ಗೋ ಮಾತೆಯ ರಕ್ಷಣೆಗೆ ಕಟಿಬದ್ಧರಾಗೋಣ: ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ (Padebettu – Kemundelu : Gow Pooja program)
ಗೋ ಮಾತೆಯ ರಕ್ಷಣೆಗೆ ಕಟಿಬದ್ಧರಾಗೋಣ: ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ
(Padebettu – Kemundelu) ಪಾದೆಬೆಟ್ಟು – ಕೆಮುಂಡೇಲು: ಅಮ್ಮನ ಬಳಿಕ ಸ್ಥಾನ ಗೋ ಮಾತೆಗೆ ನೀಡುತ್ತೇವೆ̤ ಕಾರಣ ಅಮ್ಮನ ಎದೆ ಹಾಲಿನಷ್ಟೇ ಪರಿಶುದ್ಧವಾದ ಹಾಲನ್ನು ನಮ್ಮ ಬದುಕಿಗಾಗಿ ನೀಡುವುದು ಗೋ ಮಾತೆ. ಆ ಅಮ್ಮನ ಪ್ರತಿರೂಪ ಗೋ ಮಾತೆ ಇದೀಗ ಸಂಕಷ್ಟದಲ್ಲಿದ್ದು, ಆಕೆಯ ರಕ್ಷಣೆಗಾಗಿ ನಾವೆಲ್ಲ ಕಟಿಬದ್ಧರಾಗ ಬೇಕಾಗಿದೆ ಎಂದು ವಾಗ್ಮಿ, ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ ಹೇಳಿದ್ದಾರೆ.
ಅವರು ಕೆಮ್ಮುಂಡೇಲಿನಲ್ಲಿ ವಿಷ್ಣುಮೂರ್ತಿ ಗೋರಕ್ಷಣಾ ಸಮಿತಿ ಆಯೋಜಿಸಿದ ಸಾರ್ವಜನಿಕ ಗೋ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದನಕಳ್ಳರ ಬಗ್ಗೆ ಕಾರ್ಯಚರಿಸಿದರೆ ಪೊಲೀಸರು ನಮ್ಮ ಸಂಘಟನೆಯ ಸದಸ್ಯರನ್ನೇ ಆರೋಪಿಗಳಾಗಿ ನೋಡುತ್ತಾರೆ. ನಮ್ಮ ಗಮನಕ್ಕೆ ತನ್ನಿ ನಾವು ಅವರನ್ನು ಹಿಡಿಯುತ್ತೇವೆ ಎನ್ನುತ್ತಾರೆ. ಮಾಹಿತಿ ನೀಡಿದರೆ ಅವರೊಂದಿಗೆ ಕೆಲ ಪೊಲೀಸರು ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ಅವರು ವ್ಯಂಗವಾಡಿದ್ದಾರೆ.
ಕರುವೊಂದು ದನ ಕಳ್ಳರ ಕೈಯಿಂದ ತಪ್ಪಿಸಿಕೊಂಡು ಪಣಿಯೂರಿನ ಮೋಹನ್ ದಾಸ್ ಎಂಬರಿಗೆ ಸಿಕ್ಕಿ ಅವರ ಆರೈಕೆಯಲ್ಲಿ “ವಿಷ್ಣುಮೂರ್ತಿ ” ಹೆಸರಲ್ಲಿ ಬೆಳೆದ ಆ ಹೋರಿಯ ಹೆಸರಲ್ಲೇ ಗೋ ರಕ್ಷಣೆಗಾಗಿ ಸಂಸ್ಥೆಯೊಂದನ್ನು ಹುಟ್ಟುಹಾಕಲಾಗಿದೆ. ಇದೀಗ ಗೋ ಪೂಜೆಯ ಸಂದರ್ಭ ವಿಷ್ಣುಮೂರ್ತಿ ಹೆಸರಿನ ಆ ಹೋರಿಯನ್ನು ಗಣ್ಯರು ಸನ್ಮಾನಿಸುವ ವಿಶೇಷ ಕಾರ್ಯಕ್ರಮ ಜನರಲ್ಲಿ ಗೋ ಪ್ರೇಮವನ್ನು ಬಡಿದೆಬ್ಬಿಸಿದೆ.
ಗಣ್ಯರು ದೀಪ ಬೆಳಗಿಸಿ ಭಾರತ ಮಾತೆ ಹಾಗೂ ಶಿವಾಜಿ ಮಹಾರಾಜರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಗೋವು ಪೂಜೆಯ ಧಾರ್ಮಿಕ ವಿಧಿ ವಿಧಾನವನ್ನು ರಾಘವೇಂದ್ರ ಭಟ್ ನಿರ್ವಹಿಸಿದ್ದು, ಮೂವತ್ತಕ್ಕೂ ಅಧಿಕ ಗೋವುಗಳಗೆ ಈ ಸಂದರ್ಭ ಪೂಜೆ ಸಲ್ಲಿಸಲಾಯಿತು.
ಸಭಾಧ್ಯಕ್ಷತೆಯನ್ನು ದಿನೇಶ್ ಕುಲಾಲ್ ಉಳ್ಳೂರು ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಯಶವಂತ ಶೆಟ್ಟಿ, ಪ್ರತೀಕ್ ಕೋಟ್ಯಾನ್, ರಾಜೇಶ್ ಉಚ್ಚಿಲ, ರಾಜೇಂದ್ರ ಶೆಣೈ, ರಿತೇಶ್ ದೇವಾಡಿಗ, ಸಂದೇಶ್ ಶೆಟ್ಟಿ, ಪ್ರಸಾದ್ ಅಂಚನ್, ಮಮತಾ ಭಂಡಾರಿ, ಶೋಭಾ ಶೆಟ್ಟಿ, ಯೋಗೀಶ್ ಉಳ್ಳೂರು, ಶೋಭಾ ಶೆಟ್ಟಿ ಎಲ್ಲೂರು ಮುಂತಾದವರು ಉಪಸ್ಥಿತರಿದ್ದರು.
ಮಾತೃ ಸಂಸ್ಥೆಯ ಅಧ್ಯಕ್ಷ ಮೋಹನ್ ದಾಸ್ ಕೋಟ್ಯಾನ್ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.