ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಅವಿರೋಧ ಆಯ್ಕೆ (Nithananda D Kotian as the New President of Jayakrishna Parisara Premi Samithi)
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಅವಿರೋಧ ಆಯ್ಕೆ
(Mumbai) ಮುಂಬಯಿ ಅ. 28 : ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಹೆಸರಾಂತ ಸಂಘಟಕ, ಸಮಾಜ ಸೇವಕ, ಕನ್ನಡಾಭಿಮಾನಿ ನಿತ್ಯಾನಂದ ಡಿ ಕೋಟ್ಯಾನ್‌ರವರು 2024- 2027 ರವರೆಗಿನ ಮೂರು ವರ್ಷಗಳ ಅವದಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗಾಗಿ ಉಭಯ ಜಿಲ್ಲೆಗಳ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುವುದರೊಂದಿಗೆ, ಜಿಲ್ಲೆಗಳ ಅಭಿವೃದ್ಧಿಗಾಗಿ ಕ್ರಿಯಾಶೀಲವಾಗಿದೆ. ಮುಂಬಯಿಯಲ್ಲಿರುವ ಜಿಲ್ಲೆಗಳ ಎಲ್ಲಾ ಸಮುದಾಯಗಳ ಮುಖಂಡರನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 24ನೇ ವಾರ್ಷಿಕ ಮಹಾಸಭೆಯು ಸಾಕಿನಾಕಾ ಪೆನಿನ್ಸುಲ ಹೋಟೆಲ್‌ನ ಸಭಾಗೃಹದಲ್ಲಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ಎಲ್. ವಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿಸಮಿತಿಯ 2024- 2027 ವರೆಗೆ ನಿತ್ಯಾನಂದ ಕೋಟ್ಯಾನ್ ಅವರ ಹೆಸರನ್ನು ಅಧ್ಯಕ್ಷ ಪದವಿಗೆ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಘೋಷಿಸಿ, ಅಭಿನಂಧಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ನಿತ್ಯಾನಂದ ಡಿ ಕೋಟ್ಯಾನ್ ಅವರನ್ನು ಪ್ರಸ್ತುತ ಅಧ್ಯಕ್ಷರಾಗಿರುವ ಎಲ್ ವಿ ಅಮೀನ್‌ರವರು ಅಭಿನಂದಿಸಿದರು.
ನಿತ್ಯಾನಂದ ಕೋಟ್ಯಾನ್‌ರವರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಲ್ಲಿ ಪ್ರಾರಂಭದಿಂದ ಸೇವಾ ನಿರತರಾಗಿದ್ದು, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿ, ಇದೀಗ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ್ದಾರೆ.
ಬಿಲ್ಲವ ಸಮಾಜದ ಜನ ನಾಯಕ ದಿ. ಜಯ ಸುವರ್ಣ ಅವರ ನಿಕಟವರ್ತಿಯಾಗಿದ್ದ ನಿತ್ಯಾನಂದ ಕೋಟ್ಯಾನ್ ಅವರು, ಮುಂಬಯಿ ಬಿಲ್ಲವರ ಎಸೋಸಿಯೇಶನ್‌ನಲ್ಲಿ ಅಧ್ಯಕ್ಷರಾಗಿ, ವಿವಿಧ ಪದವಿಗಳನ್ನು ನಿಭಾಯಿಸಿದ್ದರು.
ವಿವಿಧ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಿತ್ಯಾನಂದ ಕೋಟ್ಯಾನ್, ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ಸೇವೆಗೈದಿದ್ದಾರೆ.
ದೇಶದ ಸಹಕಾರಿ ರಂಗದ ಭಾರತ್ ಬ್ಯಾಂಕ್‌ನಲ್ಲಿ ಉನ್ನತ ಮಟ್ಟದ ಪದವಿಯಲ್ಲಿ ಹಲವು ವರ್ಷ ಸೇವೆಗೈದು ಬ್ಯಾಂಕ್‌ನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದರು. ಪ್ರಸ್ತುತ ಭಾರತ್ ಬ್ಯಾಂಕ್‌ನ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನಿತ್ಯಾನಂದರವರನ್ನು ಸಮಿತಿಯ ಉಪಾಧ್ಯಕ್ಷ ಪಿ. ಧನಂಜಯ ಶೆಟ್ಟಿ, ಚಂದ್ರಶೇಖರ ಆರ್. ಬೆಲ್ಚಡ, ಸಮಿತಿಯ ವಕ್ತಾರ, ಪತ್ರಕರ್ತ ದಯಸಾಗರ್ ಚೌಟ, ನ್ಯಾ. ಆರ್. ಎಂ. ಭಂಡಾರಿ, ಗೌ. ಕಾರ್ಯದರ್ಶಿ ದೇವದಾಸ್ ಕುಲಾಲ್, ಜೊತೆ ಕೋಶಾಧಿಕಾರಿಗಳಾದ ಸದಾನಂದ ಆಚಾರ್ಯ ಮತ್ತು ತೋನ್ಸೆ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್. ಶೆಟ್ಟಿ, ಹರೀಶ್ ಕುಮಾರ್ ಶೆಟ್ಟಿ, ಸದಸ್ಯರಾದ ಡಾ. ಪ್ರಭಾಕರ ಶೆಟ್ಟಿ ಬೋಳ, ಶ್ಯಾಮ್ ಎನ್ ಶೆಟ್ಟಿ, ನ್ಯಾಯವಾದಿ ಶಶಿಧರ್ ಕಾಪು, ಜಾನ್ ಡಿ’ಸಿಲ್ವ, ಸಂತೋಷ್ ರೈ ಬೆಳ್ಳಿಪಾಡಿ, ಕರುಣಾಕರ ಹೆಜಮಾಡಿ, ವಾಸು ಎಸ್. ದೇವಾಡಿಗ, ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ, ರಾಮಚಂದ್ರ ಗಾಣಿಗ, ಉತ್ತಮ್ ಶೆಟ್ಟಿಗಾರ್, ಶ್ರೀನಿವಾಸ ಸಾಫಲ್ಯ, ಚಿತ್ರಾಪು ಕೆ.ಎಂ.ಕೋಟ್ಯಾನ್, ರಾಕೇಶ್ ಭಂಡಾರಿ, ಸಿಎಸ್. ಗಣೇಶ್ ಎಸ್.ಶೆಟ್ಟಿ . ಮತ್ತಿತರರು ಅಭಿನಂದಿಸಿದರು.
ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ವಾರ್ಷಿಕ ವರದಿಯನ್ನು ಮಂಡಿಸಿದರು. ಗೌರವ ಕೋಶಾಧಿಕಾರಿ ತುಳಸಿದಾಸ್ ಅಮೀನ್ ಲೆಕ್ಕಪತ್ರವನ್ನು ಮಂಡಿಸಿದರು. ಗೌ. ಕಾರ್ಯದರ್ಶಿ ದೇವದಾಸ್ ಕುಲಾಲ್ ವಂದಿಸಿದರು.
ಜಯಕೃಷ್ಣ ಪರಿಸರಪ್ರೇಮಿ ಸಮಿತಿಯು ಬೆಳ್ಳಿ ಹಬ್ಬ ಆಚರಿಸುತ್ತಿದ್ದು, ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ 25 ದೀಪಗಳನ್ನು ಪ್ರಜ್ವಲಿಸಿ ಬೆಳ್ಳಿಹಬ್ಬಕ್ಕೆ ಚಾಲನೆ ನೀಡಲಾಯಿತು.