ಕಾಪು ಬಿಜೆಪಿಯಿಂದ ಕಾಪು ಪೇಟೆಯಲ್ಲಿ ರಾಜ್ಯ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆ (Massive protest by Kaup BJP against State Congress Govt. in Kaup Town)
ಕಾಪು ಬಿಜೆಪಿಯಿಂದ ಕಾಪು ಪೇಟೆಯಲ್ಲಿ ರಾಜ್ಯ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆ
(Kaup) ಕಾಪು: ಕಾಪು ಬಿಜೆಪಿಯಿಂದ ಕಾಪು ಪೇಟೆಯಲ್ಲಿ ರಾಜ್ಯದಲ್ಲಿ ಗದ್ದಲವೆಬ್ಬಿಸಿರುವ ವಕ್ಫ್ ಬೋರ್ಡ್ ಆಸ್ತಿ ಕಬಳಿಕೆಯ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಪು ಮಂಡಲ ಬಿಜೆಪಿ ವತಿಯಿಂದ ಬುಧವಾರ ಸಂಜೆ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಚಿವ ಜಹೀರ್ ಅಹಮ್ಮದ್ ಕುತಂತ್ರದಿಂದಾಗಿ ಈ ಗೊಂದಲ ಉಂಟಾಗಿದೆ. ಮಠ ದೇವಸ್ಥಾನಗಳ ಆಸ್ತಿ ಕಬಳಿಕೆ ಮಾಡುತ್ತಿರುವ ವಕ್ಪ್ ಬೋರ್ಡ್, ಸರಕಾರದ ಕುಮ್ಮಕ್ಕಿನಿಂದ ನೋಟೀಸು ನೀಡಿದೆ. ಜನರ ಆಸ್ತಿ ಕಬಳಿಕೆಗೆ ಯಾವತ್ತೂ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಬಿಜೆಪಿ ಮುಖಂಡ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನಾಕಾರರು ಕಾಪು ತಾಲೂಕು ಆಡಳಿತ ಸೌಧದವೆರೆಗೆ ಕಾಲ್ನಡಿಗೆಯಲ್ಲಿ ತೆರಳಿ ಕಾಪು ತಹಶಿಲ್ದಾರ್ ಕಛೇರಿಯಲ್ಲಿ ಮನವಿ ಸಲ್ಲಿಸಿದರು.
ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಮಾಜಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾರ್ಯದರ್ಶಿ ಗೋಪಾಲ ಕೃಷ್ಣ ರಾವ್, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಿಜೆಪಿ ಮುಖಂಡರುಗಳಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ಶ್ಯಾಮಲಾ ಕುಂದರ್, ವಿಜಯಕುಮಾರ್ ಉದ್ಯಾವರ, ರೇಷ್ಮಾ ಉದಯ ಶೆಟ್ಟಿ, ಶರಣ್ ಮಟ್ಟು, ನೀತಾ ಗುರುರಾಜ್, ಸುಮಾ ಉದಯ ಶೆಟ್ಟಿ, ಸುಧಾಮ ಶೆಟ್ಟಿ ,ಕುತ್ಯಾರು ಪ್ರಸಾದ್ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ರವಿ ಸಾಲ್ಯಾನ್ ಉದ್ಯಾವರ, ಸಂದೀಪ್ ಶೆಟ್ಟಿ ಕಲ್ಯ, ನವೀನ್ ಎಸ್.ಕೆ, ಅನಿಲ್ ಕುಮಾರ್ ಶಿವಪ್ರಸಾದ್ ಶೆಟ್ಟಿ ಎರ್ಮಾಳು, ಪ್ರವೀಣ್ ಕುಮಾರ್, ಸುಭಾಸ್ ಬಲ್ಲಾಳ್, ಮಿಥುನ್ ಹೆಗ್ಡೆ, ಕೃಷ್ಣ ರಾವ್ ಕರಂದಾಡಿ ಮತ್ತಿರರು ಉಪಸ್ಥಿತರಿದ್ದರು.