# Tags
#ಅಪರಾಧ

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಕಳ್ಳರ ಲಗ್ಗೆ (Tumbe Sri Mahalingeshwara Temple has been attacked by thieves)

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಕಳ್ಳರ ಲಗ್ಗೆ

(Bantwala) ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಪಕ್ಕದ  ಫರಂಗಿಪೇಟೆ ಶ್ರೀ ದೇವಕಿಕೃಷ್ಣ ರವಳನಾಥ ದೇವಸ್ಥಾನದಲ್ಲಿ‌ಸೋಮವಾರ ಬೆಳಗ್ಗಿನ ಜಾವ ಕಳವು‌ ಕೃತ್ಯ ನಡೆದ 24 ತಾಸು ಕಳೆಯುವ ಮೊದಲೇ ಮಂಗಳವಾರ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.
 ದೇವಸ್ಥಾನದ ಮುಂಬಾಗಿಲಿನ ಬೀಗ ಹಾಕಿದ ಸ್ಥಿತಿಯಲ್ಲಿರುವಂತೆ ಚಿಲಕ ಮುರಿದು ಒಳಗೆ ಪ್ರವೇಶಿಸಿರುವ ಕಳ್ಳರು, ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
 ದೇವಸ್ಥಾನದ ಕಛೇರಿಯಲ್ಲಿರಿಸಿದ್ದ ಸುಮಾರು ಒಂದುವರೆ ಕೆ.ಜಿ ತೂಕದ  ದೇವರ ಬೆಳ್ಳಿಯ ಜಲ ದ್ರೋಣವನ್ನು ಗೊದ್ರೇಜ್, ಕ್ಯಾಶ್ ಡ್ರಾಯರ್ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 50 ಸಾವಿರದಷ್ಟು ಹಣವನ್ನು ಕಳವುಗೈಯಲಾಗಿದೆ.
 ದೇವಸ್ಥಾನದ ಸುತ್ತಲು ಸಿ.ಸಿ‌. ಕ್ಯಾಮರಾ ಅಳವಡಿಸಲಾಗಿದೆಯಾದರೂ, ಕಳ್ಳರು ದೇವಸ್ಥಾನದ ಕಚೇರಿಗೂ ನುಗ್ಗಿ ಕ್ಯಾಮರಾ ಡಿ.ವಿ‌.ಆರ್ ಎಗರಿಸಿದ್ದು, ಇದರಿಂದಾಗಿ ‌ಕಳ್ಳರ ಕುರುಹ ಪತ್ತೆ ಹಚ್ಚಲು ಪೊಲೀಸರಿಗೆ  ಹಿನ್ನಡೆಯಾಗಿದೆ.
 ಸೋಮವಾರ ಮುಂಜಾನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಶ್ರೀ ದೇವಕಿ‌ಕೃಷ್ಣ ರವಳನಾಥ ದೇವಸ್ಥಾನದಲ್ಲಿ ಕಳವು ನಡೆಯುವುದನ್ನು ಸ್ವತಃ ಅಲ್ಲಿನ ಅರ್ಚಕರು ಸಿ.ಸಿ. ಕ್ಯಾಮರಾದ ಮೂಲಕ ಮುಸುಕುಧಾರಿ ಕಳ್ಳರ ಎಲ್ಲಾ ಕೃತ್ಯಗಳನ್ನು ಗಮನಿಸಿದ್ದಾರೆ. ಕಳ್ಳರ ಕೈಯಲ್ಲಿ ಮಾರಕಾಸ್ತ್ರಗಳಿದ್ದುರಿಂದ ಅವರು ಮನೆಯಿಂದ ಹೊರಗೆ ಬರಲು ಧೈರ್ಯ ಮಾಡಿರಲಿಲ್ಲ. ಆದರೆ ತುಂಬೆ ದೇವಸ್ಥಾನದಲ್ಲಿದ್ದ ಸಿಸಿ ಕ್ಯಾಮರದ ಡಿವಿಆರ್ ನ್ನೇ ಹೊತ್ತಯ್ದದ್ದರಿಂದ ಕಳವಿನಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಗೊತ್ತಾಗಿಲ್ಲ.
ದೇವಸ್ಥಾನದ ಸಿಬ್ಬಂದಿಯೊರ್ವರು ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಬಂದಾಗ ಕಳವು ಕೃತ್ಯ ಬಯಲಿಗೆ ಬಂದಿದೆ.

  ದೇವಳದ ಮುಂಬಾಗಿಲು ಚಿಲಕ ಮುರಿದು ಬಾಗಿಲು ತೆರೆದಿದ್ದ ಸ್ಥಿತಿಯಲ್ಲಿದ್ದು, ಅನುಮಾನಗೊಂಡ ಅವರು ತಕ್ಷಣ ದೇವಸ್ಥಾನದ ಸೇವಾ ಸಮಿತಿಯ ಗೌರವಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆಯವರಿಗೆ ಮಾಹಿತಿ‌ ನೀಡಿದ್ದಾರೆ.
 ಅವರು ಸ್ಥಳಕ್ಕಾಗಮಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ‌.

ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ‌. ಹರೀಶ್ ಮತ್ತವರ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ತನಿಖೆ ನಡೆಸಲಾಗಿದೆ.
ಎರಡು ದಿನಗಳಲ್ಲಿ‌ಕೆಲವೇ ಕಿ.ಮೀ. ಅಂತರದಲ್ಲಿ ಪ್ರತ್ಯೇಕ ಎರಡು ‌ದೇವಾಲಯದಲ್ಲಿ‌ ನಡೆದ ಕಳವು ಪ್ರಕರಣ ಸ್ಥಳೀಯವಾಗಿ‌ ಜನರಲ್ಲಿ ಆತಂಕವನ್ನುಂಟುಮಾಡಿದೆ.

 ಇದೇ ವರ್ಷದ ಫೆಬ್ರವರಿ ‌ತಿಂಗಳಲ್ಲಿ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆದಿತ್ತು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2