# Tags
#ಮಂಗಳೂರು #ಶಾಲಾ ಕಾಲೇಜು

ಸತತ 16 ವರ್ಷ ಶೇ. 100 ಫಲಿತಾಂಶ : ಸಿಬಿಎಸ್ಇ ಯಲ್ಲಿ ಮಂಗಳೂರಿನ ಅಮೃತಾ ವಿದ್ಯಾಲಯಂ ಶಾಲೆ ಸಾಧನೆ

ಮಂಗಳೂರು: ಇತ್ತೀಚಿಗೆ ನಡೆದ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಂಗಳೂರು ಬೋಳೂರಿನ ಅಮೃತಾ ವಿದ್ಯಾಲಯಂ ಶಾಲೆ ಶೇ. 100 ಫಲಿತಾಂಶ ಗಳಿಸಿದ್ದು ಸತತ 16ನೇ ವರುಷ 100 ಶೇಕಡ ಫಲಿತಾಂಶ ಗಳಿಸಿದ ವಿಶಿಷ್ಟ ಸಾಧನೆ ಮಾಡಿದೆ.

2023-24 ನೇ ಸಾಲಿನಲ್ಲಿ ಪರೀಕ್ಷೆ ಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, 4 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಉಳಿದಂತೆ, 7 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು, 6 ವಿದ್ಯಾರ್ಥಿಗಳು ಶೇ. 80 ಕ್ಕಿಂತ ಹೆಚ್ಚು, 7 ವಿದ್ಯಾರ್ಥಿಗಳು ಶೇ. 70 ಕ್ಕಿಂತ ಹೆಚ್ಚು ಹಾಗೂ 8 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸುವ ಮೂಲಕ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿನಿ ದೇವಿಕಾ ಜಯರಾಜ್ ಶೇ. 96.8% ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಗಣಿತ ದಲ್ಲಿ 100 ಅಂಕ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣ ಶುಭಾಶಂಸನೆ ತಿಳಿಸಿದ್ದು ಅವರ ಮುಂದುನ ಶೈಕ್ಷಣಿಕ ಹಾದಿ ಉತ್ತಮವಾಗಲಿ ಎಂದು ಆಶೀರ್ವದಿಸಿದ್ದಾರೆ. ಶಾಲಾ ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ, ಮುಖ್ಯೋಪಧ್ಯಾಯಿನಿ ಅಕ್ಷತಾ ಶೆಣೈ ಶಾಲೆಯ ಉತ್ತಮ ಫಲಿತಾಂಶಕ್ಕೆ ಹರ್ಷ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳಿಗೆ ಶುಭಾಶಯ ಸಲ್ಲಿಸಿದ್ದಾರೆ.

ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು:

  • ದೇವಿಕಾ ಜಯರಾಜ್ – 96.8%
  • ಅದಿತೆಯ ಆರ್ – 93.4%
  • ಸುಮೇದಾ – 92.6%
  • ರಿಯಾ ಸಿಂಗ್ – 91.4%
  • ವೈಷ್ಣವಿ – 88.6%
  • ನೀಹಾ ಬಿ – 87.8%
  • ಕರುಣ್ ಆದೇತ್ಯ – 87.6%
  • ವಿಖ್ಯಾತ್ ಸಾಲ್ಯಾನ್ – 86.4%
  • ಅಮೃತ ಜ್ಯೋತಿ – 85.8%
  • ಧ್ರುವ ಎಸ್ – 85.8%
  • ಗಾಯತ್ರಿ ಸಿಂಗ್ – 85.8%

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2