# Tags
#ಮನೋರಂಜನೆ

ಶನಿ ಮಹಾತ್ಮೆ ನಾಟಕದ ಟೀಸರ್, ಪೋಸ್ಟರ್ ಬಿಡುಗಡೆ (Shani Mahathme Teaser, Poster released)

ಶನಿ ಮಹಾತ್ಮೆ ನಾಟಕದ ಟೀಸರ್, ಪೋಸ್ಟರ್ ಬಿಡುಗಡೆ

ಪೌರಾಣಿಕ ನಾಟಕಗಳಿಂದ ಪ್ರೇಕ್ಷಕರಿಗೆ ಭಕ್ತಿಯ ಸಂದೇಶ: ಪಟ್ಲ ಸತೀಶ್ ಶೆಟ್ಟಿ

(Mangaluru) ಮಂಗಳೂರು; ಶ್ರೀ ಲಲಿತೆ ಕಲಾವಿದರು (ರಿ) ಮಂಗಳೂರು ಇವರ ನೂತನ ಕಲಾಕೃತಿ ಕದ್ರಿ ನವನೀತ ಶೆಟ್ಟಿಯವರು ರಚಿಸಿರುವ ಜೀವನ್ ಉಳ್ಳಾಲ್ ನಿರ್ದೇಶನ, ಲಯನ್ ಕಿಶೋರ್ ಡಿ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಶನಿ ಮಹಾತ್ಮೆ ತುಳು ಕನ್ನಡ ಪೌರಾಣಿಕ ನಾಟಕದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಕದ್ರಿ ಮಲ್ಲಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ನಾಟಕದ ಟೀಸರ್ ಬಿಡುಗಡೆಗೊಳಿಸಿದರು.

ಶ್ರೀ ಲಲಿತೆ ಕಲಾವಿದರು ಕಟೀಲ್ದಪ್ಪೆ, ಗರುಡ ಪಂಚಮಿಯಂತಹ ಪೌರಾಣಿಕ, ಚಾರಿತ್ರಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು. ಸಾಮಾಜಿಕ ನಾಟಕಗಳ ಮಧ್ಯೆ ಇಂತಹ ಪೌರಾಣಿಕ ನಾಟಕಗಳಿಂದ ಪ್ರೇಕ್ಷಕರಿಗೆ ಭಕ್ತಿಯ ಸಂದೇಶ ತಿಳಿಸಲು ಸಾಧ್ಯವಾಗುತ್ತದೆ ಎಂದು ಪಟ್ಲಗುತ್ತು ಸತೀಶ್ ಶೆಟ್ಟಿ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ತುಳು, ಕನ್ನಡದಲ್ಲಿ ಪ್ರದರ್ಶನಗೊಳ್ಳುವ ಶನಿ ಮಹಾತ್ಮೆ ನಾಟಕವನ್ನು ಕದ್ರಿ ನವನೀತ ಶೆಟ್ಟಿ ರಚಿಸಿ, ಸಾಹಿತ್ಯ ಬರೆದಿದ್ದಾರೆ. ಜೀವನ್ ಉಳ್ಳಾಲ್ ನಾಟಕ ನಿರ್ದೇಶಿಸಿದ್ದಾರೆ.

ಸಮಾರಂಭದಲ್ಲಿ ತಂಡದ ವ್ಯವಸ್ಥಾಪಕ ಲಯನ್ ಕಿಶೋರ್ ಡಿ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ ಕದ್ರಿ ಉಪಸ್ಥಿತರಿದ್ದರು.

ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ಶನೀಶ್ವರನ ಮಹಿಮೆಯ ನವರಸ ಕಥಾವಾಹಿನಿಯಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ, ರಮೇಶ್ಚಂದ್ರ, ಗುರುರಾಜ್, ರವೀಂದ್ರಪ್ರಭು ಪಲ್ಲವಿ ಪ್ರಭು ಸ್ವರ ಮಾಧುರ್ಯವಿದೆ.

ಶನಿ ಮಾಹಾತ್ಮೆ ಪೌರಾಣಿಕ ನಾಟಕದ ಮೊದಲ ಪ್ರದರ್ಶನ ನವಂಬರ್ 10 ಭಾನುವಾರ ಸಂಜೆ 4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯುವ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮದಲ್ಲಿ ಉಚಿತ ಪ್ರದರ್ಶನಗೊಳ್ಳಲಿದೆ.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2