ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ನೀರಿನ ಘಟಕ ಉದ್ಘಾಟಿಸಿದ ಉಚ್ಚಿಲದ ಖ್ಯಾತ ವೈದ್ಯ ಡಾ. ಗಂಗಾಧರ ಶೆಟ್ಟಿ
(Mooluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರಾರಂಭೋತ್ಸವದ ಪ್ರಯುಕ್ತ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಯಿತು.
ನೀರಿನ ಘಟಕವನ್ನು ಉಚ್ಚಿಲದ ಖ್ಯಾತ ವೈದ್ಯ ಡಾ. ಗಂಗಾಧರ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಲಯನ್ಸ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಪ್ರತಾಪ್, ಶ್ರೀಮತಿ ಅಶ್ವಿನಿ, ಶಾಲಾ ಮುಖ್ಯೋಪಾಧ್ಯಾರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

