ಪಡುಬಿದ್ರಿ ದೇಗುಲದಲ್ಲಿ ಕಾಪು ಹೊಸ ಮಾರಿಗುಡಿಯ ಬ್ರಹ್ಮಕಲಶೋತ್ಸವ, ನವದುರ್ಗಾ ಲೇಖನ ಮಾಹಿತಿ (Kaup Hosa marigudi Brahma kalashothsava, Navadurga Lekhana information at Padubidri Temple)
ಪಡುಬಿದ್ರಿ ದೇಗುಲದಲ್ಲಿ ಕಾಪು ಹೊಸ ಮಾರಿಗುಡಿಯ ಬ್ರಹ್ಮಕಲಶೋತ್ಸವ, ನವದುರ್ಗಾ ಲೇಖನ ಮಾಹಿತಿ
PHOTO CREDIT: RAVI DIGITALS PADUBIDRI.
(Padubidri) ಪಡುಬಿದ್ರಿ: ಕಾಪು ಶ್ರೀ ಹೊಸ ಮಾರಿಗುಡಿಯ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪಡುಬಿದ್ರಿ ವ್ಯಾಪ್ತಿಯ ಎಲ್ಲಾ ಸಮುದಾಯದ ವತಿಯಿಂದ ಪಡುಬಿದ್ರಿ ಶೃೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ಜರಗಿದ ಪೂರ್ವಭಾವಿ ಸಭೆಯನ್ನು 9 ಸಮುದಾಯದ 9 ಜನ ಮಹಿಳೆಯರು 9 ನವದುರ್ಗ ದೀಪವನ್ನು ಬೆಳಗಿಸಿ ಉದ್ಘಾಟಿಸಿದರು.
ಮಾಜಿ ಶಾಸಕ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷರಾದ ಕೆ. ರಘುಪತಿ ಭಟ್ ಅವರು ನವದುರ್ಗಾ ಲೇಖನ ಯಜ್ಞದ ಕುರಿತು ಸಂಪೂರ್ಣ ವಿವರಣೆ ನೀಡಿ, ಈ ಯಜ್ಞದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯದರ್ಶಿ ಯೋಗಿಶ್ ಶೆಟ್ಟಿಯವರು ಕಾಪು ಶ್ರೀ ಹೊಸ ಮಾರಿಗುಡಿಯ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ವೈ. ಶಶಿಧರ್ ಶೆಟ್ಟಿ, ವಿಶು ಕುಮಾರ್ ಶೆಟ್ಟಿಬಾಲ್, ವೈ ಸುಧೀರ್ ಕುಮಾರ್, ವಿಷ್ಣುಮೂರ್ತಿ, ಶಶಿಕಾಂತ್ ಪಡುಬಿದ್ರಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಸಂಪತ್ ಕುಮಾರ್, ಸುಕುಮಾರ್ ಶ್ರೀಯಾನ್, ಸುಧಾಕರ್ ಮಡಿವಾಳ, ಭರತ್ ದೇವಾಡಿಗ, ಮುಂಡಾಳ ಗೊಡ್ಡ ಸಮಾಜದ ಪ್ರಮುಖರು, ಅರುಣ್ ಶೆಟ್ಟಿ ಪಾದೂರು, ಶೇಖರ ಶೆಟ್ಟಿ ಕಲ್ಯ, ಪ್ರಭಾಸ್ ಶೆಟ್ಟಿ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ವಿಶ್ವನಾಥ ಕಾಪು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಅನಿತಾ ವಿಶು ಕುಮಾರ್ ಪ್ರಾರ್ಥಿಸಿದರು. ಹೊಸಮಾರಿಗುಡಿ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ, ಬ್ರಹ್ಮಕಲಶೋತ್ಸವದ ಬಗ್ಗೆ ವಿವರಿಸಿದರು. ಮುರಳಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.