# Tags
#ತಂತ್ರಜ್ಞಾನ

ಇಂದು ಚಂದ್ರನ ಕಕ್ಷೆ ಸೇರಲಿದೆ ಚಂದ್ರಯಾನ-3

ಇಂದು ಚಂದ್ರನ ಕಕ್ಷೆ ಸೇರಲಿದೆ ಚಂದ್ರಯಾನ-3

ಇಸ್ರೋ: ಇಸ್ರೋ ಪಾಲಿಗೆ ಇಂದು ಮಹತ್ವದ ದಿನ. ಯಾಕೆಂದರೆ ಜುಲೈ 14ರಂದು ಉಡಾವಣೆ ಮಾಡಿದ ಚಂದ್ರಯಾನ-3  ಬಾಹ್ಯಾಕಾಶ ನೌಕೆಯು ಇಂದು ಚಂದ್ರನ ಕಕ್ಷೆ ಸೇರಲಿದ್ದು, ಇಸ್ರೋ ಸಂಜೆ 7 ಗಂಟೆಗೆ ಲೂನಾರ್ ಆರ್ಬಿಟ್ ಇಂಜೆಕ್ಷನ್ ಕಾರ್ಯ ಕೈಗೊಳ್ಳಲಿದೆ.

 ಚಂದ್ರಯಾನ-3 ಈಗಾಗಲೇ ತನ್ನ ಪ್ರಯಾಣದ 3ನೇ 2ರಷ್ಟು ದೂರವನ್ನು ಕ್ರಮಿಸಿದೆ. ಆಗಸ್ಟ್ 1ರಂದು ಭೂಮಿಯ ಕಕ್ಷೆಯಿಂದ ಚಂದ್ರನತ್ತ ಸಾಗಿತ್ತು. ಇಂದು ಸಂಜೆ ಚಂದ್ರನ ಕಕ್ಷೆಗೆ ಪ್ರವೇಶಿಸಲಿದೆ.

 ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಉಡಾವಣೆಯಾದಾಗಿನಿಂದ ಇಸ್ರೋ ಪ್ರತಿಯೊಂದು ಹಂತದಲ್ಲೂ ಮಾಹಿತಿ ಹಂಚಿಕೊಳ್ಳುತ್ತಿದೆ. ಅದರಂತೆ ಆಗಸ್ಟ್ 4ರಂದು ಈ ನೌಕೆ 2.6 ಲಕ್ಷ ಕಿಮೀ ದೂರ ಕ್ರಮಿಸಿರುವುದನ್ನು ತಿಳಿಸಿತ್ತು. ಆಗಸ್ಟ್ 23ರಂದು ನೌಕೆಯಲ್ಲಿರುವ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ನಿರೀಕ್ಷೆ ಇದೆ.

 ಲ್ಯಾಂಡರ್ ಮೃದುವಾಗಿ ಚಂದ್ರನಲ್ಲಿ ಲ್ಯಾಂಡಿಂಗ್ ಆದರೆ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸದೊಂದು ಚರಿತ್ರೆ ಸೃಷ್ಟಿಸಲಿದೆ.

  ಇಂತಹ ಸಾಧನೆ ಮಾಡಿದ ವಿಶ್ವದ 4ನೇ ರಾಷ್ಟ್ರ ಎನಿಸಿಕೊಳ್ಳಲಿದೆ. ಚಂದ್ರನಲ್ಲಿ ಲ್ಯಾಂಡರ್ ಕಾಲಿಟ್ಟ ತಕ್ಷಣ ರೋವರ್ ಹೊರ ಬಂದು ಅಧ್ಯಯನ ನಡೆಸಲಿದೆ.

Leave a comment

Your email address will not be published. Required fields are marked *