ಎಡನೀರು ಮಠಕ್ಕೆ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಭೇಟಿ, ಸ್ವಾಮೀಜಿಯವರಿಗೆ ಬೆಂಬಲ (Laxminarayana Asranna, the priest of Kateelu Temple visited Edaneeru Matt and Supported Swamiji)
ಎಡನೀರು ಮಠಕ್ಕೆ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಭೇಟಿ, ಸ್ವಾಮೀಜಿಯವರಿಗೆ ಬೆಂಬಲ
(Moolki) ಮೂಲ್ಕಿ: ಸುಮಾರು 400 ವರ್ಷಗಳ ಇತಿಹಾಸವಿರುವ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿ ರವರ ಕಾರುತಡೆದು ದುಷ್ಕರ್ಮಿಗಳಿಂದ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಎಡನೀರು ಮಠಕ್ಕೆ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಸಹಿತ ಗಣ್ಯರು ಭೇಟಿ ನೀಡಿ ಶ್ರೀ ಸ್ವಾಮೀಜಿಯವರಿಗೆ ಸಾಂತ್ವನ ಹೇಳಿ ಬೆಂಬಲ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಠದ ಸ್ವಾಮೀಜಿಯವರು ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಲಕ್ಷ್ಮಿ ನಾರಾಯಣ ಆಸ್ರಣ್ಣ ಘಟನೆಯ ಕೃತ್ಯವನ್ನು ಖಂಡಿಸಿ, ಶಾಂತಿಸುವ ಸುವ್ಯವಸ್ಥೆ ಕಾಪಾಡುವಲ್ಲಿ ಭಕ್ತರು ನಿಮ್ಮ ಜೊತೆಗೆ ಇದ್ದಾರೆ ಎಂದು ಧೈರ್ಯ ತುಂಬಿದರು.
ಈ ಸಂದರ್ಭ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುನಾಭಿರಾಮ ಉಡುಪ, ಪತ್ರಕರ್ತ ಪುನೀತ್ ಕೃಷ್ಣ ಮೂಲ್ಕಿ, ಸುಂದರ ಪುನರೂರು ಮತ್ತಿತರರು ಉಪಸ್ಥಿತರಿದ್ದರು.