# Tags

ವೇಟ್‌ಲಿಫ್ಟಿಂಗ್: ಸಮಗ್ರ ಪ್ರಶಸ್ತಿ ಎತ್ತಿದ ಆಳ್ವಾಸ್

ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷ ಮತ್ತು ಮಹಿಳಾ  ಚಾಂಪಿಯನ್‌ಶಿಪ್ ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ವಿಭಾಗದ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಎತ್ತಿ ಹಿಡಿದಿದೆ. ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಕೃಷಿಸಿರಿ ವೇದಿಕೆಯಲ್ಲಿ ಹಮ್ಮಿಕೊಂಡ ಪಂದ್ಯಾವಳಿಯಲ್ಲಿ ಆಳ್ವಾಸ್ ಸಮಗ್ರ ಚಾಂಪಿಯನ್ ಆಯಿತು. ಮಹಿಳಾ ವಿಭಾಗದಲ್ಲಿ ಸತತ ೧೯ನೇ ಬಾರಿ ಚಾಂಪಿಯನ್ ಆದÀ ಆಳ್ವಾಸ್ ಕಾಲೇಜು ತಂಡವು ‘ಶಿರ್ವ […]

ಜೀರ್ಣೋದ್ಧಾರ ಹೆಸರಿನಲ್ಲಿ ನಾಗಬನಕ್ಕೆ ಹಾನಿ ಮಾಡಬೇಡಿ’ ಉರಗ ತಜ್ಞ ಗುರುರಾಜ್ ಸನಿಲ್ ಮನವಿ

ವಿದ್ಯಾಗಿರಿ (ಮೂಡುಬಿದಿರೆ): ‘ಜೀರ್ಣೋದ್ಧಾರ ಹೆಸರಿನಲ್ಲಿ ನಾಗಬನಕ್ಕೆ ಹಾನಿ ಮಾಡಬೇಡಿ’ ಎಂದು ಉರಗ ತಜ್ಞ ಗುರುರಾಜ್ ಸನಿಲ್ ರವರು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ‘ಅಭಿವ್ಯಕ್ತಿ ವೇದಿಕೆ’ಯ ವತಿಯಿಂದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.  ನಾಗಬನ ಹಾಗೂ ದೇವರಕಾಡುಗಳು ಅದ್ಭುತ ಪರಿಕಲ್ಪನೆಗಳು ಮಾತ್ರವಲ್ಲ, ಪರಿಸರ ಹಾಗೂ ನಮ್ಮನ್ನು ಉಳಿಸಿ-ಬೆಳೆಸುವ ಸ್ಥಾನಗಳು. ನಾಗಬನಗಳು ೧೫೦ರಷ್ಟು ಸಸ್ಯಪ್ರಭೇದ, ಹಲವಾರು ಪ್ರಾಣಿ, ಪಕ್ಷಿ ಪ್ರಭೇದ, ಪರಿಸರದ ಅಂತರ್ಜಲ, ತಾಪಮಾನ ನಿಯಂತ್ರಣ, ಆಮ್ಲಜನಕ ಸೇರಿದಂತೆ ಹಲವಾರು ಜೀವಪರ ಅಂಶಗಳನ್ನು ಹೊಂದಿವೆ. […]

ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಹಿಂದಿ ಶಿಕ್ಷಾ ಶಾಸ್ತ್ರ ಪುಸ್ತಕ ಬಿಡುಗಡೆ

ಮೂಡಬಿದ್ರಿ ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ ಬಿ.ಇಡಿ ಮೊದಲ ಸೆಮಿಸ್ಟರ್‌ನ ಹಿಂದಿ ವಿಷಯದ ಪರಿಷ್ಕೃತ ‘ಹಿಂದಿ ’ ಪಠ್ಯಪುಸ್ತಕ ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬುಧವಾರ ಬಿಡುಗಡೆ ಮಾಡಿದರು.ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶಂಕರಮೂರ್ತಿ ಎಚ್.ಕೆ,, ಲೇಖಕರಾದ ಉಪನ್ಯಾಸಕ ರಘುನಂದನ್ ಇದ್ದರು.ಈ ಪುಸ್ತಕವು ಹಿಂದಿ ಭಾಷೆಗೆ ಸಂಬAಧಿಸಿದAತೆ ಭಾಷೆಯ ಪರಿಚಯ, ಭಾಷೆಯ ಘಟಕ, ಭಾಷೆಯ ವೈವಿಧ್ಯ, ಮಾತೃಭಾಷೆ, ಭಾಷಾ ನೀತಿಗಳು ಮತ್ತು ಭಾಷಾ ಸೂತ್ರಗಳು, ಭಾಷಾ ಕಲಿಕೆ, ಭಾಷಾ ಪಠ್ಯಕ್ರಮ, ಕಲಿಕಾ ಚಟುವಟಿಕೆಗಳನ್ನು ಒಳಗೊಂಡಿದೆ.

ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ರಾಂ ಅಜೆಕಾರು ‘ಪತ್ರಿಕೋದ್ಯಮವು ಕಾಳಜಿಯ ಬರಹ’

ವಿದ್ಯಾಗಿರಿ(ಮೂಡುಬಿದಿರೆ): ‘ನಿಷ್ಪಕ್ಷಪಾತವಾಗಿ ಬದ್ಧತೆ- ಕಾಳಜಿಯಿಂದ ಬರೆಯುವುದೇ ಪತ್ರಿಕೋದ್ಯಮ’ ಎಂದು ಕಾರ್ಕಳ ಕನ್ನಡಪ್ರಭ ವರದಿಗಾರ ರಾಂ ಅಜೆಕಾರು ಹೇಳಿದರು.ಆಳ್ವಾಸ್ ಕಾಲೇಜು ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಸುದ್ದಿಯ ವೈಭವೀಕರಣ ಸಲ್ಲದು. ಸುದ್ದಿ ಸಕಾರಾತ್ಮಕ ಬದಲಾವಣೆಗೆ ಒತ್ತು ನೀಡಬೇಕು. ಅದು ಮನಸ್ಸಿಗೆ ನೆಮ್ಮದಿ, ಸೌಹಾರ್ದತೆ ಸೃಷ್ಟಿಸಬೇಕು ಎಂದ ಅವರು, ಜನಪ್ರಿಯರ ಬಗ್ಗೆ ಬರೆಯುವ ಬದಲು ಹಳ್ಳಿಗರ ಬದುಕು, ಸಮಸ್ಯೆಗಳಲ್ಲಿ ಇರುವವರ ಸುದ್ದಿ ಮಾಡಬೇಕು ಎಂದರು.ಜನರಲ್ಲಿ ಪರಿಸರ ಪ್ರಜ್ಞೆ ಅಗತ್ಯ. […]