# Tags
#ಅಪರಾಧ

 ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಚಿನ್ನಾಭರಣಗಳ ಸಮೇತ  ಕಳ್ಳನನ್ನು ಬಂಧಿಸಿದ ಮೂಲ್ಕಿ ಪೊಲೀಸರು (The Mulki Police arrested the thief with the gold ornaments within a few hours of the theft)

ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಚಿನ್ನಾಭರಣಗಳ ಸಮೇತ  ಕಳ್ಳನನ್ನು ಬಂಧಿಸಿದ ಮೂಲ್ಕಿ ಪೊಲೀಸರು 

(Mulki) ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿ ಎಂಬಲ್ಲಿ ಮನೆಯೊಂದರಿಂದ ಕಳ್ಳತನ ಮಾಡಿದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿ ಆರೋಪಿಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ 

 ಆರೋಪಿಯನ್ನು ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕು ದೇವರಹಿಪ್ಪರಗಿ ಮಣ್ಣೂರು  ನಿವಾಸಿ, ಮೂಲ್ಕಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಮಲ್ಲಿಕಾರ್ಜುನ ಮಠದ ಬಳಿ ವಾಸ್ತವ್ಯವಿರುವ ಅರುಣ್(20) ಗುರುತಿಸಲಾಗಿದೆ.

 ಆರೋಪಿ ಅರುಣ್ ನ. 6ರಂದು ಹಗಲು ವೇಳೆ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿ ಯಲ್ಲಿ ವಾಸ್ತವ್ಯವಿರುವ ಮಲ್ಲಮ್ಮವರ ಮನೆಯ ಹಿಂಭಾಗಲಿನ ಬೀಗ ಒಡೆದು ಮನೆಯ ಒಳಗಿದ್ದ ಸುಮಾರು 64.200 ಗ್ರಾಂ ತೂಕದ ಚಿನ್ನಾಭರಣಗಳನ್ನು (ಮೌಲ್ಯ 2,56,000)ಕಳವು ಮಾಡಿದ ಬಗ್ಗೆ ಮಲ್ಲಮ್ಮ ನೀಡಿದ ದೂರಿನಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಈ ಬಗ್ಗೆ ಕೂಡಲೇ ಕಾರ್ಯಾಚರಣೆ ನಡೆಸಿದ ಮೂಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾಧರ್ ಡಿ ನೇತೃತ್ವದಲ್ಲಿ ಕೆಲವೇ ಗಂಟೆಗಳಲ್ಲಿ ಆರೋಪಿ ಅರುಣ್‌ನನ್ನುಚಿನ್ನಾಭರಣಗಳ ಸಮೇತ ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2