# Tags
#ಕ್ರೀಡೆ

ಉಡುಪಿ – ಉಚ್ಚಿಲ ದಸರಾ 2024: ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ (Udupi – Udupi Dasara 2024: Udupi – DK Level Body Buildng Competition)

ಉಡುಪಿ – ಉಚ್ಚಿಲ ದಸರಾ 2024: ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

(Uchila) ಉಚ್ಚಿಲ, ಅ. 11 : ಉಡುಪಿ ಉಚ್ಚಿಲ ದಸರಾ 2024 ಪ್ರಯುಕ್ತ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿರುವ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮತ್ತು ನಾಡೋಜ ಡಾ. ಜಿ. ಶಂಕರ್‌ರವರ ಪುತ್ರಿ ಶಾಲಿನಿ‌ ನವೀನ್ ಅವರು ಜತೆಗೂಡಿ ಉದ್ಘಾಟಿಸಿದರು.

 ಅಂತರಾಷ್ಟ್ರೀಯ ಮತ್ತು  ದೇಹದಾರ್ಢ್ಯ ಪಟು ನಿತ್ಯಾನಂದ ಕೋಟ್ಯಾನ್ ತೊಟ್ಟಂ ಅವರ ದೇಹದಾರ್ಢ್ಯ ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್‌ ಎರ್ಮಾಳು, ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕರ್ನಾಟಕ ಪರ್ಸಿನ್ ಮೀನುಗಾರರ ಒಕ್ಕೂಟದ ಅಧ್ಯಕ್ಷ ಅನಿಲ್ ಕುಮಾರ್ ಬೊಕ್ಕಪಟ್ಣ, ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೇಸನ್ ಡಯಾಸ್, ದ.ಕ. ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಶೆಟ್ಟಿ, ಹಿರಿಯರಾದ ವಿಶ್ವೇಶ್ವರ ಬದವಿದೆ, ಪಿ.ಎಚ್. ಆನಂದ್, ವಿಜಯ್ ಶ್ರೀಯಾನ್ ಉಪಸ್ಥಿತರಿದ್ದರು.

 ಪಂದ್ಯಾಟದ ಸಂಯೋಜಕ ಪುಂಡಲೀಕ ಹೊಸಬೆಟ್ಟು ಸ್ವಾಗತಿಸಿದರು. ಸಾಂಸ್ಕತಿಕ ಕಾರ್ಯಕ್ರಮ ಸಂಚಾಲಕ ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 ಮಿ. ಉಡುಪಿ ಉಚ್ಚಿಲ ದಸರಾ ಬಾಡಿ ಬಿಲ್ಡಿಂಗ್ ಟೈಟಲ್, ಬೆಸ್ಟ್‌ ಪೋಸರ್ ಸಹಿತ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು‌. ಸುಮಾರು 100ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ನ‌ ರಾಷ್ಟ್ರ, ರಾಜ್ಯ ಮಟ್ಟದ ತೀರ್ಪುಗಾರರು ತೀರ್ಪುಗಾರರಾಗಿ ಸಹಕರಿಸಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2