# Tags
#ಕ್ರೀಡೆ #ಶಾಲಾ ಕಾಲೇಜು

ಶಿರ್ವ ಹಿಂದೂ ಪ.ಪೂ. ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಉದ್ಘಾಟನೆ (Inaguration of Dist. Level Boys, Girls Throwball Tournment in Shirva Hindu PU collge)

ಶಿರ್ವ ಹಿಂದೂ .ಪೂ. ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಉದ್ಘಾಟನೆ

 (Katapadi) ಕಟಪಾಡಿ : ಮಕ್ಕಳಿಗೆ ಬಾಲ್ಯದಲ್ಲೇ ಸಮರ್ಪಕವಾಗಿ ಕ್ರೀಡಾ ತರಬೇತಿ ನೀಡುವುದರಿಂದ ಚೀನಾದಂತ ದೇಶಗಳು ಇಂದು ಅಭಿವೃದ್ಧಿಯೊಂದಿಗೆ ಕ್ರೀಡೆಯಲ್ಲೂ ಸರಿ ಸಮಾನ ಸಾಧನೆ ಮಾಡುತ್ತಿವೆ. ವಿದೇಶಗಳಂತೆ ನಮ್ಮಲ್ಲೂ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಸಾಮರ್ಥ್ಯವನ್ನು ಎಳವೆಯಲ್ಲೇ ಹೊರಗೆಳೆದರೆ ಮಾತ್ರಾ ನಮ್ಮ ದೇಶದ ಕ್ರೀಡಾ ಭವಿಷ್ಯ ಉಜ್ವಲವಾಗಲಿದೆ. ಹೆತ್ತವರು ಮಕ್ಕಳ ಶೈಕ್ಷಣಿಕ ವಿಷಯದೊಂದಿಗೆ ಕ್ರೀಡೆ ಮತ್ತು ಪಾಠೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಉಡುಪಿ ಮತ್ತು ಹಿಂದೂ ಪದವಿ ಪೂರ್ವ ಕಾಲೇಜು ಶಿರ್ವ ಇವರ ಜಂಟಿ ಆಶ್ರಯದಲ್ಲಿ ಶಿರ್ವದ ಹಿಂದೂ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ  ಜರಗಿದ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ  ಶಿರ್ವ ವಿದ್ಯಾವರ್ಧಕ ಸಂಘದ  ಆಡಳಿತಾಧಿಕಾರಿ ಪ್ರೋ. ವೈ. ಭಾಸ್ಕರ್ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆ ಹಿಂದಿನಿಂದಲೂ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದು, ಹಲವಾರು ಪಂದ್ಯಾವಳಿಗಳನ್ನು ಆಯೋಜಿಸಿದೆ. ತ್ರೋಬಾಲ್ ಕ್ರೀಡೆಯಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆ ಸಂಸ್ಥೆಗೆ ಹೆಮ್ಮೆ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ಸುಬ್ಬಯ್ಯ ಹೆಗ್ಡೆ ಶುಭ ಹಾರೈಸಿದರು.

 ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ಉಡುಪಿ ಜಿಲ್ಲಾ ಪ.ಪೂ ವಿಭಾಗದ ಕ್ರೀಡಾ ಮೇಲ್ವಿಚಾರಕ ದಿನೇಶ್ ಕುಮಾರ್ ಗೌರವ ಅತಿಥಿಗಳಾಗಿದ್ದರು.

ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಕಾಪು ವಲಯ ಕ್ರೀಡಾ ಮೇಲ್ವಿಚಾರಕ ಜೋಸೆಪ್ ಡಿಸೋಜಾ, ಕುಂದಾಪುರ ವಲಯ ಕ್ರೀಡಾ ಮೇಲ್ವಿಚಾರಕ ವಿಜಯ ಕುಮಾರ್ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ, ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ದೇವೇಂದ್ರ ಹೆಗ್ಡೆ, ಹಿಂದೂ ಪ್ರೌಢಶಾಲೆಯ ಶಾಲೆಯ ಮುಖ್ಯೋಪಾಧ್ಯಾಯಿನಿ ವಸಂತಿ ಬಾಯಿ, ಶಿರ್ವ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಶಿರ್ವ ಹಿಂದೂ ಪ.ಪೂ. ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಎ. ಸ್ವಾಗತಿಸಿದರು. ಉಪನ್ಯಾಸಕ ಸುಂದರ ಮೇರ ವಂದಿಸಿದರು. ಉಪನ್ಯಾಸಕಿಯರಾದ ಯಶೋಧಾ ಎಲ್ಲೂರು ಹಾಗೂ ಸುಪ್ರಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ 7 ಬಾಲಕರ ಮತ್ತು 7ಬಾಲಕಿಯರ ತಂಡಗಳು ಭಾಗವಹಿಸಿದ್ದವು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2