# Tags
#ಧಾರ್ಮಿಕ #ವಿಡಿಯೋ

ಉಡುಪಿ – ಉಚ್ಚಿಲ ದಸರಾ 2024 : ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಕಾರ್ಯಕ್ರಮ (Udupi- Uchila Dasara 2024 : Dandiya, Garbha Dance program)

ಉಡುಪಿ – ಉಚ್ಚಿಲ ದಸರಾ 2024 : ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಕಾರ್ಯಕ್ರಮ

 “ನಲಿದು ಸಂಭ್ರಮಿಸಿದ ಕರಾವಳಿಯ ಜನತೆ”

garbha dhandiya dance

   (Uchila) ಉಚ್ಚಿಲ ಅ. 7 : ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ಮತ್ತು ಸಹೃದಯಿ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಜರಗುತ್ತಿರುವ ಉಡುಪಿ ಉಚ್ಚಿಲ ದಸರಾ 2024ರ ಪ್ರಯುಕ್ತ ರವಿವಾರ ರಾತ್ರಿ ಸಾರ್ವಜನಿಕರಿಗಾಗಿ ದಾಂಡಿಯಾ ಮತ್ತು ಗರ್ಭಾ ನೃತ್ಯ ಕಾರ್ಯಕ್ರಮ ನಡೆಯಿತು.

 ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಸುಮಧುರ ಸಂಗೀತದೊಂದಿಗೆ ನಡೆದ ಗರ್ಬಾ ಮತ್ತು ದಾಂಡಿಯಾ ನೃತ್ಯ ಭಾರೀ ಜನಾಕರ್ಷಣೆಗೆ ಕಾರಣವಾಯಿತು. ಉತ್ಸಾಹಿತರಾದ ಸಾವಿರಾರು ಮಂದಿ ಮಹಿಳೆಯರು, ಪುರುಷರು ಮತ್ತು ಮಕ್ಕಳೆಲ್ಲರೂ ಗರ್ಭಾ ಮತ್ತು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ದಸರಾ ರೂವಾರಿ ನಾಡೋಜ‌ ಡಾ. ಜಿ. ಶಂಕರ್‌ರವರು  ದಾಂಡೊಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ವೇ. ಮೂ. ಕೆ.ವಿ. ರಾಘವೇಂದ್ರ ಉಪಾಧ್ಯಾಯ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ‌ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಪ್ರಮುಖರಾದ ವಾಸುದೇವ ಸಾಲ್ಯಾನ್, ಗುಂಡು ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2