# Tags
#ಸಂಘ, ಸಂಸ್ಥೆಗಳು

ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ,  ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ (Recruitment of Yuvavahini Padubidri Unit, Distribution of Scolorship, Honor to achievers)

ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ,  ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ 

 (Padubidri) ಪಡುಬಿದ್ರಿ : ಅವಿಭಜಿತ ಜಿಲ್ಲೆಯಲ್ಲಿ ವಿದ್ಯೆ, ಉದ್ಯೋಗ, ಸಂಪರ್ಕದ ತತ್ವದಲ್ಲಿ ಆದರ್ಶತೆ ಮೆರೆದ ಸಂಸ್ಥೆ ಯುವವಾಹಿನಿ. ಈ ಸಂಘಟನೆ ತೆರೆಮರೆಯಲ್ಲಿ ಹಲವಾರು ಕಾರ್ಯಗಳನ್ನು ಮಾಡುತ್ತಿದೆ. ಯುವಕರು ಸಮಾಜದಲ್ಲಿ ತಪ್ಪು ದಾರಿಗೆ ಹೋಗದೆ ಸರಿ ದಾರಿಯಲ್ಲಿ ಸಾಗುವ ಪಥ ತೋರಿಸುವ ಸಂಸ್ಥೆಯಾಗಿದೆ ಎಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹೇಳಿದರು.

 ಅವರು ಭಾನುವಾರ ಪಡುಬಿದ್ರಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

 ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ದ್ವಿತೀಯ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಪ್ರತಿಜ್ಞಾ ವಿಧಿ ಬೋಧಿಸಿದರು.

ಅಧಿಕಾರ ಹಸ್ತಾಂತರ : ಘಟಕದ ಅಧ್ಯಕ್ಷರಾದ ಅಶ್ವಥ್ ಎಸ್. ನಿಯೋಜಿತ ಅಧ್ಯಕ್ಷರಾದ ಶಶಿಕಲಾ ಯಶೋಧ‌ರ್ ಮತ್ತು ಕಾರ್ಯದರ್ಶಿ ನಿಖಿಲ್ ಪೂಜಾರಿ ನಿಯೋಜಿತ ಕಾರ್ಯದರ್ಶಿ ಸುಜಾತ ಪ್ರಸಾದ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.

ವಿದ್ಯಾರ್ಥಿವೇತನ /ಸಾಧನಾ ಸನ್ಮಾನ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 3ನೇ ರ‍್ಯಾಂಕ್, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಮಥ್೯ ಆರ್ ಜೋಶಿ, ರಾಜ್ಯದಲ್ಲಿ 5ನೇ ರ‍್ಯಾಂಕ್ ಪಡೆದ ಚಿನ್ಮಯಿ ಪೈ, ಸ್ನಾತ್ತಕೋತ್ತರ ಆಯುರ್ವೇದ ವೈದ್ಯಕೀಯ ಶಿಕ್ಷಣದಲ್ಲಿ 6ನೇ ರ‍್ಯಾಂಕ್ ಗಳಿಸಿದ ಐಶ್ವರ್ಯ ಸಿ ಅಂಚನ್, ಜೇಸಿ ಸಾಧನಶ್ರೀ ಪ್ರಶಸ್ತಿ ಪುರಸ್ಕೃತ ಯಶೋಧ ಪೂಜಾರಿ, ಎಂಬಿಎ ಪದವಿಗಳಿಸಿದ ಪವಿತ್ರಾ, ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿ ತೇರ್ಗಡೆಯಾದವರನ್ನು ಸನ್ಮಾನಿಸಲಾಯಿತು. ಕಲಿಕಾ ಪ್ರೋತ್ಸಾಹಕ  ವಿದ್ಯಾರ್ಥಿವೇತನ ವಿತರಿಸಲಾಯಿತು. ಕೇಂದ್ರ ಸಮಿತಿಯ ಉಪಾಧ್ಯಕ್ಷರು, ಘಟಕದ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷರಾದ ಅಶ್ವಥ್ ಎಸ್. ವಹಿಸಿದ್ದರು.

 ವೇದಿಕೆಯಲ್ಲಿ ಹೊಸಪೇಟೆಯ ಯುವ  ವಕೀಲ ಅಶೋಕ್ ಎಸ್. ಪೂಜಾರಿ, ಯುವ ಉದ್ಯಮಿ, ಜೇಸಿ ರಾಷ್ಟ್ರ ಪ್ರಶಸ್ತಿ ವಿಜೇತ ಸುಭಾಷ್ ಕುಮಾರ್ ನಂದಳಿಕೆ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಭಾರತಿ ಭಾಸ್ಕರ್ ಉಪಸ್ಥಿತರಿದ್ದರು.

 ಸುಜಾತ ಹರೀಶ್ ಮತ್ತು ಸುಗಂಧಿ ಶ್ಯಾಮ್ ಪ್ರಾರ್ಥಿಸಿದರು. ಅಶ್ವಥ್ ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ನಿಖಿಲ್ ಪೂಜಾರಿ ವರದಿ ವಾಚಿಸಿದರು. ಚೈತ್ರ ಮನೋಹರ್ ಮತ್ತು ಉಷಾ ಕಾರ್ಯಕ್ರಮ ನಿರೂಪಿಸಿದರು. ಸುಜಾತ ಪ್ರಸಾದ್ ವಂದಿಸಿದರು.

Leave a comment

Your email address will not be published. Required fields are marked *

Emedia Advt1