Tag: padubidri police station

ಅಪಘಾತ

ಉಚ್ಚಿಲ: ಪಾದಚಾರಿಗೆ ಬೈಕ್‌ ಡಿಕ್ಕಿ, ವಯೋವೃದ್ದ ಸಾವು (Uchila: Elderly man dies after bike hits pedestrian)

 ಉಚ್ಚಿಲ: ಪಾದಚಾರಿಗೆ ಬೈಕ್‌ ಡಿಕ್ಕಿ, ವಯೋವೃದ್ದ ಸಾವು ಪಣಿಯೂರು ಸೆಂಟರ್‌ ನಿವಾಸಿ ಸದಾಶಿವ ಕೋಟ್ಯಾನ್‌ ಮೃತರು   (Uchila) ಉಚ್ಚಿಲ : ರಸ್ತೆ ದಾಟುತ್ತಿದ್ದ ವಯೋವೃದ್ದರಿಗೆ ಬೈಕೊಂದು ಡಿಕ್ಕಿ ಹೊಡೆದು ಅವರು ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಉಚ್ಚಿಲ ವೇಗಧೂತ ಬಸ್ಸು ನಿಲ್ದಾಣದ ಬಳಿ ಘಟಿಸಿದೆ.   ಮೃತ ಪಾದಚಾರಿಯವರನ್ನು ಪಣಿಯೂರು ಸೆಂಟರ್‌ ನಿವಾಸಿ ಸದಾಶಿವ ಕೋಟ್ಯಾನ್‌ (೬೫) ಎಂದುಗುರುತಿಸಲಾಗಿದೆ.     ಅವರು ರಸ್ತೆ ದಾಟುತ್ತಿದ್ದಾಗ, ಪಡುಬಿದ್ರಿ ಕಡೆಯಿಂದ ಕಾಪು ಕಡೆಗೆ ಸಾಗುತ್ತಿದ್ದ ಬೈಕ್‌ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ […]

ಅಪಘಾತ

ತೆಂಕ ಎರ್ಮಾಳು : ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು (Tenka Yermal: Man dies in bike collision)

ತೆಂಕ ಎರ್ಮಾಳು : ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು ತೆಂಕ ಎರ್ಮಾಳು ನಿವಾಸಿ ಅಣ್ಣಯ್ಯ ಬಂಗೇರ ಮೃತ ವ್ಯಕ್ತಿ (Padubidri) ಪಡುಬಿದ್ರಿ : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಎರ್ಮಾಳು ಸತ್ಯಂ ಬಾರ್ ಎದುರು ಸೋಮವಾರ ಸಂಜೆ ಘಟಿಸಿದೆ. ಅಪಘಾತದಲ್ಲಿ ಬೈಕ್‌ ಸವಾರನೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.     ಮೃತ ವ್ಯಕ್ತಿಯನ್ನು ತೆಂಕ ಎರ್ಮಾಳು ನಿವಾಸಿ ಅಣ್ಣಯ್ಯ ಬಂಗೇರ (67) ಎಂದು ಗುರುತಿಸಲಾಗಿದೆ.      […]

ಅಪರಾಧ

ನೀರೆಂದು ಆಸಿಡ್ ಕುಡಿದ ಯುವಕ ಮೃತ್ಯು (Young man dies after drinking acid as water)

  ನೀರೆಂದು ಆಸಿಡ್ ಕುಡಿದ ಯುವಕ ಮೃತ್ಯು  ಪಡುಬಿದ್ರಿಯ ಪಾದೆಬೆಟ್ಟುವಿನಲ್ಲಿ ನಡೆದ ಘಟನೆ (Padubidri) ಪಡುಬಿದ್ರಿ : ಯುವಕನೋರ್ವ ಟೈಲ್ಸ್ ಕ್ಲೀನಿಂಗ್ ಆಸಿಡ್ ನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥನಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪಾದೆಬೆಟ್ಟು ಗ್ರಾಮದಲ್ಲಿ ಘಟಿಸಿದೆ.   ಮೃತ ಯುವಕ ಕಿರಣ್ (17) ತನ್ನ ಮಾವನು ಕೆಲಸ ಮಾಡುವ ಸ್ಥಳಕ್ಕೆ ತೆರಳಿ, ಕೆಲಸದವರು ಟೈಲ್ಸ್ ಕ್ಲೀನಿಂಗ್ ಮಾಡಲು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿಟ್ಟಿದ್ದ ಟೈಲ್ಸ್ ಕ್ಲೀನಿಂಗ್ ಮಾಡುವ ಆಸಿಡ್ ನ್ನು ನೀರು ಎಂದು […]

ಅಪಘಾತ

 ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋದ ಟಯರ್‌ ಸ್ಫೋಟ, ಮುಗುಚಿ ಬಿದ್ದ ಟೆಂಪೋ, ಮಹಿಳೆ ಸಾವು (A tempo on its way to a concrete work site suffered a tire explosion, causing the tempo to overturn and killing a woman)

ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋದ ಟಯರ್‌ ಸ್ಫೋಟ, ಮುಗುಚಿ ಬಿದ್ದ ಟೆಂಪೋ, ಮಹಿಳೆ ಸಾವು ದುರ್ದೈವಿ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ (Hejamady) ಹೆಜಮಾಡಿ: ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋವೊಂದರ ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಅದರಲ್ಲಿದ್ದ ಹಲವರು ಗಾಯಗೊಂಡಿದ್ದು,  ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರನ್ನು  ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ  ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ.66ರಲ್ಲಿ ಗುರುವಾರ ಬೆಳಗ್ಗೆ ಘಟಿಸಿದೆ.    ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, […]

ಅಪಘಾತ

ಉಚ್ಚಿಲ : ಬೈಕ್‌ ಡಿಕ್ಕಿ , ವಯೋವೃದ್ಧ ಸಾವು (Uchilla: Elderly man dies in bike collision)

ಉಚ್ಚಿಲ : ಬೈಕ್‌ ಡಿಕ್ಕಿ , ವಯೋವೃದ್ಧ ಸಾವು ಕಿನ್ನಿಗೋಳಿ ಮೂಲದ ರೊನಾಲ್ಡ್‌ ಡಿಸೋಜಾ ಮೃತರು. (Uchila) ಉಚ್ಚಿಲ: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಬೈಕೊಂದು ಡಿಕ್ಕಿ ಹೊಡೆದು ಮೃತ ಪಟ್ಟ ಘಟನೆ ಮಂಗಳವಾರ ರಾತ್ರಿ ಉಚ್ಚಿಲ ಹನಫಾ ಮಸೀದಿ ಎದುರಿನ ಸರ್ವೀಸ್‌ ರಸ್ತೆಯಲ್ಲಿ ಸಂಭವಿಸಿದೆ.     ಮೃತ ವ್ಯಕ್ತಿಯನ್ನು ಕಿನ್ನಿಗೋಳಿ ಮೂಲದ ರೊನಾಲ್ಡ್‌ ಡಿಸೋಜಾ (66)ಎಂದು ಗುರುತಿಸಲಾಗಿದೆ.    ರೊನಾಲ್ಡ್‌ ಡಿಸೋಜಾರವರು ಮೂಳೂರಿನ ಸಾಗರ್‌ ಹೋಟೇಲಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವರು ಉಚ್ಚಿಲಕ್ಕೆ ಆಗಮಿಸಿ ತೆರಳುತ್ತಿರುವಾಗ ಅತಿವೇಗದಿಂದ […]

ಅಪಘಾತ

ಎರ್ಮಾಳು : ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಹೆದ್ದಾರಿಯಿಂದ ಧರೆಗೆ ಉರುಳಿದ ಕಾರು,  ಓರ್ವ ಸಾವು (Yermal : Car crashes into electric pole, rolls off highway, one dead)

ಎರ್ಮಳು : ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಹೆದ್ದಾರಿಯಿಂದ ಧರೆಗೆ ಉರುಳಿದ ಕಾರು,  ಓರ್ವ ಸಾವು ಮೃತರನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಅಭಿ ಎಂದು ಗುರುತಿಸಲಾಗಿದೆ (Padubidri) ಪಡುಬಿದ್ರಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತೋಟಕ್ಕೆ ಉರುಳಿ ಕಾರಿನಲ್ಲಿದ್ದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಪಡುಬಿದ್ರಿ ರಾ.ಹೆ.66 ರಲ್ಲಿ ತಡರಾತ್ರಿ 2 ಗಂಟೆಯ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ಘಟಸಿದೆ.  ಮೃತ ವ್ಯಕ್ತಿಯನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಅಭಿ ಎಂದು […]

ಅಪಘಾತ

ಎರ್ಮಾಳು : ಅಕ್ಕಿ ಮೂಟೆ ಸಾಗಿಸುತ್ತಿದ್ದ ಪಿಕಪ್ ಪಲ್ಟಿ, ಚಾಲಕ ಪಾರು (Yrmal: Pickup truck carrying rice overturns, driver escapes)

ಎರ್ಮಾಳು : ಅಕ್ಕಿ ಮೂಟೆ ಸಾಗಿಸುತ್ತಿದ್ದ ಪಿಕಪ್ ಪಲ್ಟಿ, ಚಾಲಕ ಪಾರು ಹೆದ್ದಾರಿಯಲ್ಲಿ ಹರಡಿದ ಅಕ್ಕಿ ಮೂಟೆ, ಸಂಚಾರ ವ್ಯತ್ಯಯ   (Padubidri) ಪಡುಬಿದ್ರಿ : ಕುಂದಾಪುರದಿಂದ ಪಡುಬಿದ್ರಿ ಕಡೆಗೆ ಅಕ್ಕಿ ಮೂಟೆ ಹೇರಿಕೊಂಡು ಸಾಗುತ್ತಿದ್ದ ಪಿಕಪ್ ನ ಚಕ್ರ ಸ್ಪೋಟಗೊಂಡು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಗರಡಿ ಬಳಿ ಘಟಿಸಿದೆ.  ವಾಹನ ಚಾಲಕ ಮತ್ತು ಮತ್ತೋರ್ವ ಪಿಕಪ್‌ ನಲ್ಲಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.    ಪಿಕಪ್ ವಾಹನದಲ್ಲಿ ಅಕ್ಕಿ ಮೂಟೆಗಳನ್ನು ತೆಕ್ಕಟ್ಟೆಯಿಂದ ಪಡುಬಿದ್ರಿಗೆ […]

