# Tags
#ಶಾಲಾ ಕಾಲೇಜು

ಬಂಟಕಲ್ ಕಾಲೇಜಿನಲ್ಲಿ “ರಾಷ್ಟ್ರಮಟ್ಟದ 36 ಗಂಟೆಗಳ  ಹ್ಯಾಕೋತ್ಸವ” ಉದ್ಘಾಟನೆ (naugural function of 36- hour National level Hackothsava – 2024 at SMVITM)

ಬಂಟಕಲ್ ಕಾಲೇಜಿನಲ್ಲಿರಾಷ್ಟ್ರಮಟ್ಟದ 36 ಗಂಟೆಗಳ  ಹ್ಯಾಕೋತ್ಸವಉದ್ಘಾಟನೆ

(Bantakal) ಬಂಟಕಲ್:‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಸಂಸ್ಥೆಯ ಇನ್ನೋವೇಶನ್ ಘಟಕ, ಐಎಸ್‌ಟಿಇ ಘಟಕ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ರಾಷ್ಟ್ರ ಮಟ್ಟದ 36 ಗಂಟೆಗಳ  ಹ್ಯಾಕೋತ್ಸವದ ಉದ್ಘಾಟನೆ ನಡೆಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಈ ಸಂದರ್ಭ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯವನ್ನು  ಅಭಿವೃದ್ಧಿ ಪಡಿಸಿ ಉದ್ಯೋಗವಕಾಶವನ್ನು ಪಡೆದುಕೊಳ್ಳಲು ನೆರವಾಗುತ್ತದೆ ಎಂದರು.

ಸಂಸ್ಥೆಯ ಉಪ ಪ್ರಾಂಶುಪಾಲ ಡಾ. ಗಣೇಶ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣಕಯಂತ್ರ ವಿಭಾಗದ ಪ್ರಾಧ್ಯಾಪರಾದ ದೀಪಕ್ ರಾವ್ ಸ್ವಾಗತಿಸಿ, ಸ್ಪರ್ಧೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಾದ ಅಭಿಷೇಕ್ ಕಿಣಿ ಪ್ರಾರ್ಥಿಸಿದರು. ಅಧಿತಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಸೌಮ್ಯಾ ಭಟ್ ವಂದಿಸಿದರು.

  ಸ್ಪರ್ಧೆಯಲ್ಲಿ ಭಾರತದ ವಿವಿಧ ರಾಜ್ಯಗಳ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಒಟ್ಟು 40 ವಿದ್ಯಾರ್ಥಿಗಳ ತಂಡವು ಭಾಗವಹಿಸಲಿದ್ದು, ವಿಜೇತ ತಂಡಕ್ಕೆ ತಲಾ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಗುತ್ತದೆ.

Leave a comment

Your email address will not be published. Required fields are marked *

Emedia Advt1