಮಾರು 5,20,750 ಮೊತ್ತದ 6 ಆಸನಗಳ ವಿದ್ಯುತ್ ಚಾಲಿತ ವಾಹನವನ್ನು ಗುರುವಾರ ಸಂಜೆ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಮೊಗವೀರ ಮುಂದಾಳು, ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರದ ರುವಾರಿ ನಾಡೋಜಾ ಡಾ. ಜಿ ಶಂಕರ್‌ರವರಿಗೆ ಕರ್ನಾಟಕ ಬ್ಯಾಂಕಿನ ಉಡುಪಿ ರೀಜನಲ್ ಹೆಡ್  ವಾದಿರಾಜ ಭಟ್‌ರವರು ವಾಹನದ ಕೀಲಿಕೈಯನ್ನು ಹಸ್ತಾಂತರಿಸಿದರು.  ಮೊದಲಿಗೆ ದೇವಳದ ಅರ್ಚಕ ವೇದಮೂರ್ತಿ ವಿಷ್ಣುಮೂರ್ತಿ […]

fastival ಧಾರ್ಮಿಕ ವಿಡಿಯೋ

 ಉಚ್ಚಿಲ ದಸರಾ – 2024 ಆಮಂತ್ರಣ ಪತ್ರಿಕೆ ಬಿಡುಗಡೆ (Uchila Dasara -2024 Invitation letter released)

ಉಚ್ಚಿಲ ದಸರಾ – 2024 ಆಮಂತ್ರಣ ಪತ್ರಿಕೆ ಬಿಡುಗಡೆ (Uchila) ಉಚ್ಚಿಲ : ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ “ಉಚ್ಚಿಲ ದಸರಾ -2024” ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪ್ರಾಂಗಣದಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.  ಮೊಗವೀರ ಸಮಾಜದ ನಾಯಕ ನಾಡೋಜ ಡಾ. ಜಿ. ಶಂಕರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.  ಮೊದಲಿಗೆ ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ. ರಾಘವೇಂದ್ರ ಉಪಾಧ್ಯಾಯರವರು ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿ, ಸಾಮೂಹಿಕ […]

ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಪನ್ನ(Vara Mahalaxi Pooja for Uchila Mahalaxmi Temple).

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಪನ್ನ. (Uchila) ಉಚ್ಚಿಲ: ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಸಂಪನ್ನಗೊಂಡಿತು.  ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆ ವಿ ರಾಘವೇಂದ್ರ ಉಪಾಧ್ಯಾಯ ಹಾಗೂ ಋತ್ವಿಜರು ಪೂಜಾ ವಿಧಿ ವಿಧಾನ ನೆರವೇರಿಸಿದರು.  ನೂರಾರು ಮಹಿಳೆಯರು ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದರು.  ಈ ಸಂದರ್ಭ ಮೊಗವೀರ ಮುಂದಾಳು ನಾಡೋಜಾ ಡಾ. ಜಿ ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ […]

ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ದಂಪತಿ ಭೇಟಿ (Former Union Minister Suresh prabhu couple visit Uchila Mahalaxmi Temple)

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ದಂಪತಿ ಭೇಟಿ (Uchila) ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ಹಾಗೂ ಶ್ರೀಮತಿ ಉಮಾ ಸುರೇಶ್ ಪ್ರಭುರವರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಶ್ರೀ ಕ್ಷೇತ್ರದ ವತಿಯಿಂದ ಮೊಗವೀರ ಮುಂದಾಳು ನಾಡೋಜ ಡಾ. ಜಿ. ಶಂಕರ್ ರವರು ಶಾಲು ಹೊದಿಸಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ಕೆವಿ ರಾಘವೇಂದ್ರ ಉಪಾಧ್ಯಾಯರವರು ವಿಷೇಶ ಪೂಜೆ ಸಲ್ಲಿಸಿ […]

fastival

ಈ ಬಾರಿ ಉಚ್ಚಿಲ ದಸರಾ ಉತ್ಸವ-2024 (ಅಕ್ಟೋಬರ್ 3-12)ಅಭೂತಪೂರ್ವವಾಗಿ ಅಚರಣೆ (Uchila Dasara- 2024 (Oct 3 to 12): Celebrated is an unprecedented way)

ಈ ಬಾರಿ ಉಚ್ಚಿಲ ದಸರಾ ಉತ್ಸವ-೨೦೨೪ (ಅಕ್ಟೋಬರ್ 3-12)ಅಭೂತಪೂರ್ವವಾಗಿ ಅಚರಣೆ  ಭಕ್ತಾದಿಗಳ ಸಹಕಾರಕ್ಕೆ ನಾಡೋಜ ಡಾ.ಜಿ. ಶಂಕರ್ ಮನವಿ (Uchila)  ಉಚ್ಚಿಲ; ಕಳೆದ 2 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ವೈಭವೋಪೇತ ಹಾಗೂ ಶಿಸ್ತುಬದ್ಧವಾಗಿ ನಡೆದ ಉಚ್ಚಿಲ ದಸರಾವನ್ನು ಈ ಬಾರಿ(ಅಕ್ಟೋಬರ್ 3-12) ಸರ್ವರ ಸಹಕಾರದೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ದಸರಾ ಯಶಸ್ಸಿಗೆ ಭಕ್ತಾದಿಗಳ ಸಹಕಾರ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ […]

ಧಾರ್ಮಿಕ

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಸರ ಕೊಡುಗೆ (Donation of 408 Grams Chain to Uchila Mahalaxmi Temple)

