# Tags
#ಸಂಘ, ಸಂಸ್ಥೆಗಳು

ಮಾಜಿ ಅರೆಸೈನಿಕ ಸಂಘದ ಉಡುಪಿ ವಲಯ:ಅಧ್ಯಕ್ಷರಾಗಿ ಪಿ.ಎ. ಮೊಹಿದ್ದೀನ್ (Ex Paramilitary Association Udupi Zone : PA Mohiddin as the President)

ಮಾಜಿ ಅರೆಸೈನಿಕ ಸಂಘದ ಉಡುಪಿ ವಲಯ:
ಅಧ್ಯಕ್ಷರಾಗಿ ಪಿ.ಎ. ಮೊಹಿದ್ದೀನ್

(Kaup) ಕಾಪು : ಮಾಜಿ ಅರೆಸೈನಿಕ ಪಡೆಯ ಸಂಘದ ಉಡುಪಿ ವಲಯದ ನೂತನ ಅಧ್ಯಕ್ಷರಾಗಿ ಗಡಿ ಭದ್ರತಾ ಪಡೆ ಮಾಜಿ ಅಸಿಸ್ಟೆಂಟ್ ಕಮಾಂಡೆಂಟರಾಗಿದ್ದ ಪಡುಬಿದ್ರಿಯ ಪಿ.ಎ. ಮೊಹಿದ್ದೀನ್ ಆಯ್ಕೆಯಾಗಿದ್ದಾರೆ.
 ಕಾಪುವಿನಲ್ಲಿ ಮಾಜಿ ಅರೆಸೈನಿಕ ಪಡೆಯ ಸಂಘದ ೨೦೨೪-೨೫ರ ಸಾಲಿನ ಮಹಾಸಭೆಯಲ್ಲಿ ಸಂಘದ ನೂತನ ಉಡುಪಿ ವಲಯವನ್ನು ಉದ್ಘಾಟಿಸಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
 ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ, ಕೋಶಾಧಿಕಾರಿಯಾಗಿ ಪದ್ಮನಾಭ ಶೆಟ್ಟಿ, ಸಂಚಾಲಕರಾಗಿ ಸುರೇಶ್ ರಾವ್ ಮತ್ತು ಕೇಶವ ಆಚಾರ್ಯ ನೇಮಕಗೊಂಡರು.
 ಉಡುಪಿ ಮತ್ತು ದ.ಕ. ಜಿಲ್ಲೆಯ ಅಧ್ಯಕ್ಷರಾದ ತಿರುಮೂರ್ತಿ, ಗೌರವಾಧ್ಯಕ್ಷ ರಾಜೇಶ್ ಮೆಂಡನ್, ಪ್ರಧಾನ ಕಾರ್ಯದರ್ಶಿ ಜಯರಾಮ ಶೆಟ್ಟಿ, ಕೋಶಾಧಿಕಾರಿ ಮಂಜಪ್ಪ ಸಂಘದ ಹಲವು ವಲಯದ ಕಾರ್ಯಕಾರಿ, ಸಮಿತಿಯ  ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
 ಸಂಘದ ವಿವಿಧ ಮುಂದಿನ ಯೋಜನೆ, ಸಂಘದ ಅಭಿವೃಧ್ಧಿ ಹಾಗೂ ಮಾಜಿ ಕೇಂದ್ರೀಯ ಅರೆಸೈನಿಕರು ಹಾಗೂ ಅವರ ಪರಿವಾರದ ಕಲ್ಯಾಣ ಕಾರ‍್ಯಗಾರ ಬಗ್ಗೆ ಸ್ಥೂಲವಾಗಿ ಚರ್ಚಿಸಲಾಯಿತು.  

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2