# Tags
#Uncategorised #ಧಾರ್ಮಿಕ

ಉಡುಪಿ ಉಚ್ಚಿಲ ದಸರಾ 2024: ಪೇಜಾವರ ಶ್ರೀಗಳ ಭೇಟಿ (Pejavar Shree Visit Udupi -Uchila Dasara program)

ಕಲೆ ನಮ್ಮಲ್ಲಿ ಜೀವಂತವಾಗಿ ಉಳಿಯುವಲ್ಲಿ ಮಹಾ ಸಾಹಸ ಅಗತ್ಯ- ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

(Uchila) ಉಚ್ಚಿಲ ; ಮೊಗವೀರ ಮಹಾಜನ ಸಂಘ ಸಂಚಾಲಿತ ಉಡುಪಿ ಉಚ್ಚಿಲ ದಸರಾ 2024ಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸೋಮವಾರ ಸಂಜೆ ಭೇಟಿ ನೀಡಿ, ಆಶೀರ್ವಚನ ನೀಡಿದರು.

ಅವರು ತಮ್ಮ ಆಶೀರ್ವಚನದಲ್ಲಿ, ಉಚ್ಚಿಲ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ನಾಡಹಬ್ಬ ನಡೆಯುತ್ತಿದೆ. ಇಂತಹ ನಾಡಹಬ್ಬವನ್ನು ನಾಡಿನ ಜನತೆಗೆ ಒದಗಿಸುವಂತಹ ನಾಡೋಜ ಡಾ.ಜಿ. ಶಂಕರ್ ಮುಂದಾಳತ್ವದ ಉಡುಪಿ ಉಚ್ಚಿಲ ದಸರಾ ಮತ್ತಷ್ಟು ಮೆರುಗನ್ನು ಪಡೆದು ಜನಜನಿತವಾಗಲಿ.

 ಅಯೋಧ್ಯೆಯ ಮಂಗಳೋತ್ಸವ ಸೇವೆಯಲ್ಲಿ ಪಾಲ್ಗೊಂಡಿದ್ದ ವಿದುಷಿ ವೀಣಾ ವಾಧಕಿ ಪವನ ಬಿ. ಆಚಾರ್ ರವರು  ತಾಯಿ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ನೂರಾರು ಶಿಷ್ಯರ ಜೊತೆಗೂಡಿಕೊಂಡು ವೀಣಾ ವಾದನದ ಸೇವೆಯ ಮೂಲಕ  ತಾಯಿಯನ್ನು ಸಂತೋಷ ಪಡಿಸುತ್ತಿದ್ದಾರೆ.

 ಕಲೆ ನಮ್ಮಲ್ಲಿ ಜೀವಂತವಾಗಿ ಉಳಿಯುವಲ್ಲಿ ಇಂತಹ ಮಹಾ ಸಾಹಸ ಅಗತ್ಯ ಎಂದು ಆಶೀರ್ವದಿಸಿದರು.

ಈ ಸಂದರ್ಭ ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜೊತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್ ಮುಲ್ಕಿ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ದೇವಳದ ಪ್ರಧಾನ ಅರ್ಚಕ ವೇ|ಮೂ| ಕೆ.ವಿ. ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ದೇಗುಲದ ಮೆನೇಜರ್‌ ಸತೀಶ್‌ ಅಮೀನ್‌ ಪಡುಕರೆ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2