ಕೆರೆಕಾಡು : ಶ್ರೀ ವಿನಾಯಕ ಯಕ್ಷಕಲಾ ತಂಡದಿಂದ “ತೈತತಕತ” ಯಕ್ಷಗಾನ ಕಾರ್ಯಕ್ರಮ (Kerekadu : Shri Vinayaka Yaksha Artists “Thai tha thaka tha”)
ಕೆರೆಕಾಡು : ಶ್ರೀ ವಿನಾಯಕ ಯಕ್ಷಕಲಾ ತಂಡದಿಂದ “ತೈತತಕತ” ಯಕ್ಷಗಾನ ಕಾರ್ಯಕ್ರಮ
ಯಕ್ಷಗಾನ ಕಲೆಯ ಆರಾಧನೆಯೊಂದಿಗೆ ಪೋಷಣೆ ನಿರಂತರವಾಗಿರಲಿ : ಭುವನಾಭಿರಾಮ ಉಡುಪ
(Moolki)ಮೂಲ್ಕಿ: ಯಕ್ಷಗಾನ ಕಲೆಯ ಆರಾಧನೆಯೊಂದಿಗೆ ಪೋಷಣೆ ನಿರಂತರವಾಗಿರಲಿ. ವಿನಾಯಕ ಮೇಳಕ್ಕೆ ರಾಜ್ಯ ಪುರಸ್ಕಾರ ಸಿಗಲಿ ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಅವರು ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಸಂಯೋಜನೆಯಲ್ಲಿ ಎರಡು ದಿನಗಳ “ತೈತತಕತ” ಯಕ್ಷಗಾನ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಕ್ಷೇತ್ರ ಕಾರಿಂಜದ ಆಡಳಿತಾಧಿಕಾರಿ ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.
ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿ, ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬಪ್ಪನಾಡು ಲಯನ್ಸ್ ಬಪ್ಪನಾಡು ಇನ್ಸ್ಫಯರ್‌ನ ಉಪಾಧ್ಯಕ್ಷ ಪುಷ್ಪರಾಜ್ ಚೌಟ, ಇನ್ ಪೋಸಿಸ್‌ನ ನರೇಂದ್ರ ಪ್ರಭು ಮಂಗಳೂರು, ಕಿನ್ನಿಗೋಳಿ ವಿಜಯಾ ಕಲಾವಿದರು ತಂಡದ ಅಧ್ಯಕ್ಷ ಶರತ್ ಶೆಟ್ಟಿ ಸಂಕಲಕರಿಯ, ಚಾಮರಾ ಫೌಂಡೇಶನ್‌ನ ರಚನಾ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಅನಂತ ಪದ್ಮನಾಭ, ಮೂಲ್ಕಿ ಎಲ್ ಐಸಿಯ ಪ್ರಬಂಧಕ ಪ್ರಕಾಶ್ ಆಚಾರ್ಯ, ಮೇಳದ ಅಜಿತ್, ಪ್ರೇಮಲತಾ, ಅನ್ವಿತಾ, ರೇಷ್ಮಾ ಜಿ. ಬಂಗೇರ, ಶ್ರೇಯಸ್, ಧನಂಜಯ ಶೆಟ್ಟಿಗಾರ್, ದುರ್ಗಾ ಪ್ರಸಾದ್, ಲೋಹಿತ್, ಯಶೋದಾ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ವಿನಾಯಕ ಯಕ್ಷಕಲಾ ತಂಡದ ಅಧ್ಯಕ್ಷ ಜಯಂತ್ ಅಮೀನ್ ಸ್ವಾಗತಿಸಿ, ಪ್ರಸ್ತಾವನೆಗೈದರು.
ಈ ಸಂದರ್ಭದಲ್ಲಿ ಶ್ರೀ ವಿನಾಯಕ ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಮೆಸ್ಕಾಂನ ಹಿರಿಯ ಇಂಜಿನಿಯರ್ ಬಿ. ರಾಜೇಶ್ ಹಾಗೂ ಬೆಂಗಳೂರಿನ ಕರ್ನಾಟಕ ವಿದ್ಯುತ್ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎಸ್.ಗುರುಮೂರ್ತಿ ಅವರಿಗೆ ನೀಡಿ ಗೌರವಿಸಲಾಯಿತು.
ಕಲಾವಿದರಿಂದ ಸತ್ವಶೈಥಿಲ್ಯ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ಅಭಿಜಿತ್ ಹಾಗೂ ವಾಣಿ ಪರಿಚಯಿಸಿದರು.
ಮಾಲತಿ ಕೃಷ್ಣಮೂರ್ತಿ ವಂದಿಸಿದರು.
ಉಷಾ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.