# Tags

ಕೇರಳ: ತ್ರಿಶೂರ್​ನ ವಿಷ್ಣುಮಾಯ ದೇವಾಲಯದಲ್ಲಿ ನಟಿ ಖುಷ್ಬೂ ಪಾದ ತೊಳೆದು ನಾರಿ ಪೂಜೆ

ಕೇರಳ: ತ್ರಿಶೂರ್​ನ ವಿಷ್ಣುಮಾಯ ದೇವಾಲಯದಲ್ಲಿ ನಟಿ ಖುಷ್ಬೂ ಪಾದ ತೊಳೆದು ನಾರಿ ಪೂಜೆ  ಕೇರಳ : ಚಿತ್ರನಟಿ, ಬಿಜೆಪಿ ನಾಯಕಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರನ್ನು ಕೇರಳದ ವಿಷ್ಣುಮಾಯಾ ದೇವಸ್ಥಾನಕ್ಕೆ ಆಹ್ವಾನಿಸಿ ಪಾದಪೂಜೆ ನೆರವೇರಿಸಿದ್ದಾರೆ.  ಖುಷ್ಬುರವರಿಗೆ ದೇವಳಧ ಅರ್ಚಕರು ಪೂಜೆ ಮಾಡಿರುವ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.   ಕೇರಳದ ತ್ರಿಶೂರ್‌ನ ವಿಷ್ಣುಮಾಯಾ ದೇವಸ್ಥಾನದಲ್ಲಿ ಖುಷ್ಬೂ ಅವರಿಗೆ ಸುಹಾಸಿನಿ ಪೂಜಾ ಎಂದು ಕರೆಯಲಾಗುವ ನಾರಿ ಪೂಜೆಯನ್ನು ಇತ್ತೀಚೆಗೆ ನೆರವೇರಿಸಿರುವುದು ಗಮನ ಸೆಳೆದಿದೆ. […]

ನಿಫಾ: ಕೇರಳ ಗಡಿಯಲ್ಲಿ ತೀವ್ರ ತಪಾಸಣೆ

ನಿಫಾ: ಕೇರಳ ಗಡಿಯಲ್ಲಿ ತೀವ್ರ ತಪಾಸಣೆ   ಚಾಮರಾಜನಗರ : ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ ಗಡಿ ಪ್ರದೇಶದ ಕೋಯಿಕ್ಕೊಡ್ ಜಿಲ್ಲೆಯಲ್ಲಿ ನಿಪಾ ವೈರಾಣು ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಗುಂಡ್ಲುಪೇಟೆ ತಾಲ್ಲೂಕಿನ ಗಡಿ ಚೆಕ್ಪೋಸ್ಟ್ ಮೂಲೆಹೊಳೆಯಲ್ಲಿ ಅರಣ್ಯ ಸಿಬ್ಬಂದಿಗಳು ಬೀಡುಬಿಟ್ಟು ಕೇರಳದಿಂದ ತಾಲ್ಲೂಕಿನ ಕಡೆಗೆ ಬರುವ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸುತ್ತಿದ್ದಾರೆ.  ಗುಂಡ್ಲುಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಲೀಂ ಪಾಷಾ ಅವರ ನೇತೃತ್ವದಲ್ಲಿ ಕೇರಳದಿಂದ ಬರುವ ವಾಹನಗಳ ಚಾಲಕ, ಸಹಾಯಕ ಮತ್ತು ಸಾರ್ವಜನಿಕರನ್ನು ಜ್ವರ ತಪಾಸಣೆ ಮಾಡುತ್ತಿದ್ದಾರೆ.  ಆರೋಗ್ಯದಲ್ಲಿ […]

