# Tags
#ವ್ಯವಹಾರ

ಬೆಳಪು ಕೈಗಾರಿಕಾ ಪಾರ್ಕಿನಲ್ಲಿ ಕೆ.ಐ.ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ (KIADB Officers Meeting at Belapu Industri park)

ಬೆಳಪು ಕೈಗಾರಿಕಾ ಪಾರ್ಕಿನಲ್ಲಿ ಕೆ...ಡಿ.ಬಿ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ

(Belapu) ಬೆಳಪು: ಬೆಳಪು ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಪಣಿಯೂರಿನಿಂದ ಬೆಳಪುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುರಿತು ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಎಸ್ ಎನ್ ಕ್ರಯೋಜೆನಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಜರಗಿತು .

 ಬೆಳಪು ಕೈಗಾರಿಕಾ ಪ್ರದೇಶದಲ್ಲಿ ಸುಮಾರು 54 ಕೈಗಾರಿಕಾ ಕೇಂದ್ರಗಳು ಪ್ರಾರಂಭಗೊಳ್ಳಲಿದ್ದು, ಈಗಾಗಲೇ ಹಲವಾರು ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿದೆ.  ಪಣಿಯೂರಿನಿಂದ ಬೆಳಪುವಿಗೆ ಸಾಗುವ ಸಂಪರ್ಕ ರಸ್ತೆ ತೀರಾ ಹದೆಗಟ್ಟಿದೆ. ಇದನ್ನು ಅಗಲೀಕರಣ ಗೊಳಿಸಿ ಅಭಿವೃದ್ಧಿಪಡಿಸಲು ಸುಮಾರು 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯನ್ನು KIADB ಯವರು ಸಿದ್ಧಪಡಿಸಿದ್ದು, ಸುಮಾರು 2.70 ಎಕರೆ  ಜಾಗ ರೈತರಿಂದ ಭೂಸ್ವಾಧೀನ ಪಡಿಸಿಕೊಂಡು, ಗ್ರಾಮಸ್ಥರಿಗೆ ಸಮರ್ಪಕ ಪರಿಹಾರ ನೀಡಿಲ್ಲ.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ, ತಕ್ಷಣ ಪರಿಹಾರವನ್ನು ರೈತರಿಗೆ ನೀಡಬೇಕು.

ಸಣ್ಣ ಕೈಗಾರಿಕೆಗಳು ತೀರಾ ನಷ್ಟದಲ್ಲಿ ಇರುವುದರಿಂದ ರಸ್ತೆ ಅಭಿವೃದ್ಧಿಪಡಿಸಿ 6 ಕೋಟಿ ಹೊರೆಯನ್ನು ಕೈಗಾರಿಕಾ ಮಾಲಕರಿಗೆ ಹಾಕುವುದು ಸರಿಯಲ್ಲ. ಇದನ್ನು  ಸರಕಾರ, ಸಂಸದರು, ಶಾಸಕರ ಗಮನಕ್ಕೆ ತಂದು ರಸ್ತೆ ಅಭಿವೃದ್ಧಿಗೊಳಿಸಲು ಮನವಿ ಮಾಡುತ್ತೇನೆ ಎಂದು ಶೆಟ್ಟಿ ಅವರು ತಿಳಿಸಿದರು.

ಕೈಗಾರಿಕಾ ಪ್ರದೇಶದಲ್ಲಿ ನಿರ್ವಹಣೆ, ತ್ಯಾಜ್ಯ , ಹರಿಯುವ ನೀರಿನ ಚರಂಡಿಗಳು ಸರಿಯಾಗಿ ಇಲ್ಲದ ಕಾರಣ ರೈತರ ಜಮೀನಿಗೆ ನೀರು ನುಗ್ಗಿ ಕೃತಕ ನೆರೆ ಉದ್ಭವವಾಗಿದೆ ಎಂದು ಕೆಇಡಿಬಿಯ ಅಧಿಕಾರಿಗಳ ಗಮನ ಸೆಳೆದರು.

