# Tags
#ಕರಾವಳಿ #ವಿಡಿಯೋ

ಸಮಾಜರತ್ನ ಲೀಲಾಧರ ಶೆಟ್ಟಿ ದಂಪತಿಗೆ ಕಾಪುವಿನಲ್ಲಿ ಅಭಿಮಾನಿಗಳಿಂದ ಸಾರ್ವಜನಿಕ ನುಡಿನಮನ : ನೂರಾರು ಅಭಿಮಾನಿಗಳ ಉಪಸ್ಥಿತಿ (K Leeladhara Shetty couple received a public tribute from their fans in Kaup)

ಸಮಾಜರತ್ನ ಲೀಲಾಧರ ಶೆಟ್ಟಿ ದಂಪತಿಗೆ ಕಾಪುವಿನಲ್ಲಿ ಅಭಿಮಾನಿಗಳಿಂದ ಸಾರ್ವಜನಿಕ ನುಡಿನಮನ : ನೂರಾರು ಅಭಿಮಾನಿಗಳ ಉಪಸ್ಥಿತಿ

(Kaup)ಕಾಪು: ಇತರರ ದುಃಖಕ್ಕೆ ಕಿವಿಯಾಗುತ್ತಿದ್ದ ಲೀಲಾಧರ ಶೆಟ್ಟಿಯವರ ಕನಸುಗಳನ್ನು ನನಸು ಮಾಡುವುದೇ ಅವರಿಗೆ ನೀಡಬಲ್ಲ ಶ್ರದ್ದಾಂಜಲಿಯಾಗಲಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Suresh Shetty) ಹೇಳಿದರು.

 ಸಮಾಜ ಸೇವಕ, ರಂಗಕರ್ಮಿ, ಸಂಘಟಕ, ಸಮಾಜರತ್ನ ಕರಂದಾಡಿ ಲೀಲಾಧರ ಶೆಟ್ಟಿ ದಂಪತಿಯ ಗೌರವಾರ್ಥ ಕಾಪು ಬಂಟರ ಸಂಘದ ನೇತೃತ್ವದಲ್ಲಿ ಕಾಪು ಬಂಟರ ಸಂಘದ ಅಂಬಾ ಮಹಾಬಲ ಶೆಟ್ಟಿ ಆವರಣದಲ್ಲಿ ಅಭಿಮಾನಿಗಳು, ಬಂಧು ಮಿತ್ರರು ಹಾಗೂ ಸರ್ವ ಧರ್ಮೀಯ ಸಮಾಜ ಬಾಂಧವರ ವತಿಯಿಂದ ನಡೆದ ಸಾರ್ವ ಜನಿಕ ಶ್ರದ್ದಾಂಜಲಿ ಸಭೆಯಲ್ಲಿ ಶಾಸಕರು ಮಾತನಾಡಿದರು.

 ಉಡುಪಿ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವೇದವ್ಯಾಸ ಐತಾಳ್‌ ನುಡಿ ನಮನ ಸಲ್ಲಿಸಿ, ಧರ್ಮಾ ತೀತವಾಗಿ ಬಡಜನರ ಸೇವೆ ಮಾಡಿದ ಅಪರೂಪದ ಚೇತನವನ್ನು ಸಮಾಜ ಕಳೆದುಕೊಂಡಿದೆ ಎಂದರು.

 ಅಧಕ್ಷತೆ ವಹಿಸಿದ ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ (K Vasudeva Shetty) ಮಾತನಾಡಿ, ಸಂಘಟನೆಗೆ ಪರ್ಯಾಯ ಹೆಸರಾಗಿದ್ದ ಲೀಲಾಧರ ಶೆಟ್ಟಿ ಅವರು ಎಲ್ಲ ಧರ್ಮ ಜಾತಿ ಬಾಂಧವರ ಹಿತವನ್ನು ಬಯಸುತ್ತಿದ್ದರು. ಬಂಟರ ಸಂಘದ ಯೋಜನೆಗಳಲ್ಲಿ ಶೇ.40 ಇತರ ಸಮುದಾಯಕ್ಕೆ ನೀಡಬೇಕು ಎಂಬ ಚಿಂತನೆ ಹೊಂದಿದ್ದರು ಎಂದರು.

 ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ(EX Minister Vinaykumar Sorake), ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ EX MLA Lalaji Mendon), ಉಡುಪಿ ಶಾಸಕ ಯಶಪಾಲ್ ಸುವರ್ಣ (Udupi MLA Yashpal Suvarna), ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ ಅಬ್ದುಲ್ ರಶೀದ್ ಸಖಾಫಿ, ಕಾಪು ದಂಡತೀರ್ಥ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಅಲ್ಟನ್ ರೋಡ್ರಿಗಸ್ ಮತ್ತಿತರರು ನುಡಿನಮನ ಸಲ್ಲಿಸಿದರು.

 ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ್ ಎಸ್. ಶೆಟ್ಟಿ, ಲೀಲಾಧರ ಶೆಟ್ಟಿ ಅವರ ಕುಟುಂಬಸ್ಥರಾದ ಗಂಗಾ ಶೆಟ್ಟಿ ನಿರ್ಮಲ ಶೆಟ್ಟಿ, ವಿಠಲ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಕುಟುಂಬದ ಪ್ರಮುಖರು ಪುಷ್ಪಾರ್ಚನೆ ಸಲ್ಲಿಸಿದರು.

 ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ವಿ ಶೆಟ್ಟಿ ವಂದಿಸಿದರು.

ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *