ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪದಗ್ರಹಣ (Udupi : Indian Medical Association Instalation)
ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪದಗ್ರಹಣ
(Udupi) ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿಯ ಪದಗ್ರಹಣ ಸಮಾರಂಭವು ಉಡುಪಿಯ ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಖ್ಯಾತ ಮೂಳೆ ತಜ್ಞ ಡಾ. ಭಾಸ್ಕಾರಾನಂದ ಕುಮಾರ್ ಭಾಗವಹಿಸಿ ಪದಗ್ರಹಣ ನಡೆಸಿಕೊಟ್ಟರು.
ಪ್ರಸಿದ್ಧ ನರರೋಗ ನಿವಾರಣ ತಜ್ಞ ಡಾಕ್ಟರ್ ಜಸ್‌ಪ್ರೀತ್ ಸಿಂಗ್ ದಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನೂತನ ಅಧ್ಯಕ್ಷ ಡಾ. ಕೆ ಸುರೇಶ್ ಶೆಣೈ ಯವರಿಗೆ ನಿರ್ಗಮನ ಅಧ್ಯಕ್ಷೆ ಡಾ. ರಾಜಲಕ್ಷ್ಮೀ ಅಧಿಕಾರ ಹಸ್ತಾಂತರಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಡಾ. ಅರ್ಚನಾ ಭಕ್ತ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ನೂತನ ಕಾರ್ಯದರ್ಶಿ ಶರತ್ ಚಂದ್ರರಾವ್, ಕೋಶಾಧಿಕಾರಿ ಡಾ. ವಿಜಯಲಕ್ಷ್ಮಿ ನಾಯಕ್, ಜೊತೆ ಕೋಶಾಧಿಕಾರಿ ಉಮೇಶ್ ನಾಯಕ್, ನಿರ್ಗಮನ ಕೋಶಾಧಿಕಾರಿ ಡಾ. ಆಮ್ನ ಹೆಗಡೆ, ಮಹಿಳಾ ವಿಭಾಗದ ಕಾರ್ಯದರ್ಶಿ ಡಾ. ವಿನುತಾ ವಿನೋದ್, ಜೊತೆ ಕಾರ್ಯದರ್ಶಿ ಡಾ. ವನಿತಾ ಗುರುದತ್, ಕೋಶಾಧಿಕಾರಿ ಡಾ. ಸುಶಾನ್ ಶೆಟ್ಟಿ, ಡಾ. ಶ್ರುತಿ ಬಲ್ಲಾಳ್, ಉಪಾಧ್ಯಕ್ಷ ಅಶೋಕ್ ಕುಮಾರ್ ಕಾಮತ್, ಡಾ ಪಿ.ವಿ ಭಂಡಾರಿ, ಡಾ. ವಾಸುದೇವ್ ಎಸ್., ಡಾ. ರಾಜಗೋಪಾಲ್ ಭಂಡಾರಿ, ಡಾ.ಅರುಣ್ ವರ್ಣೇಕರ್, ಇಂದಿರಾ ಪೈ ಶಾನುಭಾಗ್, ಡಾ. ಮೇಘನಾ ಪೈ, ಡಾ. ಉಮೇಶ ಎಸ್ ಎನ್., ಡಾ. ಹರೀಶ ನಾಯಕ್ ಡಾ. ಅನಂತ ಶೆಣೈ, ಡಾ. ದೀಕ್ಷಿತ, ಡಾ. ಕೇಶವ ನಾಯಕ್, ಡಾ. ಮಧುಸೂದನ ನಾಯಕ್, ಡಾ ವಿಜಯಕುಮಾರ್ ಶೆಟ್ಟಿ, ಡಾ. ಮುರಳಿಧರ್ ಪಾಟೀಲ್, ಡಾ. ವಿನಾಯಕ ಶೆಣೈ, ಡಾ. ಉಮೇಶ್ ಪ್ರಭು, ಡಾ. ಅಶೋಕ್ ಕುಮಾರ್ ವೈ. ಜಿ, ಡಾ. ಗೀತಾ ಪುತ್ರನ್, ಡಾ ನರೇಂದ್ರ ಶೆಣೈ, ಡಾ ವಿಜಯ ಕುಮಾರ್ ಶೇಟ್, ಡಾ. ಸನತ್ ರಾವ್ ಉಪಸ್ಥಿತರಿದ್ದರು.