 ಕೇರಳದಲ್ಲಿ ಮತ್ತೆ ನಿಫಾ ವೈರಸ್ ಭೀತಿ: ಕಟ್ಟೆಚ್ಚರ

ಕೇರಳದಲ್ಲಿ ಮತ್ತೆ ನಿಫಾ ವೈರಸ್ ಭೀತಿ : ಕಟ್ಟೆಚ್ಚರ ಕೋಝಿಕ್ಕೋಡ್:  2018ರಲ್ಲಿ ಕೇರಳವನ್ನು ಬೆಚ್ಚಿ ಬೀಳಿಸಿದ್ದ ನಿಫಾ ವೈರಸ್ ಮತ್ತೊಮ್ಮೆ ಮಲೆಯಾಳಿಗರ ನಿದ್ದೆಗೆಡಿಸಿದೆ. ಕೇರಳದಲ್ಲಿ ಇಬ್ಬರು ಜ್ವರದಿಂದ ಸಾವನ್ನಪ್ಪಿದ್ದು, ಇದಕ್ಕೆ ನಿಫಾ ವೈರಸ್ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಜ್ವರ ಬಾಧಿಸಿದ ಇಬ್ಬರು ಮೃತಪಟ್ಟಿರುವುದರಿಂದ ಜಿಲ್ಲೆಯಾದ್ಯಂತ ಎಚ್ಚರಿಕೆ ನೀಡಲಾಗಿದೆ. ಈ ಸಾವಿಗೆ ನಿಫಾ ವೈರಸ್ ಕಾರಣ ಎನ್ನಲಾಗಿದ್ದು, ಮೃತರಲ್ಲಿ ಒಬ್ಬರ ಸಂಬಂಧಿಕರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ವೈದ್ಯಕೀಯ […]

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ- ಹಂದಿಗಳನ್ನು ಕೊಂದು ಹಾಕಲು ಜಿಲ್ಲಾಧಿಕಾರಿ ಸೂಚನೆ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ– ಹಂದಿಗಳನ್ನು ಕೊಂದು ಹಾಕಲು ಜಿಲ್ಲಾಧಿಕಾರಿ ಸೂಚನೆ ತಿರುವನಂತಪುರಂ,ಆ 19 : ಕೇರಳದ ಕನಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಹಂದಿಗಳನ್ನು ಎರಡು ಫಾರ್ಮ್‌ಗಳಲ್ಲಿ ಕೊಲ್ಲಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.  ಶುಕ್ರವಾರ ಮಲೆಯಂಪಾಡಿನಲ್ಲಿ ಹಂದಿ ಜ್ವರ ಪತ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ದೃಢಪಟ್ಟಿಸಿದ್ದಾರೆ. ನಂತರ, ಜಿಲ್ಲಾಧಿಕಾರಿಗಳು ಹಂದಿಗಳನ್ನು ಮಲೆಯಂಪಾಡಿಯಲ್ಲಿರುವ ಮತ್ತು 10 ಕಿಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ ನೀಡಿದ್ದು, ಅದನ್ನು ಶಿಷ್ಟಾಚಾರದ ಪ್ರಕಾರ […]

ಲುಲು ಮಾಲ್‌ನಲ್ಲಿ ಬುರ್ಖಾಧರಿಸಿ ಮಹಿಳೆಯರ ವಾಶ್ ರೂಂನಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ ಸಿಕ್ಕಿಬಿದ್ದ ಯುವಕ

ಲುಲು ಮಾಲ್‌ನಲ್ಲಿ ಬುರ್ಖಾಧರಿಸಿ ಮಹಿಳೆಯರ ವಾಶ್ ರೂಂನಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ ಸಿಕ್ಕಿಬಿದ್ದ ಯುವಕ   ಕೇರಳ:  ಲುಲು ಮಾಲ್‌ನಲ್ಲಿ ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ಪ್ರವೇಶಿಸಿ ಮೊಬೈಲ್ ಫೋನ್‌ನಲ್ಲಿ ಅಲ್ಲಿಯ ಚಲನವಲನಗಳ ವೀಡಿಯೊ ರೆಕಾರ್ಡ್ ಮಾಡಿದ ಆರೋಪದ ಮೇಲೆ 23 ವರ್ಷದ ಐಟಿ ವೃತ್ತಿಪರನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿ ಬಿ. ಟೆಕ್ ಪದವೀಧರನಾಗಿದ್ದು, ಆತನ ವಿರುದ್ಧ  ಐಪಿಸಿಯ ಸೆಕ್ಷನ್ 354 (ಸಿ) ಮತ್ತು 419 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಅಡಿಯಲ್ಲಿ ಕೇಸ್ […]

