# Tags
#Uncategorised

ಸೆಪ್ಟಂಬರ್ ಅಂತ್ಯದಲ್ಲಿ ಅಪರೂಪದ ಧೂಮಕೇತು ಅಟ್ಲಾಸ್ ಬರಿಗಣ್ಣಿಗೆ ಕಾಣಲಿದೆ

ಸೆಪ್ಟಂಬರ್ ಅಂತ್ಯದಲ್ಲಿ ಅಪರೂಪದ ಧೂಮಕೇತು ಅಟ್ಲಾಸ್ ಬರಿಗಣ್ಣಿಗೆ ಕಾಣಲಿದೆ (comet C/2023 A3 Tsuchinshan ATLAS )
(Udupi) ಉಡುಪಿ : ಅಕ್ಟೋಬರ್
ಗೊಂದು ಧೂಮಕೇತು ಬರಲಿದೆ .
2023ರ ಜನವರಿಯಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿಮೀ ದೂರದಲ್ಲಿ ದೂಮಕೇತು ನೋಡಿ, ಇದನ್ನು “ಶತಮಾನದ ಧೂಮಕೇತು” ಎಂದು ಬಣ್ಣಿಸಲಾಗಿತ್ತು.
ಆದರೆ ಈಗ ಇದನ್ನು ವರ್ಷದ ಧೂಮಕೇತು ಎಂದು ಅಂದಾಜಿಸಲಾಗಿದೆ.
ಈ ಧೂಮಕೇತುವಿನ ಹೆಸರು “ಸುಚಿನ್ಸನ್ – ಅಟ್ಲಾಸ್ “. ( comet C/2023 A3 Tsuchinshan ATLAS ).
ಸಪ್ಟಂಬರ್ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಕಣ್ಣಿಗೆ ಕಾಣಲಿದೆ ಎನ್ನಲಾಗಿದೆ.
ಸೌರ ವ್ಯೂಹದ ಹೊರವಲಯ ಊರ್ಸ್ ಕ್ಲೌಡ್ ನಿಂದ (ಸುಮಾರು 3 ಜ್ಯೋತಿರ್ವರ್ಷ ಅಂದರೆ 30 ಟ್ರಿಲಿಯನ್ ಕಿಮೀ) ದೂರದಿಂದ ಹೊರಟ ಈ ಧೂಮಕೇತು, ಸೆಕೆಂಡಿಗೆ ಸುಮಾರು 80 ಕಿಮೀ, ಅತ್ಯಂತ ವೇಗದಲ್ಲಿ ಕ್ರಮಿಸುತ್ತಾ ಈಗ ಸಪ್ಟಂಬರ್ 27 ರಂದು ಸೂರ್ಯನನ್ನು ಸಮೀಪಿಸಲಿದೆ.
ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು, ಸೂರ್ಯನಿಂದ ಹಿಂತಿರುಗುವಾಗ ಅಕ್ಟೋಬರ್ ತಿಂಗಳಲ್ಲಿ ಸಂಜೆಯ ಸಮಯ ಪಶ್ಚಿಮ ಆಕಾಶದಲ್ಲಿ ಬರಿಕಣ್ಣಿಗೆ ಕಾಣಿಸಿ, ಆಕ್ಟೋಬರ್ 12 ರಂದು ಭೂವಿಗೆ ಸಮೀಪಿಸಲಿದೆ.
2023ರ ಜನವರಿಯಲ್ಲಿ ಪ್ರಥಮ ದೂರದರ್ಶಕದಲ್ಲಿ ನೋಡಿದ್ದ ಈ ಧೂಮಕೇತು, 2024ರ ಅಕ್ಟೋಬರ್ ಗೆ ಇದೊಂದು ಶತಮಾನದ ಧೂಮಕೇತುವಾಗಲಿದೆ ಎಂದು ಅಂದಾಜಿಸಿದ್ದರೂ, ಪೆಭ್ರವರಿ 2024 ರ ಹೊತ್ತಿಗೆ ಇದು ಕಾಣೆಯಾದಾಗ “ಇದು ಸಿಡಿದು ಹೋಯಿತು” ಎನ್ನಲಾಗಿದೆ.
ಈಗ ಇದರ ತುಂಡೋ ಅಥವಾ ಮೂಲ ಧೂಮಕೇತುವೋ ದೂರದರ್ಶಕಕ್ಕೆ ಪುನಃ ಗೋಚರಿಸಿದಾದ ಬರಿಗಣ್ಣಿಗೆ ಕಾಣುವ ವರ್ಷದ ಧೂಮಕೇತುವಾಗಲಿದೆ ಎಂದು ಅಂದಾಜಿಸಲಾಗಿದೆ.
ಧೂಮಕೇತುಗಳು ಹೀಗೆ , ಅಲೆಮಾರಿಗಳು. ಇವುಗಳ ಚಲನವಲನ ಹೀಗೆ ಎನ್ನುವಂತಿಲ್ಲ.
ಇದು ಶತಮಾನದ ಧೂಮಕೇತುವಾಗಬಹುದೇ? ವರ್ಷದ ಧೂಮಕೇತುವೇ? ಅಥವಾ ಬರಿಗಣ್ಣಿಗೆ ಕಾಣಿಸುವುದೇ ಇಲ್ಲವೇ ? ಈ ಎಲ್ಲಾ ಪ್ರಶ್ನೆಗಳಿಗೆ ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ.

Leave a comment

Your email address will not be published. Required fields are marked *

Emedia Advt1