ಅಪಘಾತ

ಉಚ್ಚಿಲ ರಿಕ್ಷಾಗೆ ಕಾರು ಡಿಕ್ಕಿ ; ರಿಕ್ಷಾ ಚಾಲಕ ಗಂಭೀರ (Car hits rickshaw in Uchilla; rickshaw driver in critical condition)

ಉಚ್ಚಿಲ ರಿಕ್ಷಾಗೆ ಕಾರು ಡಿಕ್ಕಿ ; ರಿಕ್ಷಾ ಚಾಲಕ ಗಂಭೀರ    ಹೆದ್ದಾರಿಯ ಸರ್ವಿಸ್ ರಸ್ತೆ ಅವೈಜ್ಞಾನಿಕ ಕಾಮಗಾರಿ ಅಪಘಾತಕ್ಕೆ ಕಾರಣ (Uchila) ಉಚ್ಚಿಲ : ಉಚ್ಚಿಲ ರಾ. ಹೆ. 66ರ ವೆಸ್‌ ಕೋಸ್ಟ್‌ ನರ್ಸರಿ ಎದುರು ಕಾರೊಂದು ರಿಕ್ಷಾಗೆ ಗುದ್ದಿದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭವಿಸಿದೆ.   ರಿಕ್ಷಾ ಚಾಲಕ ಉಚ್ಚಿಲದ ರಫೀಕ್ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ರಫಿಕ್‌ ರನ್ನು ಉಡುಪಿ  ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ […]

ಅಪಘಾತ

ಪಡುಬಿದ್ರಿ : ಟೆಂಪೋ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಯುವತಿ ಮೃತ್ಯು (Padubidri: Young woman dies after being seriously injured in tempo collision)

ಪಡುಬಿದ್ರಿ : ಟೆಂಪೋ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಯುವತಿ ಮೃತ್ಯು ಪಡುಬಿದ್ರಿ ನಡ್ಸಾಲು ಬಿಲ್ಲಿತೋಟ ನಿವಾಸಿ ಪ್ರೇಕ್ಷಾ (22) ಮೃತ ಯುವತಿ (Padubidri) ಪಡುಬಿದ್ರಿ : ಇಲ್ಲಿನ ಬಸ್ ನಿಲ್ದಾಣದ ಬಳಿ ಟೆಂಪೋ ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯು ಮೃತಪಟ್ಟ ಘಟನೆ ಸಂಭವಿಸಿದೆ.    ಮೃತ ಯುವತಿ ಪ್ರೇಕ್ಷಾ (22) ಪಡುಬಿದ್ರಿ ನಡ್ಸಾಲು ಬಿಲ್ಲಿತೋಟ ನಿವಾಸಿಯಾಗಿದ್ದು, ವಾಮಂಜೂರಿನ ಕರಾವಳಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಪರೀಕ್ಷೆ ಮುಗಿಸಿ ಮನೆಯತ್ತ ಹೊರಟ ಸಂದರ್ಭ […]

ಅಪಘಾತ

ಉಚ್ಚಿಲ : ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಮೃತ್ಯು (Uchila : Man dies after being thrown onto road by bus)

ಉಚ್ಚಿಲ : ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಮೃತ್ಯು   ಕಾಪು ಮೂಲದ ಸಖೇಂದ್ರ (52) ಮೃತ ವ್ಯಕ್ತಿ (Padubidri) ಪಡುಬಿದ್ರಿ : ಓವರ್‌ ಟೇಕ್‌ ಭರಾಟೆಯಲ್ಲಿ  ಬಸ್ಸಿನ ಮುಂಭಾಗದ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯೋರ್ವ ಬಾಗಿಲಿನ ಮೂಲಕ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡು  ಮೃತಪಟ್ಟ ಘಟನೆ ಉಚ್ಚಿಲ ಪೇಟೆಯ ಬಳಿ ರಾ.ಹೆ 66 ರಲ್ಲಿ ಘಟಿಸಿದೆ.   ಕಾಪು ಮೂಲದ ಸಖೇಂದ್ರ (52) ಮೃತ ವ್ಯಕ್ತಿ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ  ಬಸ್ಸು ಅದೇ […]

eMedia Kannada  @2025. All Rights Reserved.