# Tags
#Uncategorised

ರಾಜ್ಯ ಗುಪ್ತಚರ ಇಲಾಖೆಯ ಉಪ-ನಿರ್ದೇಶಕ ಎನ್.ಎಂ.ಧರ್ಮಪ್ಪರವರಿಗೆ ಬೀಳ್ಕೊಡುಗೆ ಸಮಾರಂಭ (Forwell Ceremony for Deputy Director of State Iteligence Department NM Dramappa)

 ರಾಜ್ಯ ಗುಪ್ತಚರ ಇಲಾಖೆಯ ಉಪ-ನಿರ್ದೇಶಕ ಎನ್.ಎಂ.ಧರ್ಮಪ್ಪರವರಿಗೆ ಬೀಳ್ಕೊಡುಗೆ ಸಮಾರಂಭ

  (Udupi) ಉಡುಪಿ: ಮಂಗಳೂರು ವಿಭಾಗದ ರಾಜ್ಯ ಗುಪ್ತಚರ ಇಲಾಖೆಯ ಉಪ-ನಿರ್ದೇಶಕರಾದ  ಎನ್. ಎಂ. ಧರ್ಮಪ್ಪರವರು ನಿವೃತ್ತಿ ಹೊಂದಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭ ಉಡುಪಿ ಶಾರದಾ ಇಂಟರ್‌ನ್ಯಾಶನಲ್‌ ಹೊಟೇಲ್ ಸಭಾಂಗಣದಲ್ಲಿ ನೆರವೇರಿತು.

 ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಸಿದ್ದಲಿಂಗಪ್ಪ, ಮಂಗಳೂರು ನಗರ ಅಪರಾಧ ವಿಭಾಗದ ಡಿ.ಸಿ.ಪಿ ದಿನೇಶ್ ಕುಮಾರ್‌ರವರು ಭಾಗವಹಿಸಿ ನಿವೃತ್ತಿ ಹೊಂದುತ್ತಿರುವ ಎನ್. ಎಂ. ಧರ್ಮಪ್ಪರವರಿಗೆ ಶುಭ ಹಾರೈಸಿದರು.

 ಕಾರ್ಯಕ್ರಮದಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಮಂಗಳೂರು ವಿಭಾಗಕ್ಕೆ ಒಳಪಡುವ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಕಾರವಾರ ಜಿಲ್ಲೆಗಳ ಅಧಿಕಾರಿ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದಾರೆ.

Leave a comment

Your email address will not be published. Required fields are marked *