ಉಚ್ಚಿಲ ನಟೇಶ ನೃತ್ಯ ನಿಕೇತನದ ಆಯೋಜನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ಆರಂಭ
ಸಂಗೀತ ಶಿಕ್ಷಣ ಉದ್ಘಾಟಿಸಿದ ಶ್ರೀ ರಾಧಾಕೃಷ್ಣ ನೃತ್ಯ ನಿಕೇತನದ ಸಂಚಾಲಕಿ ಶ್ರೀಮತಿ ವೀಣಾ ಎಂ ಸಾಮಗ
(Uchila) ಉಚ್ಚಿಲ : ಕಳೆದ 22ವರ್ಷಗಿಂದ ಉಚ್ಚಿಲ ಪರಿಸರದಲ್ಲಿ ಭರತನಾಟ್ಯ ಶಿಕ್ಷಣವನ್ನು ನೀಡುತ್ತಾ ಬಂದಿರುವ ನಟೇಶ ನೃತ್ಯ ನಿಕೇತನದ ವತಿಯಿಂದ ಶುಕ್ರವಾರ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಆರಂಭಿಸಲಾಯಿತು.
ಉದ್ಘಾಟನೆಯನ್ನು ಸಂಸ್ಥೆಯ ಮಾರ್ಗದರ್ಶಕಿ ಹಾಗೂ ಶ್ರೀ ರಾಧಾಕೃಷ್ಣ ನೃತ್ಯ ನಿಕೇತನದ ಸಂಚಾಲಕಿ ವಿದೂಷಿ ಶ್ರೀಮತಿ ವೀಣಾ ಎಂ ಸಾಮಗ ನೇರವೇರಿಸಿ ಶುಭಹಾರೈಸಿದರು.
ಸಂಗೀತ ಗುರುಗಳಾದ ಶ್ರೀಮತಿ ಶೋಭಾ ಸಾಂಕೇತಿಕವಾಗಿ ಮಕ್ಕಳಿಗೆ ಸಂಗೀತ ಪಾಠವನ್ನು ಆರಂಭಿಸಿದರು.
ಸಂಸ್ಥೆಯ ಸಂಚಾಲಕರಾದ ಪ್ರಕಾಶ್ ದೇವಾಡಿಗ, ಹಿರಿಯ ವಿದ್ಯಾರ್ಥಿಗಳಾದ ಕು. ಕೀರ್ತನ ಸಾಲ್ಯಾನ್, ಕು. ಶ್ರೀಲತಾ, ಕು. ಹೃಷಿಕ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಸಂಸ್ಥೆಯ ಗುರುಗಳಾದ ವಿದೂಷಿ ಶ್ರೀಮತಿ ಮಂಗಳಾ ಕೆ ದೇವಾಡಿಗ ಸ್ವಾಗತಿಸಿದರು. ಕುಮಾರಿ ಶ್ರೀವಿದ್ಯಾ ಪ್ರಾರ್ಥನೆಯನ್ನು ನೆರವೇರಿಸಿದರು. ವಿಜೇಶ್ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.

