ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ – 2025 ಎ. 3ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ (Padubidri Mahalingeshwara Mahaganapathi Temple – April 3rd Balalaya, sankocha)
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ – 2025 ಎ. 3 ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ
ಭಕ್ತಾದಿಗಳ ವಿಶೇಷ ಸಭೆಯಲ್ಲಿ ಒಮ್ಮತದ ತೀರ್ಮಾನ
ಗ್ರಾಮಸ್ಥರಿಂದಲೇ ಗರ್ಭಗುಡಿಯ ಪುನರ್ನಿರ್ಮಾಣ: ಡಾ| ಕೆ. ಪ್ರಕಾಶ ಶೆಟ್ಟಿ
Photo credit : Ravi Digitals.
(Padubidri) ಪಡುಬಿದ್ರಿ, ಅ. 23: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಬುಧವಾರ ಸಂಜೆ ನಡೆದ ನಡೆದ ಭಕ್ತಾದಿಗಳವಿಶೇಷ ಸಭೆಯಲ್ಲಿ 2025 ಎ. 3ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ ಎಂದು ಗ್ರಾಮಸ್ಥರ ಒಮ್ಮತದಿಂದ ದಿನ ನಿಗದಿ ಪಡಿಸಲಾಯಿತು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ನಡೆದ ಭಕ್ತಾದಿಗಳವಿಶೇಷ ಸಭೆಯನ್ನು ಉದ್ದೇಶಿಸಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ದೇವಳ ಸಂಕೋಚಕ್ಜೆ ತಂತ್ರಿಗಳು ಪ್ರಶಸ್ತ ದಿನವನ್ನು ನೀಡಿದ್ದಾರೆ. ಅದನ್ನು ಶಿರಸಾವಹಿಸಿ ಮುಂದುವರಿಯೋಣ. ವಿವಿಧ ಸಮಿತಿಗಳು ಜಾಗೃತವಾಗಬೇಕು. ನಮ್ಮೆಲ್ಲರ ಸಂಕಲ್ಪ ಒಂದಾಗಿರಲಿ. 20 ಕೋಟಿಯ ಮೊದಲ ಹಂತದಲ್ಲಿ ದೇಗುಲದ ಸಮಗ್ರ ಜೀರ್ಣೋದ್ಧಾರಕ್ಕೆ ಮುಂದಾಗೋಣ. ದೇವಸ್ಥಾನದ ಗರ್ಭಗುಡಿಯ ಪುಣ್ಯಕಾರ್ಯವು ಗ್ರಾಮದ ಸಮಸ್ತ ಭಕ್ತಾದಿಗಳಿಂದಲೇ ನಡೆಯಲಿರುವುದೆಂದು ಹೇಳಿದರು.
ವಾಸ್ತು ಪ್ರತಿಪಾದ್ಯವಾಗಿ ಬಲು ವಿಶಿಷ್ಟವಾಗಿ ಎರಡು ಹಂತದಲ್ಲಿ ಪಡುಬಿದ್ರಿ ಶ್ರೀ ದೇಗುಲದ ಪುನರ್ ನಿರ್ಮಾಣವಾಗಲಿದೆ. ಗ್ರಾಮಸ್ಥರ, ಭಕ್ತಾದಿಗಳ ಸಹಕಾರ ನಮಗಿರಲಿ ಎಂದರು.
ತಂತ್ರಿಗಳಾದ ವೇದ ಮೂರ್ತಿ ರಾಧಾಕೃಷ್ಣ ಉಪಾಧ್ಯಾಯ ಅವರು ಮೊದಲಿಗೆ ಮಾತನಾಡಿ, ಮುಂದಿನ ಎ. ೩ರಂದು ಬಾಲಾಲಯ ಪ್ರತಿಷ್ಟೆ, ಸಂಕೋಚಕ್ಕೆ ದಿನ ನಿಗದಿ ಪಡಿಸಲಾಗಿದೆ. 2026 ಮೀನ ಸಂಕ್ರಮಣದೊಳಗಾಗಿ ನಡೆಯಬೇಕಾದ ಬ್ರಹ್ಮಕಲಶಾದಿಗಳ ಕಾರ್ಯ ನಡೆಸಬೇಕು ಎಂದು ಸಮಗ್ರವಾಗಿ ವಿವರಣೆ ನೀಡಿದರು.
ಗೌರವಾಧ್ಯಕ್ಷ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಇಂದಿನ ಈ ಭಕ್ತಾದಿಗಳ ಸಭೆ ಫಲದಾಯಕವಾಗಲಿ. ನಿಮ್ಮೆಲ್ಲರ ಚಿಂತನೆಗಳು ಸಾಕಾರವಾಗಲಿ ಎಂದರು.
ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಅರ್ಚಕರಾದ ಪದ್ಮನಾಭ ಭಟ್, ವೈ. ಗುರುರಾಜ ಭಟ್, ರಾಘವೇಂದ್ರ ನಾವಡ ಉಪಸ್ಥಿತರಿದ್ದರು.
ರಾಜೇಶ್ ಶೇರಿಗಾರ್, ವಿಶುಕುಮಾರ್ ಶೆಟ್ಟಿಬಾಲ್, ಕೇಶವ ಅಮೀನ್, ರವೀಂದ್ರನಾಥ ಜಿ. ಹೆಗ್ಡೆ, ವಿಷ್ಣುಮೂರ್ತಿ ಆಚಾರ್ಯ ಸಭೆಯಲ್ಲಿ ಮಾತನಾಡಿದರು.
ಉಪಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಪ್ರಾಸ್ತಾವಿಸಿದರು. ಮುರಳೀನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪದ್ರ ಜಯ ಶೆಟ್ಟಿ ವಂದಿಸಿದರು.