ಕೇರಳ ಮಾಜಿ ಮುಖ್ಯಮಂತ್ರಿ‌ ಓಮೆನ್ ಚಾಂಡಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ

ಕೇರಳ ಮಾಜಿ ಮುಖ್ಯಮಂತ್ರಿ‌ ಓಮೆನ್ ಚಾಂಡಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ   ಬೆಂಗಳೂರು, ಜು 18: ಹಿರಿಯ ರಾಜಕೀಯ ಮುತ್ಸದ್ದಿ ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ‌ ಓಮೆನ್ ಚಾಂಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ನನಗೆ ಅತ್ಯಂತ ಆತ್ಮೀಯರಾಗಿದ್ದ ಓಮೆನ್ ಚಾಂಡಿಯವರ ನಿಧನದ ಸುದ್ದಿ ಆಘಾತಕಾರಿ. ಕೇರಳ‌ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ  ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಓಮನ್ ಚಾಂಡಿ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಕೇರಳ […]

ಕೇರಳಕ್ಕೆ ಮುಂಗಾರು ಆಗಮನ: ಮಳೆ ಆರಂಭ

ತಿರುವನಂತಪುರ: ಗುರುವಾರ ಕೇರಳಕ್ಕೆ ಮಾನ್ಸೂನ್ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಪ್ರತಿ ವರ್ಷ ಜೂನ್ 1 ರಂದು ಕೇರಳಕ್ಕೆ ಮುಂಗಾರು ಆಗಮಿಸುತ್ತಿದ್ದು, ಈ ವರ್ಷ 7 ದಿನ ತಡವಾಗಿ ಕೇರಳಕ್ಕೆ ಮುಂಗಾರು ಆಗಮಿಸಿದೆ. ಇಂದು ಬೆಳಗ್ಗೆಯಿಂದಲೇ ಕೇರಳದ ಎಲ್ಲಾ ಭಾಗಗಳಲ್ಲಿ ಮಳೆ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ವ್ಯಾಪಕ ಮಳೆಯಾಗಿದೆ. ಈ ಪರಿಸ್ಥಿತಿಗಳನ್ನು ಪರಿಗಣಿಸಿ, ನೈಋತ್ಯ ಮಾನ್ಸೂನ್ ಕೇರಳಕ್ಕೆ ಕಾಲಿಟ್ಟಿದೆ ಎಂದು ಹೇಳಬಹುದು ಭಾರತೀಯ ಹವಾಮಾನ ಸಂಸ್ಥೆ ಹೇಳಿದೆ. ಕರ್ನಾಟಕವೂ ಸೇರದಂತೆ ಅನೇಕ […]

ಕೇರಳ; ರೈಲಿನೊಳಗೆ ಬೆಂಕಿ ಹಚ್ಚಲು ಯತ್ನ, ಆರೋಪಿಗೆ ಮಾನಸಿಕ ಅಸ್ವಸ್ಥ ಎಂಬ ಶಂಕೆ

 ಕೋಝಿಕೋಡ್: ಕಣ್ಣೂರು-ಎರ್ನಾಕುಲಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ನಂತರ ಪ್ರಯಾಣಿಕರು ಆರ್‌ಪಿಎಫ್‌ಗೆ ಹಸ್ತಾಂತರಿಸಿದ ಆರೋಪಿಗೆ ರಿಮಾಂಡ್ ಮಾಡಲಾಗಿದೆ. ಮಹಾರಾಷ್ಟ್ರದ ಲೋಹರಾ ಅಕೋಲಾ ಮೂಲದ ಸಚಿನ್ ಪ್ರಮೋದ್ ಬಾಕಲ್ (20) ಎಂಬಾತನನ್ನು ಕೋಝಿಕ್ಕೋಡ್ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ಕಾಲ ರಿಮಾಂಡ್ ವಿಧಿಸಿದೆ. ಈತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ದೃಢಪಡಿಸಿದ್ದರೂ,  ಎಲತ್ತೂರು ಮತ್ತು ಕಣ್ಣೂರು ರೈಲಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ.   ಈತನ […]