ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ; ಸಾಧಕರಿಗೆ ಗೌರವ (Moolki Yuvavahini Organize 22nd Tuluvere Thudara Parba)
ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ; ಸಾಧಕರಿಗೆ ಗೌರವ
(Moolki) ಮೂಲ್ಕಿ: ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ ಕಾರ್ಯಕ್ರಮ ಭಾನುವಾರ ಸಂಜೆ ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಅವರು ಮಾತನಾಡಿ, ಹಿಂದಿನ ಕಾಲದ ತುಳುವೆರೆ ತುಡರ ಪರ್ಬದ ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಮೂಲ್ಕಿ ಯುವವಾಹಿನಿ ಘಟಕ ನಡೆಸಿಕೊಂಡು ಹೋಗುತ್ತಿರುವ ಕಾರ್ಯ ಅಭಿನಂದನೀಯ. ಇದು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷ ರಿತೇಶ್ ಮೂಲ್ಕಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಮನೋ ವೈದ್ಯಕೀಯ ಸಮಾಲೋಚಕ ಎಸ್.ಕೆ. ಶ್ರೀಪತಿ ಭಟ್, ಪೋಸ್ಟ್ ಮಾಸ್ತರ್ ಮೊಹಮ್ಮದ್ ಸಲೀಂ ಕೆಂಪುಗುಡ್ಡೆ, ನಿವೃತ್ತ ಮುಖ್ಯ ಶಿಕ್ಷಕ ಪ್ರಾನ್ಸಿಸ್ ಡಿ ಕುನ್ಹ ಕಾರ್ನಾಡ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಕಾರ್ಯಕ್ರಮದ ನಿರ್ದೇಶಕರಾದ ರಾಜೇಶ್ವರಿ ನಿತ್ಯಾನಂದ, ವಿನಯ ವಿಶ್ವನಾಥ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೈವರಾಧಕ, ಸಮಾಜ ಸೇವಕ ಕೃಷ್ಣಪ್ಪ ಎಸ್. ಸನಿಲ್‌ರವರನ್ನು ಗೌರವಿಸಲಾಯಿತು.
ರಿತೇಶ್ ಅಂಚನ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಮೋಹನ್ ಸುವರ್ಣ ಪ್ರಸ್ತಾವಿಸಿದರು. ಉದಯ ಅಮೀನ್ ಮಟ್ಟು ನಿರೂಪಿಸಿದರು. ಲತೀಶ್ ಕಾರ್ನಾಡ್ ವಂದಿಸಿದರು.
ಬಳಿಕ ಗೂಡು ದೀಪ ಸ್ಪರ್ಧೆ, ರಂಗೋಲಿ ಸ್ಪರ್ಧೆ,
ಗೋ ಪೂಜೆ, ಬಲೀಂದ್ರ ಪೂಜೆ, ತಿಬಿಲ-ಸಾನಾದಿಯ ಬೆಳಕಿನ ಹಬ್ಬ, ಶಿಕ್ಷಣಕ್ಕೆ ಆರ್ಥಿಕ ಸಹಾಯ, ಘಟಕದ ಸದಸ್ಯರಿಂದ ಗಟ್ಟಿ ಅವಲಕ್ಕಿಯ ತಮ್ಮನ ನಡೆಯಿತು.