# Tags
#ಧಾರ್ಮಿಕ #ವಿಡಿಯೋ

ಪ್ರೇಕ್ಷಕರ ಮನ ರಂಜಿಸಿದ ಪುತ್ತೂರು ಶ್ರೀದೇವಿ ನಿತ್ಯಾರಾಧನಾ ಕಲಾ ಕೇಂದ್ರದ ನೃತ್ಯ ರಂಜನಿ ನೃತ್ಯ (Ranjani Dance of Putturu Shridevi Nithyaradhana Kala kendra entertained the Audience)

ಪ್ರೇಕ್ಷಕರ ಮನ ರಂಜಿಸಿದ ಪುತ್ತೂರು ಶ್ರೀದೇವಿ ನಿತ್ಯಾರಾಧನಾ ಕಲಾ ಕೇಂದ್ರದ ನೃತ್ಯ ರಂಜನಿ ನೃತ್ಯ

ಉಡುಪಿ – ಉಚ್ಚಿಲ ದಸರಾ -2024

(Uchila) ಉಚ್ಚಿಲ : ಉಚ್ಚಿಲ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಉಡುಪಿ – ಉಚ್ಚಿಲ ದಸರಾ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀದೇವಿ ನಿತ್ಯಾರಾಧನಾ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ರಂಜನಿ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.

   ನಿತ್ಯ ಗುರು ವಿದುಷಿ ಶ್ರೀಮತಿ ರೋಹಿಣಿ ಉದಯ್ ನೇತೃತ್ವದಲ್ಲಿ ನಡೆದ ನೃತ್ಯ ರಂಜನೆಯ ಪ್ರಕಾರಗಳು ನೆರೆದ ಸಭಿಕರ ಮನ ಗೆದ್ದಿದೆ.

 

 ಈ ಸಂದರ್ಭ ಉಚ್ಚಿಲ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ. ಜಿ ಶಂಕರ್, ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಉಪಾಧ್ಯಕ್ಷ ದಿನೇಶ್ ಎರ್ಮಾಳು ಪ್ರಮುಖರಾದ   ಗುಂಡು ಅಮೀನ್, ದೇವಳದ ಮೆನೇಜರ್ ಸತೀಷ್‌ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2