• Home  
  •  ಕಾಪು : ಮಹಾದೇವಿ ಶಾಲಾ ಮೈದಾನದಲ್ಲಿ ಯುವ ಬಂಟರ ಕ್ರೀಡಾಕೂಟ (Kapu: Yuva Bunts Sports Meet at Mahadevi School Grounds)
- ಕ್ರೀಡೆ

 ಕಾಪು : ಮಹಾದೇವಿ ಶಾಲಾ ಮೈದಾನದಲ್ಲಿ ಯುವ ಬಂಟರ ಕ್ರೀಡಾಕೂಟ (Kapu: Yuva Bunts Sports Meet at Mahadevi School Grounds)

Share: ಕಾಪು : ಮಹಾದೇವಿ ಶಾಲಾ ಮೈದಾನದಲ್ಲಿ ಯುವ ಬಂಟರ ಕ್ರೀಡಾಕೂಟ ಕ್ರೀಡಾಕೂಟ ಉದ್ಘಾಟಿಸಿದ ಉದ್ಯಮಿ ಉದಯ ಸುಂದರ ಶೆಟ್ಟಿ (Kaup) ಕಾಪು : ಕಾಪು ಬಂಟರ ಸಂಘದ ಆಶ್ರಯದಲ್ಲಿ ಬಂಟ್ಸ್‌ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಯುವ ಬಂಟರ ಸಂಘದ ಆಯೋಜನೆಯಲ್ಲಿ ಸಮಾಜ ರತ್ನ ಕರಂದಾಡಿ ಲೀಲಾಧರ ಶೆಟ್ಟಿಯವರ ಸವಿ ನೆನಪಿಗಾಗಿ ಯುವ ಬಂಟರ ಕ್ರೀಡಾಕೂಟ ಕಾಪು ಮಹಾದೇವಿ ಶಾಲಾ ಮೈದಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.  ಕ್ರೀಡಾಕೂಟವನ್ನು ಮುಂಬೈ ಸಾಯಿ ಪ್ಯಾಲೇಸ್ ಗ್ರೂಫ್ ಆಫ್ ಹೋಟೇಲ್ಸ್ ಇದರ ಮಾಲಕ […]

(Kaup) ಕಾಪು : ಕಾಪು ಬಂಟರ ಸಂಘದ ಆಶ್ರಯದಲ್ಲಿ ಬಂಟ್ಸ್‌ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಯುವ ಬಂಟರ ಸಂಘದ ಆಯೋಜನೆಯಲ್ಲಿ ಸಮಾಜ ರತ್ನ ಕರಂದಾಡಿ ಲೀಲಾಧರ ಶೆಟ್ಟಿಯವರ ಸವಿ ನೆನಪಿಗಾಗಿ ಯುವ ಬಂಟರ ಕ್ರೀಡಾಕೂಟ ಕಾಪು ಮಹಾದೇವಿ ಶಾಲಾ ಮೈದಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.

 ಕ್ರೀಡಾಕೂಟವನ್ನು ಮುಂಬೈ ಸಾಯಿ ಪ್ಯಾಲೇಸ್ ಗ್ರೂಫ್ ಆಫ್ ಹೋಟೇಲ್ಸ್ ಇದರ ಮಾಲಕ ಉದಯ ಸುಂದರ ಶೆಟ್ಟಿ ಉದ್ಘಾಟಿಸಿದರು.

 ಈ ಸಂದರ್ಭ ಅವರು ಮಾತನಾಡಿ, ಆದಷ್ಟು ಶೀಘ್ರವಾಗಿ ಕಾಪು ಬಂಟರ ಭವನ ನಿರ್ಮಾಣ ಆಗಲಿದ್ದು, ಬಂಟ ಯುವ ಪೀಳಿಗೆ ಒಗ್ಗಟ್ಟಾಗ ಬೇಕೆಂದರು.

ಮುಖ್ಯ ಅಥಿತಿ ಅಧಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಬಂಟ ಸಮಾಜವೂ ಎಲ್ಲಾ ಸಮಾಜದೊಂದಿಗೆ ಸಾಮರಸ್ಯದಲ್ಲಿ ಒಗ್ಗಟ್ಟಾಗಿರುವ ಸಮಾಜ. ಇದು ಬಂಟರ ಯಶಸ್ಸಿನ ಸೂತ್ರವಾಗಿದೆ ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ವಹಿಸಿದ್ದರು.

ಬೆಳಿಗ್ಗೆ ಕಾಪು ಬಂಟರ ಸಂಘ ವ್ಯಾಪ್ತಿಯ ಕ್ರೀಡಾಳುಗಳ ಭವ್ಯ ಮೆರವಣಿಗೆಯೊಂದಿಗೆ ಕ್ರೀಡಾಜ್ಯೋತಿ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇಗುಲದಿಂದ ಹೊರಟು ಕಾಪು ಪೇಟೆಯ ಮುಖಂತರ ಕ್ರೀಡಾಂಗಣಕ್ಕೆ ಆಗಮಿಸಿದೆ.

ಕ್ರೀಡಾ ಜ್ಯೋತಿಯನ್ನು ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಜ್ವಲಿಸಿದರು.

  ವೇದಿಕೆಯಲ್ಲಿ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಉಡುಪಿ ತಾಲೂಕು ಸಮಿತಿ, ಬಂಟರ ಯಾನೆ ನಾಡವರ ಮಾತೃ ಸಂಘ  ಮಂಗಳೂರು ಸಂಚಾಲಕ  ದಿನಕರ ಶೆಟ್ಟಿ ಹೆರ್ಗ, ಪುಣೆ ಉದ್ಯಮಿ  ನಾರಾಯಣ ಶೆಟ್ಟಿ, ಕಳತ್ತೂರು ಕುಶಲ ಶೇಖರ ಶೆಟ್ಟಿ ಇಂಟರ್ ನ್ಯಾಶನಲ್ ಅಡಿಟೋರಿಯಂ ಮಾಲಕ  ಶೇಖರ್ ಬಿ. ಶೆಟ್ಟಿ, ಮುಂಬಯಿ ಹೊಟೇಲ್ ಉದ್ಯಮಿ, ಶ್ರೀಧರ ಶೆಟ್ಟಿ, ಲ. ವಿ.ಜಿ. ಶೆಟ್ಟಿ, ಮೋಹನ್ ಶೆಟ್ಟಿ ಬೆಳಪು, ಹೊಸಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಶೋಭಿತ್ ಶೆಟ್ಟಿ, ಶ್ರೀಮತಿ ಜಯಲಕ್ಷ್ಮೀ ಎಸ್. ಶೆಟ್ಟಿ, ಶ್ರೀಮತಿ ಮೋಹಿನಿ ಶೆಟ್ಟಿ,  ರಘುರಾಮ ಎಂ. ಶೆಟ್ಟಿ ದಿವಾಕರ ಶೆಟ್ಟಿ, ಕಳತ್ತೂರು, ಸಂದೀಪ್ ಶೆಟ್ಟಿ, ಕಲ್ಯ ಉಪಸ್ಥಿತರಿದ್ದರು.  

 ಈ ಸಂದರ್ಭ ಕಾಪು ಪುರಸಭೆಯ ಅಧ್ಯಕ್ಷೆ ಶ್ರೀಮತಿ ಮೋಹಿನಿ ಶೆಟ್ಟಿ ಮತ್ತು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವರವರನ್ನು ಸನ್ಮಾನಿಸಲಾಯಿತು.

 ಪುರುಷರಿಗೆ ಕ್ರಿಕೆಟ್‌ ಮತ್ತು ಹಗ್ಗಜಗ್ಗಾಟ ಮತ್ತು ಮಹಿಳೆಯರಿಗೆ ತ್ರೋಬಾಲ್‌, ಹಗ್ಗಜಗ್ಗಾಟ ಕ್ರೀಡಾಕೂಟದ ಆಯೋಜನೆ ಮಾಡಲಾಗಿದೆ.

  ನಿರ್ಮಲ್ ಕುಮಾರ್ ಹೆಗ್ಡೆ ಮತ್ತು ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚಂದ್ರಶೇಖರ ಶೆಟ್ಟಿ ಪೊಲ್ಯ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.