# Tags
#ಸಂಘ, ಸಂಸ್ಥೆಗಳು

ಬಂಟ್ವಾಳ : ವೇಷ ಹಾಕಿ ನಿಧಿಸಂಗ್ರಹ, ಖಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಹಸ್ತಾಂತರ (Bantwala : Dress up fundriser, handover to a sick child)

ಬಂಟ್ವಾಳ : ವೇಷ ಹಾಕಿ ನಿಧಿಸಂಗ್ರಹ, ಖಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಹಸ್ತಾಂತರ

(Bantwala) ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ರಾಯಪ್ಪಕೋಡಿ ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ  ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂಧರ್ಭದಲ್ಲಿ ವೇಷ ಹಾಕಿ ಸಂಗ್ರಹವಾದ ಮೊತ್ತವನ್ನು “ಬುಡ್ ಚಿಯಾರಿ ಸಿಂಡ್ರೋಮ್” ಖಾಯಿಲೆಯಿಂದ ಬಳಲುತ್ತಿರುವ ಮೂರುವರ್ಷದ ಮಗುವಿಗೆ ಹಸ್ತಾಂತರಿಸಲಾಯಿತು.
 ಪುತ್ತೂರಿನ ರಂಜನ್ ಎಂಬವರ 3 ವರ್ಷದ ಮಗು ಅಗಸ್ತ್ಯ ಕೃಷ್ಣನಿಗೆ ವೇಷಹಾಕಿ ಸಂಗ್ರಹವಾದ 37 ಸಾ. ರೂ.ಮೊತ್ತವನ್ನು ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ದೀಕ್ಷಿತ್ ಆಚಾರ್ಯ, ಮೋಹಿತ್ ಆಚಾರ್ಯ, ರಕ್ಷಿತ್ ಆಚಾರ್ಯ, ಶ್ರೀಧರ್ ಆಚಾರ್ಯ, ಹರಿಪ್ರಸಾದ್, ಮಿಥುನ್, ಯಶ್ವಿನ್ ಕಲ್ಲಡ್ಕ, ಪ್ರವೀಣ್ ರಾಯಪ್ಪಕೋಡಿ, ಜಗದೀಶ್ ರಾಯಪ್ಪಕೋಡಿ, ಸೋಹನ್ ಕಲ್ಲಡ್ಕ ಭಾಗವಹಿಸಿದ್ದರು.
ಕಳೆದ ವರ್ಷವೂ ಈ ತಂಡ ಕೂಡ ವೇಷಹಾಕಿ ಸಂಗ್ರಹವಾದ  23 ಸಾ. ರೂ.ಮೊತ್ತವನ್ನು ಕಾವ್ಯ ಎಂಬ 11 ವರ್ಷದ ಬಾಲಕಿಗೆ ನೀಡಲಾಗಿತು.ಶ್ರೀ

 ದುರ್ಗಾ ಸೇವಾ ಸಮಿತಿಯ ಸೇವಾ ಕಾರ್ಯಕ್ಕೆ ಸಾರ್ವತ್ರಿಕ ಮೆಚ್ಚುಗೆ ವ್ಯಕ್ತವಾಗಿದೆ. 

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2