# Tags
#PROBLEMS #protest

ಮೂಲ್ಕಿ: ಅಕ್ರಮ ಮರಳು ಸಾಗಾಟ; ಹೂತು ಹೋದ ಟಿಪ್ಪರ್ ಲಾರಿ (Illegal sand Trafficing : Buried Tipper Lorry)

ಮೂಲ್ಕಿ: ಅಕ್ರಮ ಮರಳು ಸಾಗಾಟ; ಹೂತು ಹೋದ ಟಿಪ್ಪರ್ ಲಾರಿ

(Mangaluru) ಮಂಗಳೂರು: ಮುಲ್ಕಿ ತಾಲೂಕು ವ್ಯಾಪ್ತಿಯ ಅತಿಕಾರಿಬೆಟ್ಟು ಮಟ್ಟು ಮೂಲಕ ಕಿರಿದಾದ ರಸ್ತೆಯಲ್ಲಿ ಉಡುಪಿ ಜಿಲ್ಲೆಗೆ ನಿಯಮಗಳನ್ನು ಗಾಳಿಗೆ ತೂರಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನ  ಮಟ್ಟು ದೈವಸ್ಥಾನದ ಬಳಿ ಹೂತು ಹೋಗಿ  ಸಿಕ್ಕಿ ಬಿದ್ದಿದ್ದು, ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ

ಸ್ಥಳಕ್ಕೆ  ಗ್ರಾಮಸ್ಥರು ಧಾವಿಸಿ ಪಕ್ಷಿಕೆರೆ ಮೂಲದ ಟಿಪ್ಪರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಕ್ರೇನ್ ಮೂಲಕ ಟಿಪ್ಪರ್ ತೆರವುಗೊಳಿಸಲಾಯಿತು

ಟಿಪ್ಪರ್ ಎದುರು ಭಾಗದ ನಂಬರ್ ಪ್ಲೇಟ್ ಕೆಎ 21 ಸಿ 46 29 ಇದ್ದು ಹಿಂಭಾಗದಲ್ಲಿ ನಂಬರ್ ಪ್ಲೇಟ್ ಕಾಣುತ್ತಿಲ್ಲ. ಟಿಪ್ಪರ್ ನಲ್ಲಿ ವ್ಯವಸ್ಥಿತ ರೀತಿಯಲ್ಲಿ ಮರಳು ಸಾಗಾಟ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ

ಕಳೆದ ಕೆಲ ದಿನಗಳಿಂದ ಮುಲ್ಕಿ ತಾಲೂಕಿನ ಏಳಿಂಜೆ ಹಾಗೂ ಮತ್ತಿತರ ಕಡೆಗಳಿಂದ ಉಡುಪಿ ಜಿಲ್ಲೆಗೆ ಅಕ್ರಮವಾಗಿ ಕಳ್ಳ ದಾರಿಯಲ್ಲಿ ಉಡುಪಿ ಜಿಲ್ಲೆಗೆ ಮರಳು ಸಾಗಾಟ ನಡೆಯುತ್ತಿದ್ದು, ಈ ಬಗ್ಗೆ ಲೋಕಾಯುಕ್ತ ಅದಾಲತ್ ನಲ್ಲಿ ಕೂಡ ದೂರು ನೀಡಲಾಗಿತ್ತು.

ಕಿರಿದಾದ ಅತಿಕಾರಿಬೆಟ್ಟು ಮಟ್ಟು ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯು  ಮರಳು ಸಾಗಾಟದ ಟಿಪ್ಪರ್ ಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ  ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಕಳ್ಳ ದಾರಿಯಿಂದ ಅಕ್ರಮವಾಗಿ ಉಡುಪಿ ಜಿಲ್ಲೆಗೆ ಮರಳು ಸಾಗಾಟವನ್ನು ನಿಲ್ಲಿಸದಿದ್ದರೆ, ಸ್ಥಳೀಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಆಕ್ರೋಶಿತರಾಗಿ ಹೇಳಿದ್ದಾರೆ.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2