# Tags

ಅಧ್ಯಾತ್ಮದ ಕಡೆಗೆ ಮನಸ್ಸು ಕೇಂದ್ರೀಕರಿಸಿ: ಸ್ವಾಮಿನಿ ಮಂಗಳಾಮೃತ ಪ್ರಾಣ

ಉಚ್ಚಿಲ ದಲ್ಲಿ ಗುರು ಪೂರ್ಣಿಮ ಆಚರಣೆ ಉಚ್ಚಿಲ: ನಮ್ಮೊಳಗಿನ ನಮ್ಮನ್ನು ಅರಿತುಕೊಳ್ಳಲು, ಲೌಕಿಕ ಸಮಸ್ಯೆಗಳನ್ನು ನಿವಾರಿಸಲು ಆಧ್ಯಾತ್ಮವು ಸಕಾರಾತ್ಮಕ ದಾರಿಯಾಗಿದ್ದು, ನಾವೆಲ್ಲರೂ ಆಧ್ಯಾತ್ಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು.ದ.ಕ, ಉಡುಪಿ ಮತ್ತು ಉ.ಕ ವ್ಯಾಪ್ತಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ವತಿಯಿಂದ ಉಚ್ಚಿಲ ಮಹಾಲಕ್ಷ್ಮೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರು ಪೂರ್ಣಿಮಾ ಆಚರಣೆಯ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು. ಸಾವಿರಾರು ಭಕ್ತರು ಭಾಗಿ:ಗ್ರಹಚಾರಾಧಿ ಸಂಕಷ್ಟ […]

ಹೆತ್ತವರ ಪೂಜೆ ಮಾಡಿದ ಮಕ್ಕಳು: ಮಂಗಳೂರಿನ ಶಾಲೆಯಲ್ಲಿ ಭಾರತದ ಸಂಸ್ಕೃತಿ ದರ್ಶನ

ಮಂಗಳೂರು: ಇಲ್ಲಿನ ಶಾಲೆಯೊಂದರಲ್ಲಿ ಶಾಲಾ ಮಕ್ಕಳು ತಮ್ಮ ಹೆತ್ತವರ ಪಾದ ತೊಳೆದು, ಹೂವು ಸಮರ್ಪಿಸಿ, ತಿಲಕ ಹಚ್ಚಿ, ಶಿರಸಾ ನಮಿಸಿ, ಆರತಿ ಬೆಳಗಿ ಹೆತ್ತವರ ಪೂಜೆ ಮಾಡಿ ಗುರು ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆಯ ನಿಮಿತ್ತ ಮಾತಾ ಪಿತಾ ಗೌರವ ಸಮರ್ಪಣೆಯ ಸಂಸ್ಕೃತಿ ಪೂಜೆ ನೆರವೇರಿತು. ಈ ಸಂದರ್ಭ ಶಾಲಾ ಮಕ್ಕಳು ಭಾರತೀಯ ಸನಾತನ ಸಂಸ್ಕೃತಿಯಂತೆ ತಮ್ಮ ತಾಯಿ ತಂದೆಗೆ ವಿದ್ಯುಕ್ತವಾಗಿ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿ ಆಶೀರ್ವಾದ […]

ಬಂಟಕಲ್ ಕಾಲೇಜಿನಲ್ಲಿ “ಹ್ಯಾಕೋತ್ಸವ ೨೦೨೩ರ” ಸಮಾರೋಪ ಸಮಾರಂಭ

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗವು ಕಾಲೇಜಿನ ಇನ್ನೋವೇಶನ್ ಘಟಕ ಮತ್ತು ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ರಾಜ್ಯಮಟ್ಟದ ೨೪ ಗಂಟೆಗಳ ಹ್ಯಾಕಥಾನ್ ಹ್ಯಾಕೋತ್ಸವ ೨೦೨೩ರ ಸಮಾರೋಪ ಸಮಾರಂಭವು  ಕಾಲೇಜಿನ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕಂಬಳ ಸೊಲ್ಯುಶನ್ಸ್, ಬಿವಾಮ್ ಇಂಡಿಯ ಮತ್ತು ನಿವ್ಯಸ್ ಸೊಲ್ಯುಶನ್ಸ್ ಪ್ರಾಯೊಜಕತ್ವ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವ್ಯಸ್ ಸೊಲ್ಯುಶನ್ಸ್ ಡಾಟಾ ಆರ್ಕಿಟೆಕ್ಟ್ ಶ್ರೀ ಪ್ರಸಾದ್ ಪೈ ಕೆ ಭಾಗವಹಿಸಿದ್ದರು.    ಸಂಸ್ಥೆಯ ಪ್ರಾಂಶುಪಾಲರಾದ […]

ಮಂಗಳೂರು : ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಿಪಡಿತ್ತಾಯ ನಿವೃತ್ತಿ, ಅಧಿಕಾರ ಹಸ್ತಾಂತರ

ಮಂಗಳೂರು : ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಸೇವಾನಿವೃತ್ತಿ ಹೊಂದಿದ್ದುಶುಕ್ರವಾರ ಅಧಿಕಾರ ಹಸ್ತಾಂತರಿಸಿದರು. ರಾಜ್ಯ ಶಾಸ್ತ್ರದ ಹಿರಿಯ ಪ್ರೊಫೆಸರ್ ಹಾಗೂ ಆರ್ಟ್ಸ್‌ ವಿಭಾಗದ ಡೀನ್ ಆಗಿರುವ ಪ್ರೊ. ಜಯರಾಜ ಅಮೀನ್ ಅವರಿಗೆ ಪ್ರೊ ಸುಬ್ರಹ್ಮಣ್ಯ ಯಡಪಡಿತ್ತಾಯಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರೊ .ರಾಜಕೃಷ್ಣ ಚರಣ್ಣನವರ್, ಪ್ರೊ .ಸಂಗಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು ,ಸಂಯೋಜಕರು ಉಪಸ್ಥಿರಿತರಿದ್ದರು.