• Home  
  • ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ (Padubidri Temple: Pratishtha Brahmakashotsavadi festival from April 23rd to May 3)
- ದೈವ - ದೇವರು - ಧಾರ್ಮಿಕ

ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ (Padubidri Temple: Pratishtha Brahmakashotsavadi festival from April 23rd to May 3)

Share: ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ ಮಾಹಿತಿ   (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳು ತ್ವರಿತ ಗತಿಯಲ್ಲಿ ಸಂಪೂರ್ಣಗೊಳ್ಳುತ್ತಿದ್ದು, ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಾದಿಗಳನ್ನು ನಡೆಸಲಾಗುವುದೆಂದು ಎಂ ಆರ್‌ ಜಿ ಸಂಸ್ಥೆಯ ಅಧ್ಯಕ್ಷ ಮತ್ತು ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ,    ಡಾ. ಪ್ರಕಾಶ್ ಶೆಟ್ಟಿ ಹೇಳಿದರು.  ಪಡುಬಿದ್ರಿ ಶ್ರೀ […]

  (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳು ತ್ವರಿತ ಗತಿಯಲ್ಲಿ ಸಂಪೂರ್ಣಗೊಳ್ಳುತ್ತಿದ್ದು, ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಾದಿಗಳನ್ನು ನಡೆಸಲಾಗುವುದೆಂದು ಎಂ ಆರ್‌ ಜಿ ಸಂಸ್ಥೆಯ ಅಧ್ಯಕ್ಷ ಮತ್ತು ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ,    ಡಾ. ಪ್ರಕಾಶ್ ಶೆಟ್ಟಿ ಹೇಳಿದರು.

 ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಡಾ. ಪ್ರಕಾಶ್ ಶೆಟ್ಟಿ ಮಾಹಿತಿ ನೀಡಿದರು.   

   ರಾಜಗೋಪುರವು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳು ಎ. 15ಕ್ಕೆ ಪೂರ್ಣಗೊಳ್ಳಲಿರುವುದಾಗಿ ಸಭೆಗೆ ಗುತ್ತಿಗೆದಾರರಾದ ಸುಜಯ್ ಶೆಟ್ಟಿ ಕಾರ್ಕಳ ಹಾಗೂ  ಸುಹಾಸ್ ಹೆಗ್ಡೆ ತಿಳಿಸಿದರು.
    ಶ್ರೀ ದೇಗುಲದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಭವಾನಿಶಂಕರ ಹೆಗ್ಡೆ, ಕೊರ್ನಾಯ ಮನೆ ಶ್ರೀಪತಿ ಕೊರ್ನಾಯ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶ್ರೀಪತಿ ಕೊರ್ನಾಯ, ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಶ್ರೀನಾಥ್ ಹೆಗ್ಡೆ ಸರಕಾರದ ಧಾರ್ಮಿಕ ದತ್ತಿ ಇಲಾಖಾ ನಿರ್ದೇಶಿತ ಅನುಷ್ಠಾನಿಸಬೇಕಾದ ವಿವಿಧ ಕಾಮಗಾರಿಗಳ ವಿವರಗಳನ್ನಿತ್ತರು. ಶ್ರೀಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

  ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಗಳಾದ ನವೀನ್ ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ವೈ ಸುಕುಮಾರ್ ಕಾಮಗಾರಿಗಳ ವಿವರ ಸಭೆಗೆ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.