ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆ
(Mulki)ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಬ್ರಹ್ಮರಥೋತ್ಸವದಂದು ನಡೆದ ಬ್ರಹ್ಮರಥದ ಅವಘಡದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ದೈವಜ್ಞರಾದ ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆ ನಡೆಸಲಾಯಿತು.
ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಹಾಗೂ ಅತ್ತೂರು ಬೈಲು ವೆಂಕಟರಾಜ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಪೌರೋಹಿತ್ಯದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರ ನೇತೃತ್ವದಲ್ಲಿ ವಾದ್ಯ ಘೋಷದೊಂದಿಗೆ ದೈವಜ್ಞರಾದ ಒಳಕುಂಜ ಮುರಳಿ ಕೃಷ್ಣಶರ್ಮ ರವರನ್ನು ದೇವಸ್ಥಾನಕ್ಕೆ ಕರೆ ತರಲಾಯಿತು.
ಬಳಿಕ ಕನ್ನಿಕೆಯಿಂದ ರಾಶಿ ಪೂಜೆ ಹಾಗೂ ಸ್ವರ್ಣ ನಿಕ್ಷೇಪದ ಮೂಲಕ ಅಷ್ಟಮಂಗಳ ಪ್ರಶ್ನೆಗೆ ಚಾಲನೆ ನೀಡಲಾಯಿತು.
ಪ್ರಶ್ನೆಯಲ್ಲಿ ಕಂಡು ಬಂದ ಧನು ರಾಶಿಯಿಂದ ಶುಭ ಸೂಚನೆ ಬಂದಿದ್ದು, ಗುರು ಬಲ ಇದ್ದರೂ ದೇವಸ್ಥಾನದಲ್ಲಿ ಕಿಂಚಿತ್ ದೋಷಗಳಿದ್ದು, ಪ್ರಾಯಶ್ಚಿತ್ತ ಮಾಡಿದರೆ ಮುಂದಿನ ದಿನಗಳಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ದೈವಜ್ಞರು ನುಡಿದರು.
ಮುಂದಿನ ತಿಂಗಳು ಜೂನ್ 23ರಂದು ನಿರಂತರವಾಗಿ ಅಷ್ಟಮಂಗಳ ಪ್ರಶ್ನಾ ಚಿಂತನೆ ನಡೆಯಲಿದೆ ಎಂದು ಕ್ಷೇತ್ರದ ಒಂಬತ್ತು ಮಹಾಗಣೆಯ ಭಕ್ತರಿಗೆ ತಿಳಿಸಲಾಯಿತು.
ಈ ಸಂದರ್ಭ ಜ್ಯೋತಿಷ್ಯ ವಿದ್ವಾನ್ ವಾಸುದೇವ ಭಟ್ ಪಾವಂಜೆ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಅರ್ಚಕ ಅಪ್ಪುಯಾನೇ ಶ್ರೀನಿವಾಸ ಪೂಜಾರಿ, ಅಧ್ಯಕ್ಷ ವಾಮನ್ ಇಡ್ಯಾ, ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೊರಿಯಾರ್, ಮಾಜೀ ಸದಸ್ಯ ಭುವನಾಭಿರಾಮ ಉಡುಪ, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ರಾಮಚಂದ್ರ ನಾಯಕ್ ಕೋಲ್ನಾಡುಗುತ್ತು, ಶರತ್ ಸಾಲ್ಯಾನ್ ಗುತ್ತಿನಾರ್, ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಚಂದ್ರಶೇಖರ ಕಾಸಪ್ಪಯ್ಯನವರ ಮನೆ, ಸುಜಿತ್ ಸಾಲ್ಯಾನ್, ಕಿರಣ್ ಶೆಟ್ಟಿ ಕೋಲ್ನಾಡ್ ಗುತ್ತು , ಸುನಿಲ್ ಆಳ್ವ, ಗುರುವಪ್ಪ ಕೋಟ್ಯಾನ್, ಶೇಖರ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಸುಕುಮಾರ್ ಶೆಟ್ಟಿ ಮುಲ್ಕಿ ನ ಪಂ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ದಯಾವತಿ ಅಂಚನ್, ಹರ್ಷರಾಜ ಶೆಟ್ಟಿ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಡಾ. ಹರೀಶ್ಚಂದ್ರ ಪಿ ಸಾಲ್ಯಾನ್, ಗೌತಮ್ ಜೈನ್ ಮುಲ್ಕಿ ಅರಮನೆ, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ನಾಗೇಶ್ ಬಪ್ಪನಾಡು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಅಧಿಧನ್, ಜೀವನ್ ಶೆಟ್ಟಿ ಕಾರ್ನಾಡ್, ರಂಗನಾಥ ಶೆಟ್ಟಿ, ಗಂಗಾಧರ ಶೆಟ್ಟಿ, ಬರ್ಕೆ ತೋಟ, ದಿನೇಶ್ ಹೆಗ್ಡೆ ಮಾನಂಪಾಡಿ, ಸತೀಶ್ ಭಂಡಾರಿ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಶಶೀoದ್ರ ಸಾಲ್ಯಾನ್, ಮಹೀಮ್ ಹೆಗ್ಡೆ, ಪುರುಷೋತ್ತಮ ಬಡಗಿತ್ಳು, ಪುರಂದರ ಸಾಲ್ಯಾನ್, ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
