# Tags
#ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಸೆ. 3: ಮಂಗಳಗೌರಿ ಪೂಜೆ, ನವದುರ್ಗಾ ಲೇಖನ ಯಜ್ಞಸಂಕಲ್ಪ ಸ್ವೀಕಾರ, ಸಮಿತಿ ಉದ್ಘಾಟನೆ (Kaup Sri Hosa mari Gudi Temple: Mangala Gauri Pooja, Navadurga yajna Sankalpa sweekara, inauguration of commettee)

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಸೆ. 3: ಮಂಗಳಗೌರಿ ಪೂಜೆ, ನವದುರ್ಗಾ ಲೇಖನ ಯಜ್ಞಸಂಕಲ್ಪ ಸ್ವೀಕಾರ, ಸಮಿತಿ ಉದ್ಘಾಟನೆ

 (Kaup) ಕಾಪು, ಸೆ.1: ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದಲ್ಲಿ ಪ್ರಥಮ ಹಂತದ ಸಮಗ್ರ ಜೀರ್ಣೋ ದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, 2025ರ ಮಾರ್ಚ್‌ನಲ್ಲಿ ಜರಗಲಿರುವ ಜೀರ್ಣೋದ್ಧಾರ, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡೀಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಹೇಳಿದರು.

 ಹೊಸ ಮಾರಿಗುಡಿ ಜೀರ್ಣೋದ್ಧಾರ ಸಮಿತಿಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇವಸ್ಥಾನದ ಪ್ರಧಾನ ತಂತ್ರಿ ಕೆ. ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ। ಮೂ| ಶ್ರೀನಿವಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಸೆ. 3ರಂದು ಬೆಳಗ್ಗೆ ಮಂಗಳ ಗೌರಿ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞ ಪೂರ್ವಭಾವಿ ಲೇಖನ ಸಂಕಲಕ್ಕೆ ಚಾಲನೆ ನೀಡಲಾಗುವುದು. 9.09ಕ್ಕೆ ಮಂಗಳಗೌರಿ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭವಾಗಲಿದೆ ಎಂದರು.

  ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ, ಸಂಸದರು, ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು, ಆಂಧ್ರಪ್ರದೇಶ ಕಲ್ಯಾಣಗುರ್ಗ ಶಾಸಕ ಅಮಿಲಿನೆನಿ ಸುರೇಂದ್ರ ಬಾಬು ಸಹಿತ ಗಣ್ಯರ ಉಪಸ್ಥಿತಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಲೇಖನ ಯಜ್ಞದಲ್ಲಿ ಹೆಸರು ನೋಂದಾಯಿಸಿದ ವರಿಗೆ ಮಾರಿಗುಡಿಯಲ್ಲಿ ಧಾರ್ಮಿಕ ಪೂಜಾ ವಿಧಿ ಗಳನ್ನು ನೆರವೇರಿಸಿದ ಬಳಿಕ ನಿರ್ದಿಷ್ಟ ಗಾತ್ರದ ಪುಸ್ತಕ, ಬರವಣಿಗೆ ಸಾಮಗ್ರಿಗಳನ್ನು ಒದಗಿಸ ಲಾಗುತ್ತದೆ. ಪುಸ್ತಕವನ್ನು ಸಾವಿರಾರು ವರ್ಷಗಳ ವರೆಗೆ ಸಂರಕ್ಷಿಸಿಡಲು ಸೂಕ್ತ ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗುವುದ ಎಂದರು.

 ಕನಿಷ್ಠ 99,999 ಲೇಖನ ಯಜ್ಞ ಗುರಿ : ಕೆ. ರಘುಪತಿ ಭಟ್

 ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ಸೆ. 3ರಂದು 99 ಮಂದಿ ಮಹಿಳೆಯರ ನೇತೃತ್ವದಲ್ಲಿ 999 ಮಂದಿ ಲೇಖನ ಯಜ್ಞ ಸಂಕಲ್ಪವನ್ನು ಸ್ವೀಕರಿಸಲಿದ್ದು, ಕನಿಷ್ಠ 99,999 ಲೇಖನ ಯಜ್ಞ ಸಂಕಲ್ಪ ಗುರಿ ಹೊಂದಲಾಗಿದೆ. ನವದುರ್ಗಾ ಲೇಖನ ಯಜ್ಞ ಪುಸ್ತಕ ಪಡೆಯಲು ಭಕ್ತರು ರೂ. 199 ಪಾವತಿಸಿ, ಹೆಸರು ನೋಂದಾಯಿಸಬೇಕಿದ್ದು, ಬಳಿಕ ಮಂಗಳಗೌರಿ ಪೂಜೆಯಲ್ಲಿ ಪಾಲ್ಗೊಂಡು ನವದುರ್ಗಾ ಲೇಖನ ಯಜ್ಞದ ಸಂಕಲ್ಪ ಸ್ವೀಕರಿಸಲು ಅವಕಾಶ  ಮಾಡಿ ಕೊಡಲಾಗುವುದು ಎಂದರು.

 ಅ. 29ಕ್ಕೆ ಲೇಖನ ಪುಸ್ತಕ ಬಿಡುಗಡೆ :  ಆ. 28ರ ವರೆಗೆ ಯಜ್ಞ ಸಂಕಲ್ಪಕ್ಕೆ ಹೆಸರು ನೋಂದಣಿಗೆ ಅವಕಾಶವಿದ್ದು ಅ. 29ರಂದು ಶ್ರೀ ವಾಗೀಶ್ವರೀ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞದ ಪುಸ್ತಕ ವಿತರಿಸಲಾಗುವುದು. ಅ. 29ರ ಬಳಿಕ 45 ದಿನಗಳ ಒಳಗೆ ನವದುರ್ಗಾ ಲೇಖನವನ್ನು ಬರೆದು ಪುಸ್ತಕವನ್ನು ಸಾನಿಧ್ಯಕ್ಕೆ ತಲುಪಿಸಬೇಕು. 2025ರ ಫೆ. 4ರಂದು ಮಾರಿಯಮ್ಮ ಸನ್ನಿಧಿಯಲ್ಲಿ ನಮ್ಮ ಚಂಡೀ ಯಾಗದೊಂದಿಗೆ ಯಜ್ಞ ಸಂಪನ್ನಗೊಳ್ಳಲಿದೆ ಎಂದರು.

ಮುಂಬಯಿಯಲ್ಲೂ ಪೂರ್ಣ ಸಹಕಾರ : ಮುಂಬಯಿ ಸಮಿತಿ ಪ್ರಮುಖರಾದ ಎರ್ಮಾಳು ಹರೀಶ್ ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿ ಪೂನಾ ಮಾತನಾಡಿ, ಹೊಸ ಮಾರಿಗುಡಿ ದೇವಸ್ಥಾನದ ಜೀಣೋದ್ಧಾರ ಕಾರ್ಯದಲ್ಲಿ ಮುಂಬಯಿಯಿಂದಲೂ ದೊಡ್ಡ ರೀತಿಯ ಸಂಘಟನೆ, ಸಹಕಾರ ದೊರಕುತ್ತಿದೆ. ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯ ಮಗ್ನರಾಗಿದ್ದು, ಮುಂದೆ ನಡೆಯುವ ನವದುರ್ಗಾ ಲೇಖನ ಯಜ್ಞದಲ್ಲೂ ಹೆಚ್ಚಿನ ಭಕ್ತರು ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು. ಪ್ರಚಾರ ಸಮಿತಿ ಪ್ರಧಾನ ಸಂಚಾಲಕ, ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಸಂಯೋಜಕ ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt1