# Tags
#ಅಪರಾಧ

ಕೋಟ: ರಾಸು ಕಳ್ಳತನ, ನಿಯಮ ಮೀರಿ ಜಾನುವಾರು ಮಾರಾಟದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ, ಮನವಿ (Kota : Demand, appeal for leagal action against cattle theft, illegal  sale of cattle)

ಕೋಟ: ರಾಸು ಕಳ್ಳತನ, ನಿಯಮ ಮೀರಿ ಜಾನುವಾರು ಮಾರಾಟದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ, ಮನವಿ

(Kota) ಕೋಟ: ರಾಸುವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ನಿಯಮ ಸಡಿಲಗೊಳಿಸಬಾರದು. ರಾಸು ಕಳ್ಳತನವಾದಾಗ ಸೂಕ್ತ ಕ್ರಮ ಕೈಗೊಳ್ಳಬೇಕು. ದಲ್ಲಾಳಿಗಳು ಮನೆ ಮನೆಗೆ ಬಂದು ರಾಸು ಮಾರಾಟಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಇವೆಲ್ಲಾ ಕಾರಣಗಳಿಗಾಗಿ, ಬ್ರಹ್ಮಾವರ ತಾಲೂಕು ದಂಡಾಧಿಕಾರಿಗಳಿಗೆ ಸೇರಿದಂತೆ ಬ್ರಹ್ಮಾವರ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಹಾಗೂ ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ರವರಿಗೆ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಈ ಹಿಂದೆ 5,68,000 ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಪ್ರಸ್ತುತ 3,20000 ಲೀಟರ್ ಶೇಖರಣೆಯಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಗರಿಷ್ಟ 2,20,000ಲೀಟರ್ ಹಾಲು ಶೇಖರಣೆ ಇದ್ದು ಸರಾಸರಿ 1, 80,000 ಅದರಲ್ಲಿ 1, 60,000  ಲೀಟರ್ ಮಾರಾಟವಾಗುತ್ತಿದೆ. ಪ್ರಸ್ತುತ 1,10,000   ಲೀಟರ್ ಶೇಖರಣೆಯಾಗುತ್ತಿದೆ. ಇದಕ್ಕೆ ಕಾರಣ ನಿಯಮ ಮೀರಿ ಹೊರ ಜಿಲ್ಲೆಗಳಿಗೆ ಜಾನುವಾರು ಮಾರಾಟ ಮಾಡುತ್ತಿದ್ದು, ಇದರಿಂದ ಹಾಲು ಶೇಖರಣೆ ಕಡಿಮೆಯಾಗುತ್ತಿದೆ.

ಗ್ರಾಹಕರಿಗೆ ಬೇಕಾಗುವಷ್ಟು ಹಾಲು ಮತ್ತು ಹಾಲಿನ ಉತ್ಪನ್ನ ನೀಡಲು ಸಾದ್ಯವಾಗುತ್ತಿಲ್ಲ. ದಿನೇದಿನೇ ಹಾಲು ಶೇಖರಣೆ ಕಡಿಮೆಯಾಗುತ್ತಿದೆ.

 ಈ ಸಂದರ್ಭದಲ್ಲಿ ಬ್ರಹ್ಮಾವರ ಹಾಲು  ನೌಕರರ ತಾಲೂಕು ಅಧ್ಯಕ್ಷ ರಾಕೇಶ್ ನಾಯಕ್ ಶಿರಿಯಾರ, ಹಂದಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸರಸ್ವತಿ ಮತ್ತಿತರರು ಇದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2