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಸರ ಕೊಡುಗೆ (Uchila) ಉಚ್ಚಿಲ : ಶ್ರೀ ಕ್ಷೇತ್ರ ಉಚ್ಚಿಲ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಲಕ್ಷ್ಮೀ ಸರವನ್ನು ಶುಕ್ರವಾರ ಒಪ್ಪಿಸಲಾಯಿತು. ದ.ಕ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭಕ್ತರ ಹರಕೆ ರೂಪದಲ್ಲಿ ಬಂದ ವಿವಿಧ ಬಂಗಾರದ ಒಡವೆಗಳನ್ನು ಒಗ್ಗೂಡಿಸಿ ಸರವನ್ನು ಮಾಡಿಸಲಾಗಿತ್ತು. ಮೊಗವೀರ ಸಮಾಜದ ಮುಂದಾಳು  ಡಾ. ಜಿ. ಶಂಕರ್, ದ. ಕ. ಮೊಗವೀರ ಮಹಾಜನ ಸಂಘದ […]

ಧಾರ್ಮಿಕ ವಿಡಿಯೋ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರಾತ್ರಿ ರಥೋತ್ಸವ ಸಂಪನ್ನ (Uchila Mahalaxmi Temple Rathothsava)

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರಾತ್ರಿ ರಥೋತ್ಸವ ಸಂಪನ್ನ ಉಚ್ಚಿಲ : ಮೊಗವೀರ ಮಹಾಜನ ಸಂಘದ ಆಧೀನದಲ್ಲಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರಾತ್ರಿ ರಥೋತ್ಸವ ಮಂಗಳವಾರ ರಾತ್ರಿ ಸಂಪನ್ನಗೊಂಡಿತು.  ಮಧ್ಯಾಹ್ನ ರಥಾರೋಹಣ ಹಾಗೂ ರಾತ್ರಿ ರಥಾವರೋಹಣ ನೆರೆದ ಭಕ್ತರ ಮನಸೂರೆಗೊಂಡಿತು. ಈ ಸಂದರ್ಭ ಮೊಗವೀರ ಮುಂದಾಳು ಡಾ. ಜಿ ಶಂಕರ್ (Nadoja DR G Shankar), ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ(Jaya C Kotian), ಜೀರ್ಣೋದ್ಧಾರ ಸಮಿತಿ […]

ಧಾರ್ಮಿಕ ವಿಡಿಯೋ

  ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ (Uchila Mahalaxmi Temple Rathothsava)

  ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ (Uchila) ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀಮನ್ಮಹಾರಥೋತ್ಸವವು  ಇಂದು ವಿವಿಧ ಪೂಜಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯುಕ್ತವಾಗಿ ಶ್ರೀ ಸನ್ನಿದಿಯಲ್ಲಿ ಸಂಪನ್ನಗೊಂಡಿತು.   ದೇವಳದ ರಥೋತ್ಸವ ಕಾರ್ಯಕ್ರಮ ಮುಂದಿನ ಶುಕ್ರವಾರದವರೆಗೆ ನೆರವೇರಲಿದೆ.   ದೇವಸ್ಥಾನದ ತಂತ್ರಿವರ್ಯರಾದ ವೇದಮೂರ್ತಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಯವರ ಪೌರೋಹಿತ್ಯದಲ್ಲಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ಕೆವಿ ವಿಷ್ಣುಮೂರ್ತಿ ಉಪಾಧ್ಯಾಯರವರ […]

ಧಾರ್ಮಿಕ

ಮಾ.23-28: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ

ಮಾ.23-28: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ (ಚಿತ್ರ ಕೃಪೆ: ಸಚಿನ್‌ ಉಚ್ಚಿಲ) (Uchila) ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀಮನ್ಮಹಾರಥೋತ್ಸವವು ಮಾರ್ಚ್ 23-28ರವರೆಗೆ ವಿವಿಧ ಪೂಜಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯುಕ್ತವಾಗಿ ಶ್ರೀ ಸನ್ನಿದಿಯಲ್ಲಿ ಸಂಪನ್ನಗೊಳ್ಳಲಿದೆ. ಮಾರ್ಚ್ 26 ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಮಹಾಲಕ್ಷ್ಮೀ ರಥಾರೋಹಣ, ಮಧ್ಯಾಹ್ನ 12-30ರಿಂದ 4 ಗಂಟೆವರೆಗೆ ಮಹಾ ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ […]

ಧಾರ್ಮಿಕ ವಿಡಿಯೋ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ (Uchila Sri Mahalaxmi Temple Dhvajarohana)

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ (Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಭಾನುವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.   ದೇವಳದ ರಥೋತ್ಸವ ಕಾರ್ಯಕ್ರಮ ಶನಿವಾರದಿಂದ ಮುಂದಿನ ಶುಕ್ರವಾರದವರೆಗೆ ನೆರವೇರಲಿದೆ. ದೇವಸ್ಥಾನದ ತಂತ್ರಿವರ್ಯರಾದ ವೇದಮೂರ್ತಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಯವರ ಪೌರೋಹಿತ್ಯದಲ್ಲಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ಕೆವಿ ವಿಷ್ಣುಮೂರ್ತಿ ಉಪಾಧ್ಯಾಯರವರ ನೇತೃತ್ವದಲ್ಲಿ ಋತ್ವಿಜರ ಉಪಸ್ಥಿತಿಯಲ್ಲಿ […]

eMedia Kannada  @2025. All Rights Reserved.