ಕಾಪು ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ಲಕ್ಷ ಅನುದಾನ ವಿತರಣೆ
(Kaup) ಕಾಪು: ಕಾಪು ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮೂರು ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು, ಡಿ ಡಿ ಯನ್ನು ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ನವೀನ್ ಅಮಿನ್ ಶಂಕರಪುರ, ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಮಜೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ದೇವಸ್ಥಾನದ ಆಡಳಿತ ಸಮಿತಿ ಪದ್ಮನಾಭ ಶ್ಯಾನುಭೋಗ, ನಾಗಭೂಷಣ್ ರಾವ್, ರವಿರಾಜ ಶೆಟ್ಟಿ, ಶ್ರೀಧರ ಶೆಟ್ಟಿಗಾರ್, ನಿರ್ಮಲ್ ಕುಮಾರ್ ಹೆಗ್ಡೆ, ಪ್ರಜ್ಞಾ ಮಾರ್ಪಳ್ಳಿ, ಗೋಪಾಲ್ ನಾಯಕ್, ಜನಜಾಗೃತಿ ವೇದಿಕೆಯ ಸದಸ್ಯರಾದ ಜನಾರ್ಧನ ಆಚಾರ್ಯ ಕಳತ್ತೂರು, ಪಂಚಾಯತಿ ಸದಸ್ಯರಾದ ಭಾಸ್ಕರ, ಶ್ರೀಮತಿ ಶರ್ಮಿಳ ಆಚಾರ್ಯ, ಮಜೂರು ಒಕ್ಕೂಟದ ಅಧ್ಯಕ್ಷ ಪ್ರಸಾದ್ ಆಚಾರ್ಯ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಯವರು ಉಪಸ್ಥಿತರಿದ್ದರು.

