ಎಲ್ಲೂರು : ಗದ್ದೆ ಕಡೆ ತೆರಳಿದ್ದ ವ್ಯಕ್ತಿ ನಾಪತ್ತೆ
ಎಲ್ಲೂರು : ಗದ್ದೆ ಕಡೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲು ಪಡುಬಿದ್ರಿ : ಗದ್ದೆ ಕಡೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ತೆರಳಿದ್ದ ವ್ಯಕ್ತಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಎಲ್ಲೂರು ಗ್ರಾಮದಲ್ಲಿ ಘಟಿಸಿದೆ. ಎಲ್ಲೂರು ಗ್ರಾಮದ ಸಾನಿದ್ಯ ಮಣಿಯೂರು ಹೊಸಮನೆಯ ಸದಾಶಿವ ಶೆಟ್ಟಿ (76) ಕಾಣೆಯಾದವರು. ಅವರು ಬೆಳಗ್ಗಿನ ಉಪಹಾರ ಸೇವಿಸಿದ ಬಳಿಕ ಗದ್ದೆ ಕಡೆಗೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿದ್ದರು.ಮಧ್ಯಾಹ್ನವಾದರೂ ಮನೆಗೆ ಬಾರದೇ ಇದ್ದದ್ದನ್ನು ಕಂಡು ಅವರ ಹೆಂಡತಿ ಮತ್ತು […]










