ಇಂದು ಮಾನ್ಸೂನ್ ಆಗಮನದ ನಿರೀಕ್ಷೆ! ಹೊಸ ಮಾರ್ಗಸೂಚಿ ಬಿಡುಗಡೆ (Expecting the arrival of mansoon today ! Release of new guidelines)
ಇಂದು ಮಾನ್ಸೂನ್ ಆಗಮನದ ನಿರೀಕ್ಷೆ! ಹೊಸ ಮಾರ್ಗಸೂಚಿ ಬಿಡುಗಡೆ (Bengaluru) ಬೆಂಗಳೂರು: ನೈಋತ್ಯ ಮುಂಗಾರು ಕೇರಳಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಜೂನ್ ಎರಡನೇ ತಾರೀಕಿನಂದು ಮುಂಗಾರು ಪ್ರಾರಂಭ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೂನ್ 5-6 ರ ವೇಳೆಗೆ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹೊಂದಿತ್ತು. ಐಎಂಡಿ, ಬೆಂಗಳೂರಿನ ಹವಾಮಾನ ತಜ್ಞ ಸಿಎಸ್ ಪಾಟೀಲ್ ಮಾಹಿತಿ ನೀಡಿ, ಕರ್ನಾಟಕದಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. […]









