ಮೂಲ್ಕಿ : ಚಿರತೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳಿಂದ ಬೋನ್ ಅಳವಡಿಕೆ (Bone grafting by forest officers for leapard operation)
ಮೂಲ್ಕಿ : ಚಿರತೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳಿಂದ ಬೋನ್ ಅಳವಡಿಕೆ
(Moolki) ಮೂಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಅಕ್ಕಸಾಲಿಗರ ಕೇರಿ ಬಳಿ ಚಿರತೆ ಕಾಟ ವಿಪರೀತವಾಗಿದ್ದು, ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಅಧಿಕಾರಿಗಳು ಎರಡು ಬೋನ್ ಅಳವಡಿಸಿದ್ದಾರೆ.
ಬುಧವಾರ ಸಂಜೆ ಅಕ್ಕಸಾಲಿಗರ ಕೇರಿ ಬಳಿಯಲ್ಲಿ ಸಂಜೆ ಹೊತ್ತು ನಾಲ್ಕು ಚಿರತೆಗಳು ಕಾಣಿಸಿಕೊಂಡಿದೆ. ಸ್ಕೂಟರ್‌ನಲ್ಲಿ ಮನೆ ಕಡೆ ಹೋಗುತ್ತಿರುವ ಅಮೃತ್ ಕಾಮತ್ ಎಂಬುವರಿಗೆ ಚಿರತೆ ಕಾಣ ಸಿಕ್ಕಿದ್ದು ಭೀತಿ ಹುಟ್ಟಿಸಿದೆ.
ಚಿರತೆ ಹಾವಳಿಯಿಂದ ಸಂಜೆ ಹೊತ್ತು ನಾಗರಿಕರು ಮನೆಯಿಂದ ಹೊರ ಬರಲು ಹೆದರುತ್ತಿದ್ದು, ಪರಿಸರದಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿದೆ
ಈಗಾಗಲೇ ಈ ಪರಿಸರದ ಕೆಲ ಮನೆಯ ನಾಯಿ ಹಾಗೂ ಬೆಕ್ಕುಗಳು ನಾಪತ್ತೆಯಾಗಿದ್ದು, ಚಿರತೆಗೆ ಆಹಾರವಾಗಿರುವ ಶಂಕೆ ವ್ಯಕ್ತವಾಗಿದೆ
ಈ ಬಗ್ಗೆ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಮಾತನಾಡಿ, ಇಲಾಖೆಗೆ 34 ಗ್ರಾಮಗಳು ಒಳಪಟ್ಟಿದೆ. ಇದೇ ಪ್ರಥಮ ಬಾರಿಗೆ ಮುಲ್ಕಿ ನಗರ ವ್ಯಾಪ್ತಿಯಲ್ಲಿ ಚಿರತೆ ಕಾರ್ಯಾಚರಣೆ ನಡೆಸಲು ಎರಡು ಬೋನ್ ಗಳನ್ನು ಅಳವಡಿಸಲಾಗಿದೆ. ಸ್ಥಳೀಯರ ಸಹಕಾರ ಇದ್ದರೆ ಮಾತ್ರ ಕಾರ್ಯಾಚರಣೆ ಸಾಧ್ಯ ಎಂದರು.
ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ, ಸದಸ್ಯ ಬಾಲಚಂದ್ರ ಕಾಮತ್, ಸಿಬ್ಬಂದಿ ನವೀನ್ ಚಂದ್ರ ಸ್ಥಳೀಯರಾದ ಸದಾನಂದ ಕೋಟ್ಯಾನ್, ಸಾಮಾಜಿಕ ಕಾರ್ಯಕರ್ತ ಅಶ್ವತ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.