  ಶಿವಾಲಯದಿಂದ ಗ್ರಾಮಸ್ಥರಿಗೆ ಬೆಳಪುವಿಗೆ ಕಾಲುದಾರಿಯಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಕೆಐಎಡಿಬಿ ವಲಯದಲ್ಲಿರುವ ಶಿವಾಲಯದ ಅಭಿವೃದ್ಧಿಗೆ ಕೈಗಾರಿಕಾ ಪ್ರದೇಶದ ಮಾಲಕರು ಕೈಜೋಡಿಸಬೇಕು. ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ನೀಡಬೇಕಾಗಿ ಕಾರ್ಖಾನೆಯ ಮಾಲಕರಲ್ಲಿ ವಿನಂತಿಸಿದರು. ಅಲ್ಲದೆ ಕೈಗಾರಿಕಾ ಪ್ರದೇಶದ ವಿವಿಧ ಸಮಸ್ಯೆಗಳ ಬಗ್ಗೆ ಹಾಗೂ ಕೈಗಾರಿಕಾ ಸ್ಥಳಗಳ ಸಮಸ್ಯೆ ಪರಿಹರಿಸಬೇಕೆಂದು ಎಸ್ ಎನ್ ಕ್ರಯೋಯೋಜನಿಕ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್  ನಟರಾಜ ಹೆಗ್ಡೆ ಕೆ ಐ ಡಿ ಬಿ ಯ ಅಧಿಕಾರಿಗಳ ಗಮನಕ್ಕೆ ತಂದರು.

ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಸರಕಾರದ ತೀರ್ಮಾನದಂತೆ ಗುಡಿ ಕೈಗಾರಿಕಾ ಯೋಜನೆ ಅಡಿಯಲ್ಲಿ ವಾಸಿಸುತ್ತಿದ್ದ ಸ್ಥಳವನ್ನು ಮಂಜೂರು ಮಾಡಿ ಕೊಡಿಸುವಂತೆ, ಕೈಗಾರಿಕಾ ಪ್ರದೇಶದ ಕಾರ್ಖಾನೆಯ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸುವಂತೆ ಡಾ ದೇವಿ ಪ್ರಸಾದ್ ಶೆಟ್ಟಿ ಅವರು ವಿನಂತಿಸಿದರು. ಇದಕ್ಕೆ KIADB ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.

  ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ಕಾಪು ಶಾಸಕ  ಸುರೇಶ್ ಶೆಟ್ಟಿ ಗುರ್ಮೆಯವರು ರಸ್ತೆ ಕಾಮಗಾರಿಗೆ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದರು .

  ಸಭೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ರಾಜು,  ಡಿಐಸಿ ಉಡುಪಿ ಜಂಟಿ ನಿರ್ದೇಶಕ ನಾಗರಾಜ್, ಸೀತಾರಾಮ ಶೆಟ್ಟಿ, ದತ್ತಾತ್ರಿ, ಇಂಜಿನಿಯರ್ ಗಣಪತಿ  ರತ್ನಾಕರ್, ಹಾಗೂ ಕೈಗಾರಿಕಾ ಪ್ರದೇಶದ ಮಾಲಕರುಗಳಾದ  ವಸಂತ ಹೆಗ್ಡೆ, ಹರೀಶ್ ನಾಯಕ್ ಕಾಪು, ಸುಧಾಕರ್ ಶೆಟ್ಟಿ ಮಕರ, ದಿನಕರ್ ಬಾಬು, ಕಿರಣ್ ಹೆಗ್ಡೆ, ಭೂಷಣ್ ರಾವ್, ನಾಗರಾಜ್ ಪ್ರಭು, ಸುರೇಶ್ ಶೆಟ್ಟಿ ಅಯೋಧ್ಯಾ, ದುರ್ಗಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt1