# Tags
#fastival #ವಿಡಿಯೋ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ ೩೭ನೇ ವರ್ಷದ ಗಣೇಶನ ವಿಸರ್ಜನೆ (37th Uchila Sri Sarvajanika Ganeshothsava)

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 37ನೇ ವರ್ಷದ ಗಣೇಶನ ವಿಸರ್ಜನೆ

(Uchila)ಉಚ್ಚಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಗಣೇಶ ಮೂರ್ತಿಯ ವಿಸರ್ಜನೆಯು ಉಚ್ಚಿಲ ಶ್ರೀ ಬದ್ದಿಜೆ ಮಠದ ಪುಷ್ಕರಣಿಯಲ್ಲಿ ವಿಸರ್ಜನೆಗೊಳಿಸಲಾಯಿತು. 

 ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಮತ್ತು ವೇದಮೂರ್ತಿ ವಿಷ್ಣುಮೂರ್ತಿ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಕಳೆ ಶನಿವಾರ ಬೆಳಿಗ್ಗೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಬಳಿಯ ಶ್ರೀಮತಿ ಶಾಲಿನಿ ಡಾ. ಜಿ ಶಂಕರ್‌ ತೆರೆದ ಸಭಾಂಗಣದ ಶ್ರೀ ಲಕ್ಷ್ಮಿ ಮಂಟಪದಲ್ಲಿ ಗಣೇಶನ ಮೃಣ್ಮಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

  ಗಣಪತಿಗೆ ಅಥರ್ವ ಶೀರ್ಷಯಾಗ, 108 ತೆಂಗಿನ ಕಾಯಿಯ ಗಣಹೋಮ, ವಿಶೇಷ ಅಪ್ಪಸೇವೆ ಜರಗಿತು. ಮಂಗಳವಾರ ಸಂಜೆ ವಿಸರ್ಜನಾ ಪೂಜೆ, ರಂಗಪೂಜೆ ಜರಗಿ ವಿಸರ್ಜನಾ ಮೆರವಣಿಗೆ ಪ್ರಾರಂಭಗೊಂಡಿತು.

ಅದ್ದೂರಿ ಮೆರವಣಿಗೆಯಲ್ಲಿ ಸೆಕ್ಸೋಫೋನ್, ಚೆಂಡೆ, ವಾದ್ಯ, ಕುಣಿತ ಭಜನೆ, ಬ್ಯಾಂಡ್, ವಿವಿಧ ವೇಷ ಭೂಷಣ, ಕೀಲು ಕುದುರೆ, ಡಿ‌.ಜೆ ಸೌಂಡ್ಸ್ ಹಾಗೂ ಸ್ತಬ್ಧ ಚಿತ್ರಗಳನ್ನು ಒಳಗೊಂಡ ಟ್ಯಾಬ್ಲೋಗಳ ಶೋಭಾ ಯಾತ್ರೆಯೊಂದಿಗೆ ಎರ್ಮಾಳು ಶ್ರೀ ಜನಾರ್ಧನ ದೇಗುಲದವರೆಗೆ ಸಾಗಿ, ಅಲ್ಲಿಂದ ಮೂಳೂರು ಅಟೋ ನಿಲ್ದಾಣದವರೆಗೆ ಬಂದು ಉಚ್ಚಿಲ ಬದ್ಧಿಂಜೆ ಮಠದ ಪುಷ್ಕರಣಿ ಸರೋವರದಲ್ಲಿ ಜಲ ಸ್ಥಂಭನ ಗೊಂಡಿತು.

  ಈ ಸಂದರ್ಭ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಉಪಾಧ್ಯಕ್ಷ ಕೃಷ್ಣ ಕುಮಾರ್ ಪೊಲ್ಯ, ದಿನೇಶ್‌ ಎರ್ಮಾಳು, ವಿಶ್ವನಾಥ್‌ ಕಾಪು, ಕೆ. ವಾಸುದೇವ ರಾವ್‌, ಕಿಶೋರ್‌ ಶೆಟ್ಟಿ, ಎರ್ಮಾಳು, ಕಾರ್ಯದರ್ಶಿ ರವಿಕಿರಣ್ ಉಚ್ಚಿಲ, ಜೊತೆ ಕಾರ್ಯದರ್ಶಿ ವಿನೋದ್ ಸುವರ್ಣ, ಕೋಶಾಧಿಕಾರಿ ವೇ|ಮೂ| ವಿಷ್ಣುಮೂರ್ತಿ ಉಪಾಧ್ಯಾಯ, ಮನೋಜ್ ಶೆಟ್ಟಿ ಪೊಲ್ಯ, ಮಹೇಶ್ ಉಚ್ಚಿಲ, ಅಶೋಕ್ ಆರ್. ಕರ್ಕೇರಾ, ಮಾಧವ ಆಚಾರ್ಯ ಉಚ್ಚಿಲ, ಅಶೋಕ್ ಆಚಾರ್ಯ, ವಿಜಯ ಆಚಾರ್ಯ ಉಚ್ಚಿಲ, ಶ್ರೀಪತಿ ಭಟ್‌ ಉಚ್ಚಿಲ, ವೇದವ್ಯಾಸ ಬಂಗೇರಾ, ರಾಜೇಶ್‌ ಎರ್ಮಾಳು, ಸುನಿಲ್ ಶೆಟ್ಟಿ, ಅಕ್ಷಯ್ ದೇಜಾಡಿ, ಗುರುರಾಜ್ ಉಚ್ಚಿಲ, ಮಹೇಶ್ ಶೆಟ್ಟಿ ಪೊಲ್ಯ, ಅಕ್ಷಯ್ ಉಚ್ಚಿಲ, ಪ್ರಮೋದ್ ಆಚಾರ್ಯ, ವಿಶು ಉಚ್ಚಿಲ,   ಅನಿಲ್ ಉಚ್ಚಿಲ, ರಾಜೇಶ್ ಶೆಟ್ಟಿ ಎರ್ಮಾಳು, ಆಯುಷ್ ಪೂಜಾರಿ, ಅಶಿತ್ ಪೊಲ್ಯ, ಕಿರಣ್, ಮನ್ವೀತ್, ಹರ್ಷಿತ್‌  ಆಚಾರ್ಯ, ಹರ್ಷಿತ್‌ ಪೂಜಾರಿ, ಸೃಜನ್ ಪೂಜಾರಿ, ಸಂಪತ್ ಪೊಲ್ಯ, ಪ್ರಥಮ್ ಉಚ್ಚಿಲ, ಸಾಗರ್ ಪೊಲ್ಯ, ಸುರೇಶ್‌ ಕುಮಾರ್‌, ಸಂದೀಪ್‌ ಉಚ್ಚಿಲ, ಸಚಿನ್‌ ಶೆಟ್ಟಿ ಪೊಲ್ಯ, ಲಕ್ಷ್ಮಣ ಬಂಗೇರಾ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt1