# Tags
#ಶಾಲಾ ಕಾಲೇಜು

ಉಡುಪಿ: ಸ. ಪ. ಪೂ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ಓದಿ ಬಹುಮಾನ ಗೆಲ್ಲಿ ಎಂಬ ಸ್ಪರ್ಧೆ (Udupi : Udupi: Govt pre University book reading Competition)

ಉಡುಪಿ: ಸ. ಪ. ಪೂ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ಓದಿ ಬಹುಮಾನ ಗೆಲ್ಲಿ ಎಂಬ ಸ್ಪರ್ಧೆ

(Udupi) ಉಡುಪಿ: ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಾಹಿತ್ಯ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಓದಿ ಬಹುಮಾನ ಗೆಲ್ಲಿ ಎಂಬ ಸ್ಪರ್ಧೆ ಏರ್ಪಡಿಸಲಾಗಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸುವಲ್ಲಿ ಮಕ್ಕಳು ಪ್ರೇರಣೆ ಪಡೆಯುವ ಉದ್ದೇಶದಿಂದ  ದಿವಂಗತ ಡಾ. ಉಪ್ಪಂಗಳ ರಾಮ ಭಟ್ಟರು ಬರೆದಿರುವ ಮರೆಯಲಾಗದ ಮಹನೀಯರು ಎಂಬ  ಪುಸ್ತಕವನ್ನು ಆಧರಿಸಿ ‘ನಾ ಮೆಚ್ಚಿದ ವ್ಯಕ್ತಿತ್ವದ ಬಗ್ಗೆ’ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಯಿತು.

 ಈ ಸಂದರ್ಭದಲ್ಲಿ ಶಂಕರಿ ಭಟ್ ಮಾತನಾಡಿ, ಕಲಿಕೆಗೆ ಮಾಧ್ಯಮ ತೊಡಕಲ್ಲ, ಆಸಕ್ತಿಯಿಂದ ಕಲಿತು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರು.

  ಎಸ್  ಡಿ ಎಂ ಸಿ ಗೌರವಾಧ್ಯಕ್ಷೆ ತಾರಾದೇವಿಯವರು ಮಾತನಾಡಿ, ಓದಿ, ಜ್ಞಾನ ಗಳಿಸಿ, ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.

 ಈ ಎರಡೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ  ನಗದು  ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಸಂಸ್ಥೆಯ ಹಿರಿಯ ಶಿಕ್ಷಕಿ ಇಂದಿರಾ ಬಿ ಸ್ವಾಗತಿಸಿದರು.  ಶಿಕ್ಷಕಿ ನಾಗರತ್ನ ಹೆಗಡೆ ನಿರೂಪಿಸಿ ವಂದಿಸಿದರು. ಶಿಕ್ಷಕಿಯರಾದ ಮೀನಾಕ್ಷಿ, ಪ್ರತಿಭಾ ಮತ್ತು ಮಂಜುಳಾ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2