ಕಾಪು ಪತ್ರಕರ್ತರ ಸಂಘದಲ್ಲಿ ದೀಪಾವಳಿ ಆಚರಣೆ (Deepavali Celebration at Kaup Press Club)
ಕಾಪು ಪತ್ರಕರ್ತರ ಸಂಘದಲ್ಲಿ ದೀಪಾವಳಿ ಆಚರಣೆ
(Kaup) ಕಾಪು : ಉತ್ತಮ ವಿಚಾರಗಳನ್ನು ಸಮಾಜಕ್ಕೆ ನೀಡುವ ಪತ್ರಕರ್ತರು, ಸಮೃದ್ಧ ಕಾಪು ಸಾಮರಸ್ಯದ ಕಾಪುವನ್ನಾಗಿಸುವ ನಿಟ್ಟಿನಲ್ಲಿ ಕೈ ಜೋಡಿಸಿರಿ. ದೀಪಾವಳಿ ಆಚರಣೆಗೆ ಕುಟುಂಬ ಸದಸ್ಯರೊಂದಿಗೆ ಒಗ್ಗೂಡಿಕೊಂಡ ನಿಮ್ಮ ಐಕ್ಯಮತ ಸಮಾಜಕ್ಕೂ ಮಾದರಿಯಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಕಾಪು ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ದೀಪಾವಳಿ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಪು ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ತಂತ್ರಿಗಳಾದ ಮಡಂಬು ಶ್ರೀನಿವಾಸ ತಂತ್ರಿ ದೀಪ ಬೆಳಗಿಸಿ, ಹಣತೆಯನ್ನು ಹಚ್ಚಿ ದೀಪಾವಳಿ ಸಂದೇಶವನ್ನು ನೀಡಿದರು.
ಬಿಕ್ಕೋ ಮಾಲೀಕ ಶ್ರೀಧರ ಶೇಣವ ಕಾಪು ಅವರು ಹೊಸತನದೊಂದಿಗೆ ಪತ್ರಕರ್ತರ ದೀಪಾವಳಿ ಆಚರಣೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದೀಪಕ್ ಎರ್ಮಾಳು, ನವೀನ್ ಎನ್ ಶೆಟ್ಟಿ, ಡಾ. ಮನೋಜ್ ಕುಮಾರ್ ಶೆಟ್ಟಿ ದೀಪಾವಳಿಯ ಸಂದೇಶ ನೀಡಿದರು.
ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಆರ್. ಪೂಜಾರಿ ಉಚ್ಚಿಲ, ಕಾಪು ತಾಲೂಕು ಸಂಘದ ಕಾರ್ಯದರ್ಶಿ ಸಂತೋಷ್ ನಾಯ್ಕ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ ವೇದಿಕೆಯಲ್ಲಿದ್ದರು.
ಪ್ರಕಾಶ್ ಸುವರ್ಣ ಕಟಪಾಡಿ ನಿರೂಪಿಸಿದರು.