# Tags
#ಶಾಲಾ ಕಾಲೇಜು

 ಅದಮಾರು ಪಿಪಿಸಿ ಪದವಿ ಪೂರ್ವ ಕಾಲೇಜು ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ (Adamaru PPC PU College, NSS Special Camp concluded)

ಅದಮಾರು ಪಿಪಿಸಿ ಪದವಿ ಪೂರ್ವ ಕಾಲೇಜು ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ  (Adamaru)

(Adamaru) ಅದಮಾರು: ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಏಳು ದಿನಗಳ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಎರ್ಮಾಳು ತೆಂಕಸರಕಾರಿ ಸಂಯುಕ್ತ ಪ್ರೌಢಶಾಲೆ ಇಲ್ಲಿ ನಡೆಯಿತು.  ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎರ್ಮಾಳು ಬೀಡು ಅಶೋಕ್ ರಾಜ್ ಜೈನ್ ಭಾಗವಹಿದ್ದರು.

ಅವರು ಮಾತನಾಡಿ, ಮನುಷ್ಯ ಕೇವಲ ತನ್ನ ಸ್ವಾರ್ಥವನ್ನು ಮಾತ್ರ ಚಿಂತಿಸಿದರೆ, ಬದುಕು ಹಸನಾಗದು. ಆತ ಸಮಾಜದ ಒಳಿತಿಗೆ ಶ್ರಮಿಸಬೇಕು. ಸಮಾಜಮುಖಿ  ಜೀವನವನ್ನು ವಿದ್ಯಾರ್ಥಿಗಳು  ಜೀವನದಲ್ಲಿ ಅಳವಡಿಸಬೇಕು. ಅದಕ್ಕಾಗಿ ಇಂತಹ ಶಿಬಿರಗಳು ಅಗತ್ಯ  ಎಂದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌರವ ಕಾರ್ಯದರ್ಶಿ ಪ್ರಶಾಂತ ಹೊಳ್ಳ ಮಾತನಾಡಿ, ವ್ಯಕ್ತಿತ್ವ ವಿಕಸನ, ಸಹಬಾಳ್ವೆ, ಕಷ್ಟವನ್ನು ಸಹಿಸುವ ಪ್ರವೃತ್ತಿ ಇದು ಎನ್ಎಸ್ಎಸ್ ನಿಮಗೆ ಕಲಿಸುತ್ತದೆ.  ಜೀವನದ ಯಶಸ್ಸಿನಲ್ಲಿ ಎನ್ ಎಸ್ ಎಸ್ ಪ್ರಮುಖ ಪಾತ್ರ ಹಿರಿದು ಎಂದರು.

 ಅದಮಾರು ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಂಶುಪಾಲ  ಸಂಜೀವ ನಾಯ್ಕ್ ಮಾತನಾಡಿ, ಒಂದು ಶಿಬಿರ ನಡೆಸಲು   ಎಲ್ಲರ ಸಹಕಾರ ಬೇಕು. ಎಲ್ಲರ ಸಹಕಾರದಿಂದ ಶಿಬಿರ ಯಶಸ್ವಿ ಆಗಿದೆ ಎಂದರು.

 ಈ ಸಂದರ್ಭದಲ್ಲಿ ಅಶೋಕ್ ರಾಜ್ ಜೈನ್ ಅವರನ್ನು  ಸನ್ಮಾನಿಸಲಾಯಿತು.

 ಯೋಗ ಗುರುಗಳಾಗಿ ಆರು ದಿನ ಯೋಗವನ್ನು ಕಲಿಸಿದ ಉಡುಪಿ ಜಿಲ್ಲೆಯ ಪತಂಜಲಿ ಯೋಗ ಸಮಿತಿಯ ಕಾರ್ಯದರ್ಶಿ ರಂಜಿತ್ ಕೆಎಸ್ ಅವರು ಶಿಬಿರಾರ್ಥಿಗಳಿಂದ ಯೋಗದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದು, ಅವರನ್ನೂ ಸನ್ಮಾನಿಸಲಾಯಿತು.

 ಬಿಂದು, ಮನೀಶ್, ಆನ್ನ, ಮಂಥನ್ ಅನುಭವ ಕಥನ ಹೇಳಿದರು.

  ಉತ್ತಮ ಶಿಬಿರಾರ್ಥಿಯಾಗಿ ಮೂಡಿ ಬಂದ ಮನೀಶ್, ಮನ್ವಿತ್ ಅವರಿಗೆ ಬಹುಮಾನ ನೀಡಲಾಯಿತು.

  ಗಾಳಿಪಟ ತಯಾರಿಸಿದ ಇರ್ಫಾನ್, ಮರಳ ಶಿಲ್ಪ ಮಾಡಿದ ಪ್ರಥಮ್, ಹರ್ಷ ಹಾಗೂ ಮಂಥನ್ ಅವರಿಗೂ ಬಹುಮಾನವನ್ನು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೂ ಸ್ಮರಣಿಕೆಯನ್ನು ವಿತರಿಸಲಾಯಿತು.

ಪ್ರತೀಕ್ಷಾ ಸ್ವಾಗತಿಸಿದರು. ಡಾ.ಜಯಶಂಕರ ಕಂಗಣ್ಣಾರು ಶಿಬಿರಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದವಿತ್ತರು. ನಿತೀಶಾ ಕಾರ್ಯಕ್ರಮ ನಿರ್ವಹಿಸಿದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2