# Tags
#ಶಾಲಾ ಕಾಲೇಜು

ಮೂಲ್ಕಿ ಬಳಿಯ ಮೆಡಲಿನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ (Industrial visit by Madeleine PU College Students)

ಮೂಲ್ಕಿ ಬಳಿಯ ಮೆಡಲಿನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ  

(Moolki) ಮೂಲ್ಕಿ: ಕೈಗಾರಿಕಾ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವ್ಯಾಪಾರದ ಅನುಭವವನ್ನು ಒದಗಿಸುವ ಜೊತೆಗೆ ಕಾರ್ಮಿಕರು ಮತ್ತು ಮಾಲೀಕರೊಂದಿಗೆ ಸಂವಾದ ನಡೆಸಲು ಅವಕಾಶ ಒದಗಿಸುವ ಗುರಿಯೊಂದಿಗೆ ಮೂಲ್ಕಿಯ ಮೆಡಲಿನ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳ ತಂಡ ಕೈಗಾರಿಕಾ ಸಂಸ್ಥೆಗಳಿಗೆ  ಭೇಟಿ ನೀಡಿದರು.

ನವ ಮಂಗಳೂರು ಬಂದರು ಪ್ರಾಧಿಕಾರ, ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ,  ಕ್ಯಾಂಪ್ಕೋ ನಿಯಮಿತ ಹಾಗೂ ಕಲ್ಬಾವಿ ಕನ್ಸೂಮ್ ಫೂಡ್ ಪ್ರೈ. ಲಿ.  ಮೊದಲಾದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಲೀಡಿಯ ಮೆಂಡೋನ್ಸಾ ಮಾತನಾಡಿ, ಕೈಗಾರಿಕಾ ಭೇಟಿಯ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಪಡೆಯುತ್ತಾರೆ. ಉದ್ಯಮಕ್ಕೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳು ಸಿದ್ಧಾಂತ ಮತ್ತು ಪ್ರಾಯೋಗಿಕ ಎರಡು ಸಂಯೋಜಿತ ಜ್ಞಾನವನ್ನು ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳು ಉದ್ಯೋಗವನ್ನು ಗಳಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದರು.

ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜೋಯೆಲ್ ಡಿಸೋಜಾ, ಉಪನ್ಯಾಸಕರಾದ ವಿಶಾಂತ್ ಶೆಟ್ಟಿ, ತಾರಾ ಶೆಟ್ಟಿ ಇದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2